ವಾರ್ಷಿಕ ಲೆಕ್ಕಪತ್ರ ಸಲ್ಲಿಸಲು ವಕ್ಫ್ ಸಂಸ್ಥೆಗಳಿಗೆ ಸೂಚನೆ

0
42

ಕಲಬುರಗಿ: ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು, 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ನಮೂನೆ-90 ರಲ್ಲಿ ಹಾಗೂ 2020-21ನೇ ಸಾಲಿನ ವಾರ್ಷಿಕ ಬಜೆಟ್ ಎಸ್ಟಿಮೆಟ್‍ನ್ನು ನಮೂನೆ-72ರಲ್ಲಿ ಹಾಗೂ ವಾರ್ಷಿಕ ವಕ್ಫ್ ವಂತಿಗೆಯನ್ನು ಕೂಡಲೇ ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸಲ್ಲಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ವಕ್ಫ್ ಕಾಯ್ದೆ-1995 (ತಿದ್ದುಪಡಿ-2013) ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ವಕ್ಫ್ ಕಾಯ್ದೆ-1995 (ತಿದ್ದುಪಡಿ-2013)ರ ಕಾಯ್ದೆ 46ರ ಪ್ರಕಾರ ಕಲಬುರಗಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಮುತುವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ತಮ್ಮ ವಕ್ಫ್ ಸಂಸ್ಥೆಯ 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ನಮೂನೆ-90ರಲ್ಲಿ, ಬಜೆಟ್ ಎಸ್ಟಿಮೇಟನ್ನು ನಮೂನೆ-72ರಲ್ಲಿ ಹಾಗೂ ಕಾಯ್ದೆ-72ರ ಪ್ರಕಾರ ವಾರ್ಷಿಕ ವಂತಿಗೆಯನ್ನು ಕೂಡಲೇ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಸಲ್ಲಿಸಬೇಕು.

Contact Your\'s Advertisement; 9902492681

ಈವರೆಗೆ ಕೆಲವೇ ವಕ್ಫ್ ಸಂಸ್ಥೆಗಳಿಂದ ಮಾತ್ರ ವಾರ್ಷಿಕ ಲೆಕ್ಕಪತ್ರ, ಬಜೆಟ್ ಅಂದಾಜು ಮತ್ತು ವಂತಿಗೆ ಸಂದಾಯವಾಗಿರುತ್ತದೆ. ಸಂಸ್ಥೆಯ ವಾರ್ಷಿಕ ಲೆಕ್ಕಪತ್ರ, ವಾರ್ಷಿಕ ಬಜೆಟ್ ಅಂದಾಜು ಹಾಗೂ ವಾರ್ಷಿಕ ವಂತಿಗೆಯನ್ನು ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಗೆ ತಪ್ಪದೇ ಸಲ್ಲಿಸುವುದು ಸಂಸ್ಥೆಯ ಮುತ್ತುವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಕರ್ತವ್ಯವಾಗಿದೆ.

ಅದೇ ರೀತಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು 2014ನೇಯ ವರ್ಷದಲ್ಲಿ ನೂತನ ಬಾಡಿಗೆ ಕಾನೂನು ಜಾರಿ ಮಾಡಿದ್ದು, ಕಲಬುರಗಿ ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗಳ ಅಧ್ಯಕ್ಷರು / ಮುತ್ತವಲ್ಲಿಗಳು ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಯಿಂದ ನೂತನ ವಕ್ಫ್ ರೂಲ್ಸ್‍ಗಳನ್ನು ಪಡೆದು ಅದರನ್ವಯ ವಕ್ಫ್ ಸ್ವತ್ತನ್ನು ಬಾಡಿಗೆ ನೀಡಬೇಕು.

ಎಲ್ಲಾ ಬಾಡಿಗೆದಾರರ ಬಾಡಿಗೆ ಕರಾರುಗಳನ್ನು ವಕ್ಫ್ ಮಂಡಳಿಯ ರೂಲ್ಸಿನನ್ವಯ ನವೀಕರಿಸಿ ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here