ಸಮಾನತೆ ಸಮಚಿತ್ತತೆ ಮಠಗಳ ತಳಹದಿ: ಡಾ.ಗಂಗಾಧರ ಶ್ರೀ

0
22

ವಾಡಿ: ಜಾತಿ ಸಮಾನತೆ ಕೋಮು ಸೌಹಾರ್ಧತೆ ಜತೆಗೆ ಮನಸ್ಸಿನ ಸಮಚಿತ್ತತೆಯ ತಳಹದಿಯ ಮೇಲೆ ಮಠಗಳು ನಿರ್ಮಾಣವಾಗಬೇಕು ಎಂದು ಅಬ್ಬೆತುಮಕೂರು ವಿಶ್ವರಾಧ್ಯ ಮಠದ ಪೂಜ್ಯ ಡಾ.ಗಂಗಾಧರ ಮಹಾಸ್ವಾಮೀಜಿ ನುಡಿದರು.

ಸುಕ್ಷೇತ್ರ ಹಳಕರ್ಟಿ ಗ್ರಾಮದಲ್ಲಿ ಕಟ್ಟಿಮನಿ ಹಿರೇಮಠದ ಲಿಂ.ಮುನೀಂದ್ರ ಶಿವಯೋಗಿಗಳ ೩೮ನೇ ಪುಣ್ಯಾರಾಧನೆ ನಿಮಿತ್ತ ಏರ್ಪಡಿಸಲಾಗಿದ್ದ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.

Contact Your\'s Advertisement; 9902492681

ಕ್ತರ ಮನಸ್ಸು ಕಟ್ಟುವ ಕಾರ್ಯ ಮಠಗಳಿಂದ ನಿರಂತರವಾಗಿ ನಡೆಯುತ್ತಿದೆ. ಧಾರ್ಮಿಕ ಆಚರಣೆಗಳು ಹಾಗೂ ಸಾಂಪ್ರದಾಯಿಕ ಪದ್ಧತಿಗಳು ಮುಂದಿನ ತಲೆಮಾರಿಗೆ ಉಳಿಸಲು ಮಠಗಳು ಶ್ರಮಿಸುತ್ತಿವೆ. ಹಳಕರ್ಟಿ ಕಟ್ಟಿಮನಿ ಹಿರೇಮಠವು ಮುನೀಂದ್ರ ಶ್ರೀಗಳ ನಿರಂತರ ಸೇವೆಯಿಂದ ಭಕ್ತೋದ್ಧಾರ ಕಾರ್ಯದಲ್ಲಿ ತೊಡಗಿರುವುದು ಸಂತಸದ ಸಂಗತಿ. ಲಿಂ.ಮುನೀಂದ್ರ ಶ್ರೀಗಳ ಜ್ಞಾನ ದಾಸೋಹ ಕಾರ್ಯ ಮುಂದುವರೆಯಲಿ. ಯಾವ ಮಠದಲ್ಲಿ ಸಮಾನತೆ, ನಿಷ್ಪಕ್ಷಪಾತ, ತ್ಯಾಗ, ನಿಷ್ಟೆಗಳು ನಡೆದಾಡುತ್ತಿರುತ್ತವೋ ಆ ಮಠ ಜನಮುಖಿಯಾಗಿ ಗುರುತಿಸಿಕೊಳ್ಳುತ್ತದೆ. ಹಳಕರ್ಟಿ ಮಠಕ್ಕೆ ಅಂತಹ ಪಾವಿತ್ರ್ಯತೆಯ ಇತಿಹಾಸವಿದೆ ಎಂದು ಸ್ಮರಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಶ್ರೀಸೋಮಶೇಖರ ಸ್ವಾಮೀಜಿ, ಭಕ್ತರ ನೋವು ನಲಿವುಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸುವಲ್ಲಿ ಮುನೀಂದ್ರ ಶ್ರೀಗಳು ಯಶಸ್ವಿಯಾಗಿದ್ದಾರೆ. ಮಠದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಿಂದ ಭಕ್ತರ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ ಎಂದರು.

ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ, ಕಲಕೇರಿ ಹಿರೇಮಠದ ಶ್ರೀಸಿದ್ದಾರಾಮ ಶಿವಾಚಾರ್ಯ, ಹತ್ತಿಕಣಮಸ ವಿರಕ್ತ ಮಠದ ಪ್ರಭುಕಾಂತ ಮಹಾಸ್ವಾಮೀಜಿ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ತಾಪಂ ಸದಸ್ಯ ಬಸವರಾಜ ಲೋಕನಳ್ಳಿ, ಮುಖಂಡರಾದ ಮಲ್ಲಣ್ಣ ಇಸಬಾ, ಮಲ್ಲಣ್ಣ ಸಾಹು ಸಂಗಶೇಟ್ಟಿ, ವೀರಭದ್ರಯ್ಯಸ್ವಾಮಿ ಬೆಲ್ಲದ್, ಪುರಾಣಿಕರಾದ ಮಡಿವಾಳಯ್ಯ ಶಾಸ್ತ್ರೀ ಜೇರಟಗಿ, ಸಂಗೀತ ಕಲಾವಿದ ಯಶವಂತ ಬಡಿಗೇರ, ಮಲ್ಲಿಕಾರ್ಜುನ ಭಜಂತ್ರಿ, ರಾಜಶೇಖರ ಕಟ್ಟಿಸಂಗಾವಿ ಸೇರಿದಂತೆ ನೂರಾರು ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಬಸವರಾಜ ಅವಂಟಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here