ಬೆಂಬಲ ಬೆಲೆ ಯೋಜನೆಯಡಿ ಹೆಸರು ಉದ್ದು ಖರೀದಿ: ನೋಂದಣಿ ಅವಧಿ ವಿಸ್ತರಣೆ

0
21

ಕಲಬುರಗಿ: ಮುಂಗಾರು ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಹಾಗೂ ಉದ್ದು ಖರೀದಿಗೆ ಸಂಬಂಧಿಸಿದಂತೆ ರೈತರು ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು 2020ರ ಅಕ್ಟೋಬರ್ 29ರ ವರೆಗೆ ಹಾಗೂ ಖರೀದಿಗೆ ಕಾಲಾವಧಿಯನ್ನು 2020ರ ನವೆಂಬರ್ 28ರ ವರೆಗೆ ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಈ ಹಿಂದೆ ನೊಂದಣಿಗೆ ಕೊನೆಯ ದಿನ 2020ರ ಅಕ್ಟೋಬರ್ 15 ರಂದು ಹಾಗೂ ಕೃಷಿ ಉತ್ಪನ್ನಗಳ ಖರೀದಿ ಕಾಲಾವಧಿಯನ್ನು ನವೆಂಬರ್ 15ರ ವರೆಗೆ ನಿಗದಿ ಮಾಡಲಾಗಿತ್ತು. ಸರ್ಕಾರದ ಪರಿಷ್ಕøತ ಆದೇಶದಂತೆ ನೋಂದಣಿ ಮತ್ತು ಖರೀದಿಗೆ ಅವಧಿಯನ್ನು ವಿಸ್ತರಿಸಲಾಗಿದೆ. ರೈತ ಸಮುದಾಯ ಇದರ ಲಾಭ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here