ಕಲಬುರಗಿ: ನಗರದ 4 ಕಡೆ ಜ್ವರ ತಪಾಸಣಾ‌ ಕೇಂದ್ರ: ಡಿ‌.ಸಿ. ಶರತ್ ಬಿ.

0
99

ಕಲಬುರಗಿ: ಕೋವಿಡ್-19 ಪ್ರಕರಣ ಕಂಡುಹಿಡಿಯಲು ಕಲಬುರಗಿ ನಗರದ ನಾಲ್ಕು ಕಡೆ ಜ್ವರ ತಪಾಸಣಾ ಕೇಂದ್ರಗಳು ತೆರೆಯಲಾಗಿದ್ದು, ಏಪ್ರಿಲ್ 6 ರಿಂದಲೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ಪ್ರಾಥಮಿಕ ಅರೋಗ್ಯ ಕೇಂದ್ರ ಅಶೋಕ ನಗರ, ಪ್ರಾಥಮಿಕ ಅರೋಗ್ಯ ಕೇಂದ್ರ ಶಿವಾಜಿ ನಗರ, ಪ್ರಾಥಮಿಕ ಅರೋಗ್ಯ ಕೇಂದ್ರ ನ್ಯೂ ರೆಹಮತ್ ನಗರ ಹಾಗೂ ತಾರಪೈಲ್ ಸಾರ್ವಜನಿನ ಆಸ್ಪತ್ರೆಯನ್ನು ಜ್ವರ ತಪಾಸಣಾ ಕೇಂದ್ರವೆಂದು ಗುರುತಿಸಲಾಗಿದೆ.

Contact Your\'s Advertisement; 9902492681

ಈ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಪಾಳಿ ಆಧಾರದ ಮೇಲೆ ವೈದ್ಯರು, ಸ್ಡಾಫ್ ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಕರ್ತವ್ಯ‌ ನಿರ್ವಹಿಲಿದ್ದಾರೆ.

ನೆಗಡಿ, ಕೆಮ್ಮು, ಜ್ವರ ಹಾಗು ಉಸಿರಾಟದ ತೊಂದರೆ ಕಂಡುಬಂದಲ್ಲಿ ಕಲಬುರಗಿ ನಗರದ ಸಾರ್ವಜನಿಕರು ಸಮೀಪದ ಈ ಜ್ವರ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here