ಸಂಗೀತಕ್ಕೆ ಜಗತ್ತಿನ ಜನರನ್ನು ಗೆಲ್ಲುವ ಶಕ್ತಿ ಇದೆ:ಶಾಂತಮೂರ್ತಿ ಶಿವಾಚಾರ್ಯ

0
37

ಸುರಪುರ: ಸಂಗೀತವು ಕೂಡ ಒಂದು ಭಾಷೆಯಾಗಿದ್ದು ಇದು ಪ್ರತಿಯೊಬ್ಬ ವ್ಯಕ್ತಿಗು ತಿಳಿಯುವ ಭಾಷೆಯಾಗಿದೆ,ಅಲ್ಲದೆ ತನ್ನ ಮಾಧುರ್ಯ ದಿಂದ ಜಗತ್ತಿನ ಜನರನ್ನು ಗೆಲ್ಲುವ ಶಕ್ತಿ ಸಂಗೀತಕ್ಕಿದೆ ಎಂದು ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಖಾಸ್ಗತೇಶ್ವರ ಸಂಗೀತ ನೃತ್ಯ ಕಲಾ ಶಾಲೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ,ಸಂಗೀತಕ್ಕೆ ಸೋಲದ ಮನಸ್ಸುಗಳಿಲ್ಲ,ಅಂತಹ ಸಂಗೀತವನ್ನು ಎಲ್ಲರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಅವರೆ ಕಲಾವಿದರಾಗುತ್ತಾರೆ. ಅಂತಹ ಕಲಾವಿದರನ್ನು ಸೃಷ್ಟಿಸಲು ಇಂದು ರುಕ್ಮಾಪುರ ಗ್ರಾಮದಲ್ಲಿ ಆರಂಭವಾಗುತ್ತಿರುವ ಶ್ರೀ ಖಾಸ್ಗತೇಶ್ವರ ನೃತ್ಯ ಕಲಾ ಶಾಲೆಯ ಧ್ಯೇಯ ಸಂತೋಷ ತರುವಂತದ್ದಾಗಿದೆ ಎಂದರು.

Contact Your\'s Advertisement; 9902492681

ನಂತರ ಅನೇಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮವನ್ನು ನಡೆಸಲಾಯಿತು.ಮಹರ್ಷಿ ವಾಲ್ಮೀಕಿ ಪ್ರೌಢ ಶಾಲೆಯ ಪ್ರಧಾನ ಗುರು ಮಹೇಶ ಕುಂಟೋಜಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಬಡಗಾ,ಬನಶಂಕರಿ ದೇವಸ್ಥಾನದ ಅರ್ಚಕ ಈರಣ್ಣ ಪೂಜಾರಿ ಸ್ವಕುಳಿ ಸಾಳಿ ಸಮಾಜದ ಅಧ್ಯಕ್ಷ ಮಲ್ಲಯ್ಯ ಭಂಡಾರಿ ರಾಘವೇಂದ್ರ ಭಕ್ರಿ ಉಪನ್ಯಾಸಕ ಮಂಜುನಾಥ ಚೆಟ್ಟಿ ವೇದಿಕೆ ಮೇಲಿದ್ದರು.

ಶಾಲೆಯ ಸಂಚಾಲಕ ಅನಿಲಕುಮಾರ್ ಜಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು,ವೆಂಕಟೇಶ ಪಾಟೀಲ್ ನಿರೂಪಿಸಿದರು,ಮಹಾಂತೇಶ ಹಿರೇಮಠ ಸ್ವಾಗತಿಸಿದರು ಹಾಗು ಅಂಬ್ರೇಶ ರುಕ್ಮಾಪುರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here