ಡಾ. ಲಕ್ಷ್ಮಣ ಕೌ0ಟೆ ಅವರ “ಅವಿಶ್ರಾಂತ” ಕಾದಂಬರಿ ಪರಿಚಯ

0
172

ಆತ್ಮೀಯರೆ ನಮಸ್ಕಾರ,

“ಅವಿಶ್ರಾಂತ ” ನನ್ನ ನೆಚ್ಚಿನ ಬರಹಗಾರರಾದ  ಡಾ. ಲಕ್ಷ್ಮಣ ಕೌ0ಟೆ ಅವರು ಭಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರ ಜೀವನವನ್ನಾಧಾರಿಸಿ ರಚಿಸಿದ ಚಾರಿತ್ರಿಕ ಕಾದಂಬರಿಯಾಗಿದೆ. 2015 ರಲ್ಲಿ ನಾಡಿನ ಪ್ರತಿಷ್ಠಿತ ಪ್ರಕಾಶನಗಳಲ್ಲೊ0ದಾದ ಬಳ್ಳಾರಿಯ ಚನ್ನಬಸಣ್ಣ ಅವರು ತಮ್ಮ  ಲೋಹಿಯಾ ಪ್ರಕಾಶನದಡಿಯಲ್ಲಿ ಈ ಕೃತಿಯನ್ನು ಪ್ರಕಟಗೊಳಿಸಿದ್ದಾರೆ . .ಒಟ್ಟು 386 ಪುಟಗಳಿಂದ ಕೂಡಿದ ಈ ಕೃತಿಯ ಮುಖ ಬೆಲೆ -200/ -ರೂಪಾಯಿಗಳಿರುತ್ತದೆ.

Contact Your\'s Advertisement; 9902492681

ಡಾ. ಲಕ್ಷ್ಮಣ. ಕೌ0ಟೆ ಅವರು ಸಮಕಾಲೀನ ಕನ್ನಡ ಸಾಹಿತ್ಯದ  ಅತ್ಯಂತ ಪ್ರತಿಭಾನ್ವಿತ ಬರಹಗಾರರಲ್ಲಿ ಒಬ್ಬರು;  ಶಿಸ್ತು, ಶ್ರದ್ಧೆ, ಆಳವಾದ ಅಧ್ಯಯನ ಮತ್ತು  ಅನುಭವದ  ಮೂಲಕ  ಉರಿಯುತ್ತಿರುವ ಕಲಬುರಗಿಯ ಬಿರು ಬಿಸಿಲಿನಲ್ಲೂ ಅಲೆದಾಡುತ್ತ  ಅನನ್ಯ ಸಾಮಾಜಿಕ ಕಾಳಜಿ, ಚಾರಿತ್ರಿಕ ಮತ್ತು  ಐತಿಹಾಸಿಕ ಮಹತ್ವದ ಸಂಗತಿ  ಆಧಾರಿತ ಮೌಲಿಕ ಕಾದಂಬರಿಗಳನ್ನು  ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಡಾ. ಕೌ0ಟೆ ಅವರ ಕಾದಂಬರಿಗಳಲ್ಲಿ ಭಾಷೆ ಮತ್ತು ಬದುಕು ಒಂದಾಗಿ ಕಟ್ಟಿಕೊಡುವ ಕಲಾತ್ಮಕ ವಿನ್ಯಾಸ  ಅನನ್ಯವಾದದ್ದು. ..

ಪ್ರಸ್ತುತ ” ಅವಿಶ್ರಾಂತ “ಕಾದಂಬರಿ ಡಾ. ಲಕ್ಷ್ಮಣ ಕೌ0ಟೆಯವರ ಸೃಜನಶೀಲ ಶಿಖರ. . ಈ ಕಾದಂಬರಿ ಮುಖಾಂತರ ಕೌ0ಟೆಯವರು ಕನ್ನಡ ಕಾದಂಬರಿ ಜಗತ್ತಿನಲ್ಲಿ sense of history ಯನ್ನು ಬಲಗೊಳಿಸಿದ್ದಾರೆ. .ಬಸವ ತತ್ವದ ಪ್ರಸಾರಕರು,  ಶಿಕ್ಷಣ , ಸಾಹಿತ್ಯ ಪ್ರೇಮಿಗಳು, ಅನಾಥ ಮಕ್ಕಳ ಪೋಷಕರು, ಬಸವ ಕಲ್ಯಾಣ  ಅನುಭವ ಮಂಟಪದ  ಅಧ್ಯಕ್ಷರು,

ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯರಾದ ಡಾ. ಬಸವಲಿಂಗ ಪಟ್ಟದ್ದೇವರು  ಈ ಕೃತಿಗೆ  ಸಂದೇಶ ನುಡಿ ಬರೆದಿರುವರು . ನಾಡಿನ ಪ್ರಸಿದ್ಧ ಬರಹಗಾರರ ದಿ. ಪ್ರೊ. ವೀರೇಂದ್ರ ಸಿ0ಪಿಯವರು ಕೃತಿಗೆ ಮುನ್ನುಡಿಯ ತೋರಣ ಕಟ್ಟಿದ್ದಾರೆ. ..

ಡಾ ಚನ್ನಬಸವ ಪಟ್ಟದ್ದೇವರು ಕನ್ನಡದ ಪಟ್ಟದ್ದೇವರು ಎ0ದು ನಾಡಿಗೆ ಪರಿಚಿತರಾದವರು. ಇವರು ಮಾಡಿದ ಸಮಾಜೋ -ಧಾರ್ಮಿಕ  ಕಾರ್ಯ  ಇಂದಿಗೂ ಈ ಭಾಗದ ಜನರ ಹೃದಯದಲ್ಲಿ ಉಸಿರಾಗಿ, ಹಸಿರಾಗಿ ಉಳಿದಿದೆ …ಪೂಜ್ಯ ಗುರುವಿನ ನೆನೆದು ತಮ್ಮ ದಿನದ ಕಾಯಕ ಆರಂಭಿಸುವ ಜೀವಿಗಳು ಸಾಕಷ್ಟು ಜನ ಸಿಗುತ್ತಾರೆ.

