ಸುರಪುರ: ಇಂದು ನಗರದ ಡಾ: ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುದ್ಧ ಬಸವರ ಸ್ಮರಣೆ ಹಾಗು ಡಾ:ಬಾಬಾ ಸಾಹೇಬ್ ಅಂಬೇಡ್ಕರರ ೧೨೮ನೇ ಜಯಂತಿ ಆಚರಣೆ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಸಮಿತಿಯ ಅಧ್ಯಕ್ಷ ವೆಂಕಟೇಶ್ ಹೊಸಮನಿ ಮಾತನಾಡಿ ಬುದ್ಧ ಬಸವಣ್ಣ ಮತ್ತು ಅಂಬೇಡ್ಕರ್‌ರು ಈ ಲೋಕ ಕಂಡ ಮಹಾ ಮಾನವತಾವಾದಿಗಳು.ಇಂತ ಮಹನಿಯರುಗಳ ತಾಲ್ಲೂಕು ಮಟ್ಟದ ಜಯಂತಿಯನ್ನು ಈ ತಿಂಗಳ ೨೦ನೇ ತಾರೀಖಿನಂದು ವಿಜೃಂಭಣೆಯಿಂದ ಆಚರಿಸಲಾಗುವುದು.ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉಸ್ತುರಿಯ ಕೊರಣೇಶ್ವರ ಸ್ವಾಮಿಜಿ ಹಾಗು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಅಕ್ಕಾ ಕೆ.ನೀಲಾ ಮತ್ತಿತರರು ಭಾಗವಹಿಸಿ ಬುದ್ಧ ಬಸವಣ್ಣ ಅಂಬೇಡ್ಕರ್‌ರ ಬಗ್ಗೆ ಮಾತನಾಡಲಿದ್ದಾರೆ.ಆದ್ದರಿಂದ ಕಾರ್ಯಕ್ರಮದಲ್ಲಿ ಬುದ್ಧ ಬಸವಣ್ಣ ಮತ್ತು ಅಂಬೇಡ್ಕರರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ,ಮಾನಪ್ಪ ಕರಡಕಲ್,ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂಧಿಗೇರಿ, ನಿಂಗಣ್ಣ ಗೋನಾಲ,ಮಾಳಪ್ಪ ಕಿರದಹಳ್ಳಿ, ರಾಹುಲ್ ಹುಲಿಮನಿ,ಶಿವರಾಜ ಪಾಣೆಗಾಂವ್,ಯಲ್ಲಪ್ಪ ಚಿನ್ನಾಕಾರ,ಧರ್ಮರಾಜ ಬಡಿಗೇರ,ರಾಜು ಕಟ್ಟಿಮನಿ, ಮಲ್ಲಿಕಾರ್ಜುನ ವಾಗಣಗೇರಾ, ವಿಶ್ವನಾಥ ಹೊಸಮನಿ, ರಮೇಶ ಅರಕೇರಿ, ರಮೇಶ ನಾಗರಾಳ,ರಾಮಣ್ಣ ಶೆಳ್ಳಿಗಿ, ಗೌತಮ್ ಬಡಿಗೇರ, ಮಲ್ಲಿಕಾರ್ಜುನ ಮುಷ್ಠಳ್ಳಿ,ಚಂದಪ್ಪ ಪಂಚಮ ಸೇರಿದಂತೆ ಅನೇಕರಿದ್ದರು.