ತೊಗರಿ ಖರೀದಿ ಪ್ರಕ್ರಿಯೆ ವಿಸ್ತರಣೆಗೆ ಜೈಕರವೇ ಆಗ್ರಹ

0
22

ಕಲಬುರಗಿ: ತೊಗರಿ ಖರೀದಿ ದಿನಾಂಕ ಇನ್ನೂ ೧೫ ದಿನ ಮುಂದೂಡಬೇಕಾಗಿ ಇಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಸದ್ಯ ನಿಗದಿಪಡಿಸಿದ ದಿನಾಂಕ ರೈತರಿಗೆ ತುಂಬಾ ಅನಾನುಕೂಲವಾಗುತ್ತಿದ್ದು, ಲಕ್ಷಾಂತರ ರೈತರು ಈಗಾಗಲೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ್ದಾರೆ. ಒಂದು ವೇಳೆ ನಿಗದಿ ಪಡಿಸಿದ ದಿನಾಂಕದಂದು ಖರೀದಿ ಬಂದ ಮಾಡಿದರೆ ಸಾವಿರಾರು ರೈತರ ತೋಗರಿ ಹಾಗೆಯೇ ಉಳಿಯುತ್ತದೆ. ಇದರಿಂದ ರೈತರು ಕಂಗಲಾಗುವ ಸ್ಥಿತಿ ಇದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಡಿಮೆ ದರದಲ್ಲಿ ಮಾರುವ ಪರಿಸ್ಥಿತಿ ನಿರ್ಮಾಣವಾಗಿದಲ್ಲದೇ ರೈತರು ಕಂಗಲಾಗಲಿದ್ದಾರೆಂದು ಜೈಕರವೇ ರಾಜ್ಯಾಧ್ಯಕ್ಷ ಮಂಜುನಾಥ ಬಿ. ಹಾಗರಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ದಿನಾಂಕ ಮುಂದುವರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ

ಈ ವೇಳೆಯಲ್ಲಿ ಜಗನ್ನಾಥ ಪಟ್ಟಣಶೆಟ್ಟಿ, ಪ್ರವೀಣ ಕುಲಕರ್ಣಿ, ಬಾಲರಾಜ ಕೋನಳ್ಳಿ, ಅಸ್ಪಾಕ ಬಂದರವಾಡ, ಅಮರನಾಥ ಸಾಹು ಕುಳಗೇರಿ, ಯಲ್ಲಪ್ಪ ಯಾದವ, ಸುಲ್ತಾನ, ಶಾಂತಕುಮಾರ ಪಾಟೀಲ, ಅಲೋಕ ಸೋರಡೆ, ರಾಜಶೇಖರ ದಪ್ಪೇದಾರ, ಜಗನ್ನಾಥ ಪಾರ್ಥ, ವಿರೇಶ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here