ಹೊನಗುಂಟಾ ಗ್ರಾಮಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಬೇಟಿ

0
66

ಶಹಾಬಾದ:ಕಾಗಿಣಾ ಹಾಗೂ ಭೀಮಾನದಿಯಿಂದ ಉಂಟಾದ ಪ್ರವಾಹದಿಂದ ನಡುಗಡ್ಡೆಯಂತಾಗಿದ್ದ ಹೊನಗುಂಟಾ ಗ್ರಾಮಕ್ಕೆ ಶುಕ್ರವಾರ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಬೇಟಿ ನೀಡಿ ವೀಕ್ಷಣೆ ಮಾಡಿದರು.

ಗ್ರಾಮದ ಜನರು ಸುತ್ತುವರೆದು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಶಾಸಕ ಪ್ರಿಯಾಂಕ್ ಖರ್ಗೆ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿ ವೀಕ್ಷಣೆ ಮಾಡಿದರು.ಅದರಲ್ಲೂ ನದಿಯ ಸಮೀಪದಲ್ಲಿರುವ ಭೀಮ ನಗರ ಹಾಗೂ ಶಿಬಿರಕಟ್ಟಾ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾದ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದರು. ಹೊನಗುಂಟಾ ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ರೈತರು ಬೆಳೆಗಳು ನಾಶವಾಗಿವೆ.ಮನೆಗಳು ಬಿದ್ದಿವೆ.ಮನೆಯೊಳಗೆ ನೀರು ನುಗ್ಗಿ ಆಹಾರ ಮತ್ತು ಇನ್ನೀತರ ಸಮಾನುಗಳು ನಾಶವಾಗಿದೆ.ಆದರೂ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ಹೆಚ್ಚಿನ ಗಮನ ನೀಡಿ, ಪ್ರವಾಹ ಪೀಡಿತ ಜನರಿಗೆ ಹಾಗೂ ರೈತರಿಗೆ ಪರಿಹಾರ ನೀಡುವತ್ತ ಗಮನಹರಿಸಬೇಕೆಂದು ಒತ್ತಾಯಿಸಿದರು.ಅಲ್ಲದೇ ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಗಂಜಿ ಕೇಂದ್ರಗಳನ್ನು ಹೆಚ್ಚಿಸುವಂತೆ ತಹಶೀಲ್ದಾರ ಸುರೇಶ ವರ್ಮಾ ಅವರಿಗೆ ಸೂಚಿಸಿದರು.

Contact Your\'s Advertisement; 9902492681

ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಪಿಐ ಅಮರೇಶ.ಬಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಡಾ.ರಶೀದ್ ಮರ್ಚಂಟ್,ದೇವೆಂದ್ರ ಕಾರೊಳ್ಳಿ, ಬೀಮಣ್ಣ ಸಾಲಿ, ಚಿತ್ತಾಪೂರ ತಾಪಂ ಅಧ್ಯಕ್ಷಜಗದೇದರೆಡ್ಡಿ, ಗಿರೀಶ ಕಂಬಾನೂರ, ಕುಮಾರ ಚವ್ಹಾಣ, ಅನ್ವರ ಪಾಶಾ, ಸೂರ್ಯಕಾಂತ ಕೋಬಾಳ, ಭೀಮುಗೌಡ ಖೇಣಿ,ರಾಜೇಶ ಯನಗುಂಟಿಕರ್,ಪೀರಪಾಶಾ, ರಾಜು ಆಡಿನ್,ಮಲ್ಲಕಣ್ಣ ಕುದ್ದಾ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here