ಮತದಾನ ಪ್ರತಿಯೊಬ್ಬರ ಹಕ್ಕು: ಹಣಮಂತ ಶೇರಿ

0
38

ಆಳಂದ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಆ ಮೂಲಕ ತಮಗೆ ಬೇಕಾದ ಜನಪ್ರತಿನಿಧಿಗಳನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ಆಳಂದ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಣಮಂತ ಶೇರಿ ಅಭಿಪ್ರಾಯಪಟ್ಟರು.

ಸೋಮವಾರ ತಾಲೂಕಿನ ಖಜೂರಿ ಗ್ರಾಮದ ಗ್ರಾಮ ಪಂಚಾಯತನಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಮತದಾನದ ಪಾವಿತ್ರ್ಯ ಕಾಪಾಡಿಕೊಂಡು ಗೌಪ್ಯವಾಗಿ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಭಾರತ ಸಂವಿಧಾನದ ಪಿತಾಮಹ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಪ್ರಜೆಗಳಿಗೆ ನೀಡಿದ ಮಹತ್ವದ ಹಕ್ಕಾಗಿದೆ ಎಂದರು.

ಮತದಾನದ ಮಹತ್ವ ತಿಳಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಉದಯಕುಮಾರ ಕಂದಗೂಳೆ,  ಗ್ರಾಮಸ್ಥರಾದ ಬಸವರಾಜ ಅಲ್ದಿ, ಶ್ರೀಶೈಲ ಭಿಂಪೂರೆ, ಶರಣಬಸಪ್ಪ ಶೇರಿ, ಕಾಶಿನಾಥ ಬಂಡೆ, ಸೋಮನಾಥ ಬಂಗರಗೆ, ಅಂಗನವಾಡಿ ಕಾರ್ಯಕರ್ತೆಯರಾದ ಮೊತೆಮ್ಮ ಪಟೇಲ, ಸಿದ್ದಮ್ಮ ಸುತಾರ, ರೇಖಾ ಚಂಗಳೆ, ಶಾಂತಾಬಾಯಿ ಭದ್ರೆ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here