ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಖಜಾನೆಯಿಂದ ಹಣ ಸೆಳೆಯದಿರುವುದಕ್ಕೆ ಸಮನ್ವಯೀಕರಣ ಮಾಡಿಕೊಳ್ಳಿ

0
81

ಕಲಬುರಗಿ: ಖಜಾನೆ-2ರ ಅಡಿಯಲ್ಲಿ ಪ್ರತಿ ತಿಂಗಳು ವೇತನ/ ವೇತನೇತರ ಸಂಬಂಧಪಟ್ಟಂತೆ ಕಲಬುರಗಿ ಜಿಲ್ಲಾ ಖಜಾನೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಖಜಾನೆಯಿಂದ ಹಣ ಸೆಳೆದಿರುವುದಕ್ಕೆ ಕಲಬುರಗಿ ಜಿಲ್ಲಾ ಖಜಾನೆ ಕಾರ್ಯಾಲಯಕ್ಕೆ ಕಡ್ಡಾಯವಾಗಿ ಇದೇ ಜೂನ್ 19 ಹಾಗೂ 20 ರಂದು ಎರಡು ದಿನ ಕಚೇರಿ ವೇಳೆಯಲ್ಲಿ ಹಾಜರಾಗಿ (ಹೊಂದಾಣಿಕೆ) ಸಮನ್ವಯೀಕರಣ ಮಾಡಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಖಜಾನೆಯ ಉಪನಿರ್ದೇಶಕ ದತ್ತಪ್ಪಾ ಗೊಬ್ಬುರ ಅವರು ತಿಳಿಸಿದ್ದಾರೆ.

ಅದೇ ರೀತಿ ಉಪಖಜಾನೆಗಳ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ನಿಗದಿತ ಅವಧಿಯಲ್ಲಿ ತಪ್ಪದೇ ಸಂಬಂಧಪಟ್ಟ ಉಪ ಖಜಾನೆಗಳಿಗೆ ಸಂಪರ್ಕಿಸಿ ಸಮನ್ವಯೀಕರಣ (ಹೊಂದಾಣಿಕೆ) ಮಾಡಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here