ಪ್ರವಾಹ ಪೀಡಿತ ಮುತ್ತಾಗಾ ಗ್ರಾಮಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಬೇಟಿ ನೀಡಿ

0
92

ಶಹಾಬಾದ:ಕಾಗಿಣಾ ನದಿಯಲ್ಲಿ ಉಂಟಾದ ಪ್ರವಾಹದಿಂದ ನಲುಗಿದ ಮುತ್ತಾಗಾ ಗ್ರಾಮಕ್ಕೆ ಶುಕ್ರವಾರ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಬೇಟಿ ನೀಡಿ ಸಂತ್ರಸ್ತರ ಗೋಳು ಆಲಿಸಿದರು.

ಗ್ರಾಮದಲ್ಲಿ ಪ್ರವೇಶಿಸಿದ ಕೂಡಲೇ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.ಗ್ರಾಮದಲ್ಲಿ ಎರಡು ದಿನಗಳಿಂದ ವಿದ್ಯುತ್ ಇಲ್ಲದೇ ಹಾಗೂ ಕುಡಿಯಲು ನೀರಿಲ್ಲದೇ ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದೆವೆ.ಅಲ್ಲದೇ ಬೆಳೆದಂತೆ ಬೆಳೆ ಸಂಪೂರ್ಣ ನಾಶವಾಗಿದೆ.ಮನೆಯೆಲ್ಲಾ ಮುಳುಗಿ ಆಹಾರ ಧಾನ್ಯಗಳು ಹಾಗೂ ಸಾಮಾನುಗಳು ನಾಶವಾಗಿವೆ ಎಂದು ಹೇಳುತ್ತ ಕಣ್ಣೀರು ಹಾಕಿದರು.

Contact Your\'s Advertisement; 9902492681

ಶಾಸಕರು ಗ್ರಾಮದ ಮುಳುಗಡೆಯಾದ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಹೋಗಿ ವೀಕ್ಷಣೆ ಮಾಡಿದರು.ಅಲ್ಲದೇ ಇಲ್ಲಿನ ಜನರಿಗೆ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.ಇಲ್ಲಿ ಗಂಜಿ ಕೇಂದ್ರ ತೆಗೆದು ಉತ್ತಮ ಆಹಾರದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಮನೆಯಲ್ಲಿ ನೀರು ನುಗ್ಗಿ ಅಗತ್ಯ ದಾಖಲೆಗಳು ನಾಶವಾಗಿವೆ. ರೇಷನ್ ಕಾರ್ಡ ಹಾಗೂ ಇತರ ಯಾವುದೇ ದಾಖಲೆಗಳು ನಾಶವಾಗಿದ್ದರೇ ಆದಷ್ಟು ಬೇಗನೆ ಅದನ್ನು ಪರಿಶೀಲಿಸಿ, ಅವರಿಗೆ ಇನ್ನೊಂದು ದಾಖಲೆಗಳನ್ನು ನೀಡುವಂತೆ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಸೂಚಿಸಿದರು.ಅಲ್ಲದೇ ಮುತ್ತಗಾದ ಹಳೆ ಗ್ರಾಮ ಪ್ರವಾಹ ಬಂದಗಲೊಮ್ಮೆ ಮುಳುಗಡೆಯಾಗುತ್ತಿದ್ದು, ಆ ಪ್ರದೇಶವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ.ಆದರೆ ಅದಕ್ಕೆ ಸಮಯಬೇಕು ಎಂದು ಗ್ರಾಮಸ್ಥರಿಗೆ ಹೇಳಿದರು.

ತಹಶೀಲ್ದಾರ ಸುರೇಶ ವರ್ಮಾ, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಪಿಐ ಅಮರೇಶ.ಬಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಮೃತ್ಯುಂಜಯ್ ಹಿರೇಮಠ, ಬೀಮಣ್ಣ ಸಾಲಿ, ಚಿತ್ತಾಪೂರ ತಾಪಂ ಅಧ್ಯಕ್ಷ ಜಗದೇದರೆಡ್ಡಿ, ಮ.ಅಜಿಂ ಸೇಠ,ಶರಣಗೌಡ ದಳಪತಿ ಭಂಕೂರ, ರೈತ ಸಂಘದ ತಾಲೂಕಾಧ್ಯಕ್ಷ ಬಸವರಾಜ ಕೋರಿ, ಶರಬಣ್ಣ ಮಾವೂರ, ಜಾನಿ ಪಟೇಲ್, ಅಮೀರ ಪಟೇಲ್,ರಾಹುಲ ಜಿರಕಲ್,ಶಿವಮೂರ್ತಿ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here