ವಿಜಯಕುಮಾರ ತೇಗಲತಿಪಿ ಅವರ ‘ಭವದ ಬೆಳಕು’ ಕೃತಿ ಜನಾರ್ಪಣೆ

0
31

ಕಲಬುರಗಿ: ಇಡೀ ಸಮಾಜ ಮೌಢ್ಯತೆ, ಕಂದಾಚಾರದಲ್ಲಿ ಮುಳುಗಿದ್ದ ಕಾಲಘಟ್ಟದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಕತ್ತಲೆಯಿಂದ ಬೆಳಕು ತೋರಿದರು. ಕಾಯಕವೇ ಕೈಲಾಸ ಎಂಬ ವಚನಗಳನ್ನು ಸಾರುತ್ತಲೇ ಕಾಯಕ ಮತ್ತು ದಾಸೋಹದ ಕಾರ್ಯ ಮಾಡಿ, ಜಗತ್ತಿಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ವಚನಕಾರರು ತಿದ್ದಿದ್ದು, ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜ ಮತ್ತು ಜೀವನ ಸುಧಾರಣೆಯಾಗಲಿದೆ ಎಂದು ಕಲಬುರಗಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್ ಹೇಳಿದರು.

ಪರೋಪಕಾರಿ ಲಿಂ.ಪ್ರಭಾಕರ ಛಪ್ಪರಬಂದಿ ಸ್ಮರಣಾರ್ಥ ಇಲ್ಲಿನ ಛಪ್ಪರಬಂದಿ ಪ್ರಭಾಕರ ಫೌಂಡೇಷನ್ ವತಿಯಿಂದ ನಗರದ ಕಲಾ ಮಂಡಳದಲ್ಲಿ ರವಿವಾರ ಏರ್ಪಡಿಸಿದ ಸಮಾರಂಭದಲ್ಲಿ ಸಾಂಸ್ಕೃತಿಕ ಸಂಘಟಕದ ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ ‘ಭವದ ಬೆಳಕು’ ವೈಚಾರಿಕ ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ವಚನಗಳು ನಮ್ಮ ಅಹಂಕಾರವನ್ನು ನಿವಾರಿಸಿ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತವೆ. ಬದುಕಿನ ಬಗ್ಗೆ ಸಕರಾತ್ಮಕ ಒಲವು ಜೀವಪರ ನಿಲುವನ್ನು ಬೆಳೆಸುತ್ತವೆ ಎಂದರು.

ಕೃತಿ ಪರಿಚಯ ಮಾಡಿದ ಸಾಹಿತಿ ಜಗನ್ನಾಥ ತರನಳ್ಳಿ, ಪ್ರಾಪಂಚಿಕ ಭೌತಿಕ ಕತ್ತಲು ಬೆಳಕಿನ ತುಲನೆ ಮಾಡಿದಾಗ ಕತ್ತಲಿನ ಪ್ರಮಾಣವೇ ಹೆಚ್ಚಾಗಿದೆ. ಹಾಗೆಯೇ ಮತೀಯ ಚಿಂತನೆಗಳ ವಿಚಾರಗಳಲ್ಲಿಯೂ ಮನದ ಕತ್ತಲೆ ಹೆಚ್ಚಾಗಿದೆ. ಇಂಥ ತಮಂಧವಾದ ಕತ್ತಲೆಯನ್ನು ಕಳೆದು ಭವಕ್ಕೆ ಬೆಳಕು ತೋರಿದವರು ಕಲ್ಯಾಣದ ಶರಣರು. ಈ ನಿಟ್ಟಿನಲ್ಲಿ ಲೇಖಕ ವಿಜಯಕುಮಾರ ತೇಗಲತಿಪ್ಪಿ ಅವರು ಭವದ ಬೆಳಕನ್ನು ತೋರುವ ಅರಿವಿನ ದಾರಿಯಲ್ಲಿ ಅನೇಕ ಚಿಂತನೆಗಳನ್ನು ತಮ್ಮ ಪುಸ್ತಕದಲ್ಲಿ ಮೇಳೈಸಿರುವುದು ಸಮಂಜಸವಾಗಿದೆ. ಈ ಕೃತಿ ಸಹಜೀವನ ಬೆಸೆಯುವ ಸೌಜನ್ಯದ ಸಂಜೀವಿನಿ ಎನಿಸುತ್ತವೆ ಎಂದರು.

ಹಿರಿಯ ಮುಖಂಡ ರಾಜುಗೌಡ ನಾಗನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಉದ್ಯಮಿ ಡಾ.ಸುಭಾಷ ಕಮಲಾಪುರೆ, ಮುಖಂಡರಾದ ಅರವಿಂದ ಛಪ್ಪರಬಂದಿ, ವಿ.ಸಿ.ಪಾಟೀಲ, ರಾಜಶೇಖರ ಅಪ್ಪಾಜೀ, ಫೌಂಡೇಷನ್ ಸಂಚಾಲಕರಾದ ಡಾ.ಗುರುರಾಜ ಛಪ್ಪರಬಂದಿ, ಶರಣರಾಜ್ ಛಪ್ಪರಬಂದಿ, ಡಾ.ಬಾಬುರಾವ ಶೇರಿಕಾರ ಮಾತನಾಡಿದರು.

ಪ್ರೊ.ಯಶವಂತರಾಯ ಅಷ್ಠಗಿ, ಮಾಲಾ ಕಣ್ಣಿ, ಮಾಲಾ ದಣ್ಣೂರ, ಹಣಮಂತರಾಯ ಅಟ್ಟೂರ, ವಿದ್ಯಾಸಾಗರ ದೇಶಮುಖ, ಶರಣಮ್ಮ ಪಿ.ಸಜ್ಜನ್, ಸಂತೋಷ ಕುಂಬಾರ, ಶಿಲ್ಪಾ ಜೋಷಿ, ಗುಂಡಣ್ಣ ಡಿಗ್ಗಿ, ದರ್ಮಣ್ಣ ಧನ್ನಿ, ಶರಣಬಸವ ಜಂಗಿನಮಠ, ಜ್ಯೋತಿ ಕೋಟನೂರ, ಮಂಜುಳಾ ಪಾಟೀಲ, ಮೀನಾಕ್ಷಿ ಕುಂಬಾರ, ವಿಶ್ವನಾಥ ತೊಟ್ನಳ್ಳಿ, ಪ್ರಸನ್ನ ವಾಂಜರಖೇಡೆ, ಶಿವಶರಣ ದೇಗಾಂವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನೀನಾಸಂ ತರಬೇತಿದಾರ ವಿಶ್ವರಾಜ್ ಪಾಟೀಲ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ಅಪ್ಪನ ಮಹತ್ವದ ನಾಟಕದ ಪ್ರಯೋಗವು ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here