ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಆಯ್ಕೆ‌ಯ ಬಗ್ಗೆ ಅಪಸ್ವರ

0
97

ನಾಗಮಂಗಲ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ ಮಂಡ್ಯದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನಿಂದ ಆಯ್ಕೆಯಾಗಿರುವ ಶಿಕ್ಷಕರ ಆಯ್ಕೆಯ ಬಗ್ಗೆ ಶಿಕ್ಷಕ ವರ್ಗ ಮತ್ತು ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಮಾಡಿರುವ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಖಜಾಂಚಿ ಕೊಣನೂರು ಧನಂಜಯ್ ಮತ್ತು ಯೋಗಗುರು ಲಕ್ಷ್ಮಣ್ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ತಾಲ್ಲೂಕಿನ ಮೂರು ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಶಿಕ್ಷಕರನ್ನು ಯಾವ ಮಾನದಂಡದ ಮೇಲೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Contact Your\'s Advertisement; 9902492681

ತಾಲ್ಲೂಕಿನಲ್ಲಿ ಮೂವರನ್ನು ಇದುವರೆಗೂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ. ಇಲ್ಲಿನ ಜನರ ಕಣ್ಣಿಗೆ ಕಾಣದ ಉತ್ತಮ ಶಿಕ್ಷಕರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಣ್ಣಿಗೆ ಹೇಗೆ ಕಂಡರು. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಆಯ್ಕೆ ಮಾಡಬಹುದಿತ್ತು. ಆದರೆ ಈಗ ಆಯ್ಕೆಯಾಗಿರುವ ಒಬ್ಬರ ಮೇಲೆ ಹಲವಾರು ಆರೋಪಗಳಿದ್ದು, ನಿವೃತ್ತಿ ವೇತನ ಇದೂವರೆಗೂ ಬಿಡುಗಡೆಯಾಗಿಲ್ಲ ಎಂದು‌ ಆರೋಪಿಸಿದರು.

ಅಲ್ಲದೇ ಇನ್ನೊಬ್ಬರು ಖಾಸಗಿ ಶೈಕ್ಷಣಿಕ ಸಂಸ್ಥೆಯೊಂದರ ಕಾರ್ಯದರ್ಶಿಯಾಗಿದ್ದು ಸಂಸ್ಥೆಯಲ್ಲಿ ಕಾರ್ಯ‌ ನಿರ್ವಹಿಸುವ ಶಿಕ್ಷಕರು ಮತ್ತು ಸಿಬ್ಬಂದಿಗೆ ವೇತನ ಸರಿಯಾಗಿ ನೀಡುವುದಿಲ್ಲವೆಂಬ ದೂರಿದೆ. ಮತ್ತೊಬ್ಬರ ಮೇಲೆಯೂ ಸಹ ಆರೋಪಗಳು ಕೇಳಿಬಂದಿವೆ. ಅಂಥಹ ಹಿನ್ನೆಲೆಯ ಅವರನ್ನು ಆಯ್ಕೆ ಮಾಡಲು ಯಾವೂದಾದರೂ ಪ್ರಭಾವವಿದೆಯೇ ಅಥವಾ ಒತ್ತಡವಿದೆಯೇ ಎಂಬುದು ಅವರು ಹೇಳಬೇಕು.

ಲಯನ್ಸ್ ಸಂಸ್ಥೆಯು ಸಮಾಜ ಸೇವಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಜಿಲ್ಲಾ ಸಾಹಿತ್ಯ ಪರಿಷತ್ ಸಾಹಿತ್ಯ ಕೃಷಿ, ಸಾಧಕರು ಬಗ್ಗೆ ಸಮಾಜಕ್ಕೆ ತಿಳಿಸಿಕೊಡುವಂತಹ ರಚನಾತ್ಮಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಸಂಪೂರ್ಣವಾಗಿ ಎಡವಿದೆ.

ಮುಂದಿನ ದಿನಗಳಲ್ಲಿ ಸಮಾಜಕ್ಕೆ ಯಾವ ಸಂದೇಶವನ್ನು ನೀಡಬಹುದು ಎಂದು ಅವರು ಟೀಕಿಸಿದರು.ಅಲ್ಲದೇ ಆಯ್ಕೆ ಮಂಡಳಿ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿರುವ ಬಗ್ಗೆ ಮತ್ತೆ ಪರೀಶೀಲಿಸಿ, ಪ್ರತಿಭಾವಂತ ಉತ್ತಮ ಶಿಕ್ಷಕರಿಗೆ ಅವಮಾನವಾಗದಂತೆ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here