ಕರ್ನಾಟಕ ಧನವಿನಿಯೋಗ (ಸಂಖ್ಯೆ 4) ವಿಧೇಯಕ ಅಂಗೀಕಾರ : ಬಸವರಾಜ ಬೊಮ್ಮಾಯಿ

0
44

ಬೆಂಗಳೂರು: 2020ನೇ ಸಾಲಿನ “ಕರ್ನಾಟಕ ಧನ ಧನವಿನಿಯೋಗ (ಸಂಖ್ಯೆ 4) ವಿಧೇಯಕವನ್ನು ಅಂಗೀಕರಿಸುವಂತೆ ಮುಖ್ಯಮಂತ್ರಿಗಳ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ವಿಧಾನಪರಿಷತ್‍ನಲ್ಲಿ ಪ್ರಸ್ತಾವನೆ ಮಂಡಿಸಿದರು.

ಪ್ರಸ್ತಾವನೆ ಮಂಡಿಸಿದ ನಂತರ ವಿವರಣೆ ನೀಡಿದ ಸಚಿವರು, ವಾರ್ಷಿಕವಾಗಿ ಬಜೆಟ್ ಮಂಡಿಸಿದ ಮೇಲೆ ಕೆಲವು ವಿಶೇಷ ಸೇವೆಗಳ  ವೆಚ್ಚ ಬರುವ ಸಂದರ್ಭದಲ್ಲಿ ವೆಚ್ಚ ಮಾಡಲು  ಪ್ರಸಕ್ತ ಸಾಲಿನ ಎರಡನೇ ಕಂತಿನಲ್ಲಿ 3320.40 ಕೋಟಿ ರೂಗಳ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾಪ ಸಲ್ಲಿಸಿದರು.

Contact Your\'s Advertisement; 9902492681

ಈ ಅನುದಾನವನ್ನು ಕೋವಿಡ್ 19ರ ಮಾರಕ ರೋಗ ನಿಯಂತ್ರಣಕ್ಕೆ ಹಾಗೂ ನೈಸರ್ಗಿಕ ವಿಕೋಪಗಳಿಗೆ ಬಳಕೆ ಮಾಡಲಾಗುವುದು. ಉಳಿದಂತೆ ರೂ.2210 ಕೋಟಿ ಗಳನ್ನು ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದರು.

ನಂತರ ಎಲ್ಲರ ಅನುಮತಿಯೊಂದಿಗೆ  2020ನೇ ಸಾಲಿನ “ಕರ್ನಾಟಕ ಧನ ಧನವಿನಿಯೋಗ (ಸಂಖ್ಯೆ 4) ವಿಧೇಯಕವನ್ನು ಅಂಗೀಕರಿಸಿ, ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ನೀಡುವ ಕೆಲವು ಯೋಜನೆಗಳನ್ನು ಕಡಿತಗೊಳಿಸಲಾಗಿದೆ ಎಂಬ ಚರ್ಚೆಗೆ  ಬಸವರಾಜ ಬೊಮ್ಮಾಯಿ ಅವರು ಕೋವಿಡ್ 19 ಹಾಗೂ ನೈಸರ್ಗಿಕ ವಿಕೋಪಗಳಿಂದ ಸರ್ಕಾರ ನಷ್ಟ ಅನುಭವಿಸಿದ್ದರೂ ಸಹ ಸಾಮಾಜಿಕ ಭದ್ರತಾ ಯೋಜನೆಯಡಿ  ಅಕ್ಟೋಬರ್ ಮಾಹೆಯವರೆಗೆ 67.5 ಲಕ್ಷ ಜನರಿಗೆ ಮಾಸಾಶನ ಮಂಜೂರು ಮಾಡಲಾಗಿದೆ.  ಸುಮಾರು 2.50 ಲಕ್ಷ ಜನರಿಗೆ ಆಧಾರ್ ಜೋಡಣೆ ಸಮಸ್ಯೆಯಿಂದ ಮಾಸಾಶನ ಮಂಜೂರಾಗಿಲ್ಲ. ಇದನ್ನು ಸರಿಪಡಿಸಿದ ತಕ್ಷಣ ಮಾಸಾಶನ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.

ಬೇರೆ ರಾಜ್ಯದವರು ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸಿದ್ದಾರೆ. ಆದರೆ ನಮ್ಮ ಸರ್ಕಾರ ನೌಕರರ ವೇತನವನ್ನು ಕಡಿತಗೊಳಿಸಿಲ್ಲ ಇನ್ನು ಮುಂದೆಯೂ ಸಹ ಕಡಿತಗೊಳಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ತೆರಿಗೆಯಲ್ಲಿ ಸುಧಾರಣೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬಂದರೂ ಸಹ ಯಾವ ಯೋಜನೆಗಳನ್ನು ಕಡಿತಗೊಳಿಸುವುದಿಲ್ಲ.  ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಸದನದಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here