“ಅವಿಶ್ರಾಂತ “ಕೃತಿ ಕಾದಂಬರಿ  ಅಲ್ಲ;  ಇದೊಂದು ಮಹಾನ್ ಶರಣ ಜೀವಿಯ, ಮಾಹಾಪುರುಷನ, ಸತ್ಯ ಶರಣನ, ಕಾಯಕ ಜೀವಿಯ, ವೈಚಾರಿಕ, ವೈಜ್ಞಾನಿಕ ಮತ್ತು ಪ್ರಗತಿಪರ ಸಾಮಾಜಿಕ ನಿಲುವಿನ, ದಲಿತ ಬಂಧುವಿನ, ಶಿಕ್ಷಣ ಪ್ರೇಮಿಯ, ಸಮಾಜದೊಳಗಿದ್ದು ಅದರ  ಏಳಿಗೆಗೆ ಹಗಲಿರುಳು ಶ್ರಮಿಸಿದ ಪೂಜ್ಯ ಗುರುವಿನ ಜೀವನ ಚರಿತ್ರೆಯಾಗಿದೆ. . ಭಾಲ್ಕಿ ಹಿರೇಮಠ ಸಂಸ್ಥಾನದ  ಇತಿಹಾಸ ಮತ್ತು ಪರಂಪರೆಯನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವ ಕಾದಂಬರಿಕಾರರು ಈ ಕೃತಿಗೆ ಬಳಸಿರುವ ಭಾಷೆ, ತಂತ್ರ, ನಿರೂಪಣಾ ಶೈಲಿ -ಎಲ್ಲದರಲ್ಲೂ ಯಶಸ್ವಿಯಾಗಿದೆ. ..ಕಾದಂಬರಿಯನ್ನು ಓದುತ್ತ ಓದುತ್ತ ಸಾಗಿದಂತೆ ಇಲ್ಲಿಯ ಪಾತ್ರಗಳು, ಸನ್ನಿವೇಶಗಳು, ಘಟನೆಗಳು ಓದುಗನೊಡನೆ ಸಂಭಾಷಣೆ ಮಾಡಿದ ಗಾಢ  ಅನುಭವ  ಉ0ಟಾಗುತ್ತದೆ. .ಹಾಗೆಯೇ  ಈ ಪ್ರದೇಶದ ಜನಜೀವನ ಕಣ್ಣೆದುರೇ ಬಂದು ನಿಲ್ಲುತ್ತದೆ..ಈ ಕಾದಂಬರಿ ಕೇವಲ ಭಾಲ್ಕಿ ಹಿರೇಮಠ ಸಂಸ್ಥಾನದ ಇತಿಹಾಸ ಮತ್ತು ಪೂಜ್ಯರ ಚರಿತ್ರೆಯನ್ನು ತಿಳಿಸದೆ ಇಡೀ  ಈ ಪ್ರದೇಶದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ರಂಗದಲ್ಲಿಯ ಸ್ಥಿತಿಗತಿಯ ಮೇಲೂ ಬೆಳಕು ಚೆಲ್ಲಿದೆ. ಡಾ  . ಲಕ್ಷ್ಮಣ ಕೌ0ಟೆ ಅವರು ರಚಿಸಿದ “ಅವಿಶ್ರಾಂತ “ಕೃತಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜೀವನ ಚರಿತ್ರೆ  ಆಧಾರಿತ  ಅತ್ಯಂತ ವಿಶಿಷ್ಟ ಕಾದಂಬರಿಯಾಗಿ ಸೇರ್ಪಡೆಯಾಗಿದೆ. ..

ಕೊನೆಯ ಮಾತು,

ಡಾ. ಲಕ್ಷ್ಮಣ ಕೌ0ಟೆ ಅವರು ತಮ್ಮ ಸರಳ ನಡೆ- ನುಡಿಯಿ0ದ, ಜ್ಞಾನದ ಹಿರಿಮೆಯಿ0ದ, ಶರಣತ್ವದ ಸಜ್ಜನಿಕೆಯ ಬದುಕಿನಿಂದ, ಚಿ0ತನಶೀಲತೆ, ಅಂತಃಕರಣದ ಕಾಳಜಿಯಿಂದ ನಮ್ಮ ನಡುವೆ ಬದುಕುತ್ತಿರುವ ಮಹತ್ವದ ವ್ಯಕ್ತಿ;ಸಾಹಿತಿ. .  ನಮ್ಮಂಥ  ಅನೇಕ ಯುವ ಬರಹಗಾರರಿಗೆ ದಣಿವರೆಯದ  ಇವರ ಬದುಕು ಮತ್ತು ಬರಹ ಸ್ಪೂರ್ತಿ ಮತ್ತು ಪ್ರೇರಣೆಯಾಗಿದೆ …ಇವರು ರಚಿಸಿದ ಕಾದಂಬರಿಗಳನ್ನು ನಾಡಿನ ಸಾರಸ್ವತ ಲೋಕ, ವಿಮರ್ಶಾ ಲೋಕ ಗಂಭೀರವಾಗಿ ಪರಿಗಣಿಸಿ ಅಧ್ಯಯನ ಗೈಯುವುದು, ಚರ್ಚಿಸುವುದು ಇಂದಿನ  ಅಗತ್ಯವಾಗಬೇಕು. ..

– ಸಿ. ಎಸ್. ಆನಂದ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here