ಲಿಂಗಸ್ಗೂರು: ವೀರಾಪೂರು ಸರಕಾರಿ ಶಾಲೆಗೆ ಸಮರ್ಥ ಮುಖ್ಯಗುರುಗಳು ಹಾಗೂ ಇಂಗ್ಲಿಷ್ ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಹಾಗೂ ವೀರಾಪೂರು ಶಾಲೆಯ ಎಸ್‌ಡಿಎಂಸಿ, ಹಾಗೂ ವೀರಾಪೂರು ಗ್ರಾಮಸ್ಥರು ಆಗ್ರಹಿಸಲಾಯಿತು.
ಸೋಮವಾರ ಬಿಇಓಗೆ ಮನವಿ ಸಲ್ಲಿಸಿ ವೀರಾಪೂರು ಗ್ರಾಮಕ್ಕೆ ಸುಮಾರು ವರ್ಷಗಳಿಂದ ನಿವೃತ್ತಿ ಹೊಂದುವ ಹಾಗೂ ವಿಶೇಷ ಚೇತನರನ್ನು ನೀಡಲಾಗುತ್ತಿದ್ದು, ಗ್ರಾಮದ ಶಾಲೆಯ ಮಕ್ಕಳ ಕಲಿಕೆಯಲ್ಲಿ ತೀರ ಹಿನ್ನೆಡೆಯಾಗಿದೆ. ವರ್ಷಂಪ್ರತೀ ಮಕ್ಕಳ ಶಾಲೆಯ ದಾಖಲಾತಿಯಲ್ಲಿ ಕ್ರಮೇಣ ಇಳಿಕೆಯಾಗುತ್ತಾ ಸಾಗಿದೆ. ಈ ಕಾರಣದಿಂದ ಗ್ರಾಮದಲ್ಲಿ ಮಕ್ಕಳನ್ನು ಗ್ರಾಮದ ಶಾಲೆಯಲ್ಲಿ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಗ್ರಹಿಸಲಾಯಿತು.
ಆದ್ದರಿಂದ ಈಗಾಗಲೇ ಗ್ರಾಮದ ಮುಖ್ಯಗುರುಗಳು ನಿವೃತ್ತಿ ಹೊಂದಿದ್ದು, ನಮ್ಮ ಶಾಲೆಯಲ್ಲಿ ಮುಖ್ಯಗುರುಗಳ ಹುದ್ದೆ ಖಾಲಿ ಇದೆ. ಹಾಗೂ ಇಂಗ್ಲಿಷ್, ಹಾಗೂ ದೈಹಿಕ ಶಿಕ್ಷಕರು ಇಲ್ಲದೇ ಇರೋದು ಕೂಡಾ ಶಾಲಾ ಮಕ್ಕಳ ಕಲಿಕೆಗೆ ಹಿನ್ನೆಡೆಯಾಗಿದೆ. ಈ ಕಾರಣದಿಂದ ಕೂಡಲೇ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಯೋಗ್ಯರಿರುವ ಮುಖ್ಯಗುರುಗಳು ಹಾಗೂ ಇಂಗ್ಲಿಷ್ ಹಾಗೂ ದೈಹಿಕ ಶಿಕ್ಷರನ್ನು ಒದಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲೂಕ ಸಮಿತಿ ಲಿಂಗಸ್ಗೂರು ಹಾಗೂ ವೀರಾಪೂರು ಗ್ರಾಮದ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ವಿನಂತಿಸಿಕೊಂಡಿದೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ರಮೇಶ್ ವೀರಾಪೂರು, ಎಸ್‌ಡಿಎಂಸಿ ಅಧ್ಯಕ್ಷ ಮೌನೇಶ್ ತಳವಾರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ನಿಂಗಮ್ಮ, ಎಸ್‌ಡಿಎಂಸಿ ಸದಸ್ಯರಾದ ಹನುಮಂತ ಗಚ್ಚಿನಮನಿ, ರಾಮಣ್ಣ ಕಡೇಮನಿ, ಶಿವಮ್ಮ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಅನ್ನಪೂರ್ಣ, ಗ್ರಾಮಸ್ಥರಾದ, ನಿಂಗಪ್ಪ, ರಾಜಾಸಾಬ್ ಸೈಯದ್, ಅಮರಪ್ಪ ಬಾಂಬೆ ನಾಗಮ್ಮ ಕಾಟಿಗಲ್ ಉಪಸ್ಥಿರರಿದ್ದರು.