ಪ್ರಾಥಮಿಕ ಆರೋಗ್ಯ ಕೇಂದ್ರ ನಾಮಕೇವಾಸ್ತೆ: ನರ್ಸ್‌ಗಳೇ ವೈದ್ಯರು!

0
106

ಕಲಬುರಗಿ: ವಾಡಿ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಗಿಸುತ್ತಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ವೈದ್ಯರ ದರ್ಶನವೇ ಸಿಗುವುದಿಲ್ಲ. ಬದಲಿಗೆ ಸದಾ ಸೇವೆಯಲ್ಲಿರುವ ಸ್ಟಾಪ್ ನರ್ಸ್‌ಗಳೇ ಮಾತ್ರೆ ಔಷಧ ನೀಡಿ ರೋಗಿಗಳನ್ನು ಉಪಚರಿಸುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ಕೊರೊನಾ ವೈರಸ್ ಆತಂಕ ಮೂಡಿಸಿದೆ. ತುಸು ಕೆಮ್ಮು ಕಾಣಿಸಿಕೊಂಡರೆ ಸಾಕು ರೋಗಿಗಳು ಎದ್ದೋ ಬಿದ್ದೋ ಆಸ್ಪತ್ರೆಯತ್ತ ಓಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಕೆಮ್ಮುವ ರೋಗಿಗಳ ಸಹವಾಸವೇ ಬೇಡ ಎಂದು ಕರ್ತವ್ಯದಿಂದ ದೂರ ಉಳಿಯುವ ಮೂಲಕ ಸರಕಾರದ ಸಂಬರಳ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಡಾಕ್ಟರ್ ಅನುಪಸ್ಥಿತಿಯಲ್ಲಿ ಸ್ಟಾಪ್ ನರ್ಸ್‌ಗಳೇ ಮಾತ್ರೆ, ಔಷಧ ನೀಡಿ ರೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ರಕ್ತದೊತ್ತಡ, ಕೆಮ್ಮು, ಜ್ವರ, ಸೀತ, ನೋವು, ಗಾಯಗಳನ್ನು ಮೊದಲು ವೈದ್ಯರು ಪರೀಕ್ಷಿಸಿ ಮಾತ್ರೆ ಔಷಧ ನೀಡುವುದು ನಿಯಮ. ಆದರೆ ಇಲ್ಲಿ ನರ್ಸ್‌ಗಳೇ ನೇರವಾಗಿ ರೋಗಿಗಳಿಗೆ ಮಾತ್ರೆ ಔಷಧ ವಿತರಿಸುತ್ತಾರೆ. ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದರೆ, ಫೀಲ್ಡ್ ವರ್ಕ್ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ಈ ಆಸ್ಪತ್ರೆಯ ನಿಯಮವಾಗಿದೆ. ರೋಗಿಗಳು ಆಸ್ಪತ್ರೆಯೊಳಗೆ ಬರಲು ಏಣಿಗಳ ವ್ಯವಸ್ಥೆಯಿಲ್ಲ. ಆಸ್ಪತ್ರೆಗೆ ನಾಮಫಲಕವಿಲ್ಲ. ಮೂರಕಿಂತ ಹೆಚ್ಚು ರೋಗಿಗಳು ಬಂದರೆ ಕೂಡಲು ಆಸನಗಳಿಲ್ಲ. ನೆಲದ ಮೇಲೆ ಕುಳಿತು ರೋಗಕ್ಕೆ ಮದ್ದು ಪಡೆದುಕೊಳ್ಳಬೇಕು. ರೋಗಿಗಳು ನಗರದಲ್ಲೊಂದು ಸರಕಾರಿ ಪ್ರಾಥಮಿಕ ನಗರ ಆರೋಗ್ಯ ಕೇಂದ್ರ ಇದೆ ಎಂಬುದು ಪಟ್ಟಣದ ಶೇ.೯೦ರಷ್ಟು ಜನರಿಗೆ ತಿಳಿದಿಲ್ಲ ಎಂಬುದೇ ವಿಪರ್ಯಾಸದ ಸಂಗತಿ.

Contact Your\'s Advertisement; 9902492681

ನಗರ ಆರೋಗ್ಯ ಕೇಂದ್ರದಿಂದ ಜನರಿಗೆ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಆಸ್ಪತ್ರೆಗೆ ಆಗಾಗ ಭೇಟಿ ನೀಡಿದ್ದೇವೆ. ವೈದ್ಯರು ಕರ್ತವ್ಯದಲ್ಲಿ ಕಾಣಿಸುವುದೇ ಇಲ್ಲ. ಪ್ರತಿಯೊಂದು ರೋಗಕ್ಕೂ ನರ್ಸ್‌ಗಳೇ ಮದ್ದು ನೀಡಿ ರೋಗಿಗಳ ಸೇವೆ ಮಾಡುತ್ತಿದ್ದಾರೆ. ವೈದ್ಯರ ಆಜ್ಞೆ ಪಾಲಿಸಬೇಕಾದ ಸ್ಟಾಪ್ ನರ್ಸ್‌ಗಳು, ಅನಿವಾರ್ಯವಾಗಿಯೋ ಅಥವ ಸೇವೆಯಲ್ಲಿರದ ವೈದ್ಯರ ಆದೇಶದಿಂದಲೋ ಏನೋ ರೋಗಿಗಳಿಗೆ ಮಾತ್ರೆ ನೀಡುತ್ತಾರೆ. ಇದು ವೈದ್ಯಕೀಯ ನಿಯಮಕ್ಕೆ ವಿರುದ್ಧವಾಗಿದೆ.

ನರ್ಸ್‌ಗಳು ಕಡ್ಡಾಯವಾಗಿ ಸೇವೆ ನೀಡುತ್ತಿದ್ದರೆ, ವೈದ್ಯರು ಮಾತ್ರ ರೋಗಿಗಳಿಂದ ದೂರ ಉಳಿಯುತ್ತಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳೂ ಕೂಡ ವಾಡಿ ನಗರ ಆಸ್ಪತ್ರೆಗೆ ನಿರ್ಲಕ್ಷ್ಯ ತೋರಿದ್ದಾರೆ. ಆರೋಗ್ಯ ಸೇವೆ ನೀಡದೆ ಮನೆಯಲ್ಲಿ ಕುಳಿತು ವೇತನ ಪಡೆಯುತ್ತಿರುವ ತಪಿತಸ್ಥ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು. ಸೂಕ್ತ ವೈದ್ಯರನ್ನು ನೇಮಿಸಬೇಕು ಎಂದು ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಶ್ರವಣಕುಮಾರ ಮೌಸಲಗಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here