ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಪೋಷಣ ಅಭಿಯಾನ ಸಹಕಾರಿ:ಶರಣಮ್ಮ ದೇಸಾಯಿ

0
33

ಸುರಪುರ: ಮಕ್ಕಳಿಗೆ, ಗರ್ಭಿಯಣಿರಿಗೆ, ಬಾಣಂತಿಯರಿಗೆ ಮತ್ತು ಕಿಶೋರಿಯರಿಗೆ ಪೌಷ್ಠಿಕ ಆಹಾರನೀಡಿ ಸದೃಢರನ್ನಾಗಿ ಮಾಡಲು ಪೋಷಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಮ್ಮಾಪೂರ (ಬಿ) ಅಂಗನವಾಡಿ ಮೆಲ್ವಿಚಾರಕಿ ಶರಣಮ್ಮ ಸಿ.ದೇಸಾಯಿ ತಿಳಿಸಿದರು.

ಗುರುವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ,ಸರಕಾರ ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಮಹತ್ತರವಾದ ಯೋಜನೆಯನ್ನು ಜಾರಿಗೊಳಿಸಿದೆ,ಇದನ್ನು ಸಮರ್ಪಕವಾಗಿ ಮಕ್ಕಳಿಗೆ ತಲುಪಿಸುವ ಮೂಲಕ ಯೋಜನೆಯನ್ನು ಸಾರ್ಥಕಗೊಳಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ.ಆದ್ದರಿಂದ ಮಕ್ಕಳಿಗೆ ಅಭಿಯಾನದ ಮೂಲಕ ಪೌಷ್ಠಿಕ ಆಹಾರ ಸೇವೆನೆಗೆ ನೀಡುವ ಜೊತೆಗೆ ಪೌಷ್ಠಿಕ ಆಹಾರದ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದರು.

Contact Your\'s Advertisement; 9902492681

ಅಭಿಯಾನದಲ್ಲಿ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರನೀಡಿ ಅವರ ಸದೃಢರನ್ನಾಗಿ ಮಾಡಲಾಗುವುದು ಅಂಗನವಾಡಿಗಳಲ್ಲಿ ಕೈತೋಟ ನಿರ್ವಾಣಮಾಡಿ ಕೇಂದ್ರಕ್ಕೆ ಬೇಕಾಗಿರುವ ತರಕಾರಿ ಬೆಳೆಯಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮೀನಾಕ್ಷಿ, ವಿನಾಯಕ, ಹುಲಗಮ್ಮ, ದೇವಕೆಮ್ಮ, ಪ್ರಭಾವತಿ, ರೇಣುಕಾ, ಲಕ್ಷ್ಮೀ ಚನ್ನಮ್ಮ ಹಣಮಂತ, ಸಿದ್ದಮ್ಮ, ಬಸಮ್ಮ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here