ಕಲಬುರಗಿ ಸೇರಿದಂತೆ ರಾಜ್ಯದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ

0
431

ಕಲಬುರಗಿ: ವಿಜಯಪುರ-ಕಲಬುರಗಿ-ಹುಮನಾಬಾದ ರಾಷ್ಟ್ರೀಯ ಹೆದಾರಿ-50 ಸೇರಿದಂತೆ 10904 ಕೋಟಿ ರೂ. ಮೊತ್ತದ ಕರ್ನಾಟಕದ 33 ರಾಷ್ಟೀಯ ಹೆದ್ದಾರಿಗಳ ಯೋಜನೆಗಳಿಗೆ ಶನಿವಾರ ಕೇಂದ್ರ ರಸ್ತೆ ಸಾರಿಗೆ, ರಾಷ್ಟೀಯ ಹೆದ್ದಾರಿ ಹಾಗೂ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತೀನ್ ಗಡ್ಕರಿ ಅವರು ವಚ್ರ್ಯುವಲ್ ಮೀಟಿಂಗ್ ಮೂಲಕ ಚಾಲನೆ ನೀಡಿದರು.

25 ಶಂಕುಸ್ಥಾಪನೆ ಮತ್ತು 8 ರಾಷ್ಟ್ರಕ್ಕೆ ಸಮರ್ಪಣೆ ಕಾಮಗಾರಿಗಳು ಸೇರಿದಂತೆ ರಾಜ್ಯದ 33 ರಾಷ್ಟ್ರೀಯ ಹೆದ್ದಾರಿಗಳ 1197 ಕೀ.ಮಿ ಉದ್ದದ ರಸ್ತೆಗೆ 10,904 ಕೋಟಿ ರೂ. ವೆಚ್ಚ ವ್ಯಯ ಮಾಡಲಾಗುತ್ತಿದ್ದು, ಶಂಕುಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳು 2022ರ ಹೊತ್ತಿಗೆ ಪೂರ್ಣಗೊಳ್ಳಲಿವೆ ಎಂದ ಸಚಿವರು ದಕ್ಷಿಣ ಭಾಗದಲ್ಲಿ ಕರ್ನಾಟಕ ರಾಜ್ಯವು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇಂದು ಚಾಲನೆ ನೀಡಿದ ನಾನಾ ಯೋಜನೆಗಳು ಕರ್ನಾಟಕದ ವಿವಿಧ ಭಾಗಗಳಿಗೆ ಸಂಪರ್ಕ ಸಾಧಿಸಲು ಸಹಕಾರಿಯಾಗುವುದಲ್ಲದೆ ರಾಜ್ಯದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಸಚಿವ ನಿತೀನ್ ಗಡ್ಕರಿ ಹೇಳಿದರು.

Contact Your\'s Advertisement; 9902492681

ರಸ್ತೆ ಅಭಿವೃದ್ಧಿಯ ಸೂಚಕಗಳಾಗಿದ್ದು, ಸುಗಮ ಸಾರಿಗೆ ವ್ಯವಸ್ಥೆಯಿಂದ ಆರ್ಥಿಕತೆ ದ್ವಿಗುಣಗೊಂಡು ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆಗೆಯಾಗಿ ವಿಫುಲ ಉದ್ಯೋಗ ಅವಕಾಶ ಬೆಳೆಯಲಿವೆ ಎಂದ ನಿತೀನ್ ಗಡ್ಕರಿ ಅವರು ಈಗಾಗಲೆ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮುಂದಿನ ಹಂತದ ಅನುದಾನ ಬಿಡುಗಡೆಗೆ ಕೂಡಲೆ ಹಣ ಬಳಕೆ ಪ್ರಮಾಣ ಪತ್ರ ರಾಜ್ಯ ಸರ್ಕಾರ ಸಲ್ಲಿಸಬೇಕು ಎಂದರು.

ಹೊಸ ಎಥೆನಾಲ್ ನೀತಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ 22 ರೂ. ಗಳಿದ್ದು, ಕೇಂದ್ರ ಸರ್ಕಾರ 34 ರೂ. ಗಳು ನೀಡಿ ಖರೀದಿಸುತ್ತಿದೆ. ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಹೊಸ ಎಥೆನಾಲ್ ಉತ್ಪಾದನೆಗೆ ನೀತಿಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ಕಬ್ಬು ಬೆಳೆಯುವುದರಿಂದ ಇಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿದ್ದು, ಪೆಟ್ರೋಲ್‍ಗೆ ಪರ್ಯಾಯವಾಗಿ ಎಥೆನಾಲ್ ಬಳಕೆಗೆ ಕರ್ನಾಟಕ ಸರ್ಕಾರವು ಮುಂದಾಗಬೇಕು ಎಂದರು.

ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದ ವಿಡಿಯೋ ಕಾನನ್ಫರೆನ್ಸ್‍ನಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಶಿರಾಡಿ ಘಾಟ್ ಸುರಂಗ ಮಾರ್ಗ, ಚಾರ್ಮುಡಿ ಘಾಟ್, ಬೆಂಗಳೂರು-ತುಮಕೂರು ಅಷ್ಠ ಪಥದ ರಸ್ತೆ ಯೋಜನೆಗೆ ಅನುಮೋದನೆ ನೀಡಬೇಕು ಮತ್ತು ಇತ್ತೀಚೆಗೆ ನೆರೆ ಹಾವಳಿಯಿಂದ ಹಾನಿಯಾದ ಹೆದ್ದಾರಿಗಳ ದುರಸ್ತಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಇತ್ತ ಕಲಬುರಗಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ ವಿಡಿಯೋ ಕಾನ್ಫೆರೆನ್ಸ್ ಕಾರ್ಯಕ್ರಮದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ಅಫಜಲಪುರ ಶಾಸಕ ಎಂ.ವೈ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ ಪಾಟೀಲ್, ಶಶೀಲ್ ಜಿ. ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಎನ್.ಹೆಚ್.ಎ.ಐ ಕಲಬುರಗಿ ಅನುಷ್ಟಾನ ಕಚೇರಿಯ ವ್ಯವಸ್ಥಾಪಕ ಚಾಲ್ರ್ಸ್ ಜೆ., ಇಂಜಿನೀಯರ್ ಪ್ರದೀಪ ಹಿರೇಮಠ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here