“ಕೊರೊನಾ ಜೊತೆ ಸಂಘರ್ಷ ಮತ್ತು ಬದಕು” ಇಂದಿನಿಂದ

0
95

ಕಲಬುರಗಿ: ಸಮಾಲೋಚನೆ. ಕೊರೊನಾ ಮಹಾಮಾರಿ ದಿನೆ ದಿನೆ  ಇನ್ನಷ್ಟು ಹೆಚ್ಚಾಗುತ್ತಿರುವದರಿಂದ ಇಡೀ ದೇಶದ ಜನ ಜೀವನವೇ ಅಸ್ತವ್ಯಸ್ತವಾಗಿ,ಬಹುತೇಕ  ಆರ್ಥಿಕ ಚಟುವಟಿಕೆಗಳು ನಿಂತುಹೋಗಿವೆ.ಇದರಿಂದ ಜನಸಾಮಾನ್ಯರ  ಅದರಲ್ಲೂ ಬಡವರು ಮತ್ತು ನಿರ್ಗತಿಕರ ಜೀವನೋಪಾಯ ಕಷ್ಟಕರವಾಗಿದೆ.ಇನ್ನು ಮುಂದೆ ಕೊರೊನಾ ವೈರಸ್ ವಿರುದ್ಧ ಹೋರಾಡುವ ಮುಖಾಂತರ ಜೀವನ ಸಾಗಿಸುವದು ಅನಿವಾರ್ಯವಾಗಿದೆ.

ಈ ಗಂಭೀರ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದಲ್ಲಿ  ಕೊರೊನಾ ಮಹಾಮಾರಿ ಜೊತೆ ಸಂಘರ್ಷ ಮತ್ತು ಬದಕು ಕುರಿತು ದಿನಾಂಕ 28,29 ಮೇ 2020 ರಂದು ಎರಡು ದಿವಸ  ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಕೋರ್ ಕಮಿಟಿಯ  ಸದಸ್ಯರೊಂದಿಗೆ, ಪರಿಣಿತರು, ಚಿಂತಕರು, ಆಯಾ ಕ್ಷೇತ್ರದ ಪ್ರಮುಖರೊಂದಿಗೆ ದೂರವಾಣಿ ಮತ್ತು ಮೊಬೈಲ್ ಮೂಲಕ ಸಮಾಲೋಚನೆ ನಡೆಸಿ ಸಮಿತಿಯ  ವತಿಯಿಂದ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ   ಜನಮಾನಸದ ನೋವಿನ ಬಗ್ಗೆ  ಮತ್ತು ಮುಂದಿನ ಜೀವನ ಸಂಫರ್ಷ  ಹಾಗೂ ಅಭಿವೃದ್ಧಿಯ  ಕುರಿತು ಮನವರಿಕೆ ಮಾಡಲಾಗುವದು ಎಂದು ಹೈಕ ಜನಪರ ಸಂಘಷಱ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here