2019ರ ಲೋಕಸಭಾ ಚುನಾವಣೆ ದೇಶ ಹಾಗೂ ರಾಜಕೀಯ ದಿಕ್ಕು ಬದಲಿಸುವ ನಿರೀಕ್ಷೆ ಇದೆ. ಇದರ ನೇರ ಪರಿಣಾಮ ದೇಶದ ಪ್ರಜೆಗಳ ಮೇಲೆ ಬಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 2019ರ ಲೋಕಸಭಾ ಚುನಾವಣೆಯ ಮೂಲಕ ದೇಶದ ಗದ್ದುಗೆ ಏರಲು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹವಾ ನಿಯಂತ್ರಿತ, ಕಾರಿಂದ ಕೆಳೆಗೆ ಇಳಿಯದ ರಾಜಕಾಣಿಗಳು, ಸುಡುವ ಬಿಸಿಲು ಲೆಕ್ಕಿಸದೆ ಫೀಲ್ಡ್ ಗೆ ಇಳಿದು ಮತದಾರರ ಮನವೊಲಿಸುವ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮತದಾರರ ದೇವರುಗಳು ಯಾರಿಗೆ ಆಶೀರ್ವಾದ ಮಾಡಿ ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ. ಆದರೆ ಮತದಾರರು ಮತದಾನ ಪೂರ್ವದಲ್ಲಿ ರಾಜಕೀಯ ಪಕ್ಷಗಳ ಕುರಿತು ಯಾವ ದೃಷ್ಟಿಕೋನ ಹೊಂದಿದ್ದಾರೆ ಎನ್ನುವುದು ಕುತೂಹಲಕಾರಿಯಾದ ಪ್ರಶ್ನೆಯಾಗಿದೆ.
ಜನತೆಯ ರಾಜಕೀಯ ದೃಷ್ಟಿಕೋನ ಹೇಗಿರುತ್ತದೆ ಎಂಬ ಚಿಂತಿಸುತ್ತಲೆ ಇದೇ ಏ.5 ರಂದು ಕಲಬುರ್ಗಿಯಿಂದ ಬೆಂಗಳೂರಿಗೆ ಪಯಣಿಸುವ ರೈಲಿನಲ್ಲಿ ಕುಳಿತು ಜನತೆಯ ಆವಭಾವಗಳನ್ನು ನೋಡುತ್ತಿದ್ದೆ.
ಸೋಲಾಪುರ ಹಾಸನ್ ರೈಲಿನಲ್ಲಿ ಎಸ್-4 ಬೊಗಿಯಲ್ಲಿ ನನ್ನ ಸೀಟು ಕಾಯ್ದಿರಿಸಲಾಗಿತ್ತು. ಸಮಯ ರಾತ್ರಿ 10 ಗಂಟೆಗೆ ಪಕ್ಕದ ಸೀಟ್ ನಿಂದ ಲೋಕ ಸಭೆ ಚುನಾವಣೆಯ ಕುರಿತು ಚರ್ಚೆ ಆರಂಭವಾಯಿತು.
ನನ್ನ ಪಕ್ಕದ ಸೀಟ್ ನಲ್ಲಿರುವ ಜೇವರ್ಗಿ ತಾಲೂಕಿನ ನಿವಾಸಿ ಇನ್ಮೊಬ್ಬ ವ್ಯಕ್ತಿ ಬಹುಷಃ ಅವರು ಅಳಂದ ತಾಲೂಕಿನ ನಿವಾಸಿ ಇದ್ದಿರಬಹುದು, ಅವರಿಬ್ಬರ ಮಧ್ಯೆ ಚುನಾವಣೆ ಚರ್ಚೆ ಆರಂಭವಾಯಿತು.
ಜೇವರ್ಗಿ ವ್ಯಕ್ತಿ: ಮೋದಿ ಬಹಳಷ್ಟು ಒಳ್ಳೆಯ ಕೆಲಸಮಾಡಿದ್ದಾರೆ, ಮತ್ತೊಮ್ಮೆ ಮೋದಿನೇ ಪ್ರಧಾನಿಯಾಗಬೇಕು ಎಂದು ತಮ್ಮ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ನೋಡಿ ಹೇಳತೋಡಗಿದರು.
ಅಷ್ಟರಲ್ಲಿಯೇ ಪಕ್ಕದ ಸೀಟಿನಲ್ಲಿದ್ದ ಅಳಂದ ಮೂಲದ ವ್ಯಕ್ತಿ ರೊಚ್ಚಿಗೆದ್ದು ಪ್ರಶ್ನೆ ಕೇಳಲು ಆರಂಭಿಸಿದರು.
ಅಳಂದ ಮೂಲದ ವ್ಯಕ್ತಿ: ಮೋದಿ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಸರ್, ಒಂದೆರಡು ಉದಾಹರಣೆ ಕೊಡಿ ಎಂದು ಕೇಳಿದರು.
ಜೇವರ್ಗಿ ವ್ಯಕ್ತಿ: ಸರ್ಜಿಕಲ್ ಸ್ರ್ಟೈಕ್ ಮಾಡಿದ್ದಾರೆ. ಮೋದಿಯಿಂದ ದೇಶಕ್ಕೆ ಭದ್ರತೆಯಿದೆ ಎಂದರು.
ಅಳಂದ ಮೂಲಕದ ವ್ಯಕ್ತಿ: ಮೋದಿ ಏನು ಬಂದೂಕು ತಗೊಂಡು ಯುದ್ಧಕ್ಕೆ ಹೋಗಿದ್ರಾ? ಅಥವಾ ಬಾಂಬ್ ತಯಾರಿಸಿ ಸೈನಿಕರಿಗೆ ನೀಡಿದ್ರಾ, ಅವರು ತನ್ನ ಕರ್ತವ್ಯವನ್ನು ಮಾತ್ರ ಮಾಡಿದ್ದಾರೆ. ಈ ಕೆಲಸವನ್ನು ಎಲ್ಲ ಪ್ರಧಾನಿಗಳು ಮಾಡಿದ್ದಾರೆ ಇದನ್ನು ಹೊರತುಪಡೆಸಿ ಬೇರೇನು ಮಾಡಿದ್ದಾರೆ ಹೇಳಿ ಸರ್ ಎಂದರು.
ಜೇವರ್ಗಿ ಮೂಲದ ವ್ಯಕ್ತಿ: ಬಹಾಳಷ್ಟು ಕೆಲಸ ಮಾಡಿದ್ದಾರೆ. ಒಂದೇ ಎರಡೇ ಅದು ಹೇಳಲು ಅಸಾಧ್ಯ. ಅಷ್ಟು ಕೆಲಸ ಮಾಡಿದ್ದಾರೆ ಮೋದಿ ಎಂದರು.
ಅಳಂದ ಮೂಲದ ವ್ಯಕ್ತಿ: ರೊಚ್ಚಿಗೆದ್ದು, ಸುಮ್ ಸುಮ್ನೆ ಏನೇನೋ ಹೇಳಬ್ಯಾಡ್ರಿ. ಮೋದಿ ಅಸಮರ್ಥ ನಾಯಕ ಅವನಿಂದ ದೇಶ ಹಾಳಾಗಿದೆ, ಅಲ್ಲದೆ ಮೋದಿ ಕಾರಣದಿಂದ ಯುವಜನರು ಹಾಳಾಗುತ್ತಿದ್ದಾರೆ. ಬಾರ್ ಗಳಲ್ಲಿ ಹೋಗಿ ಕುಡಿಯುವುದನ್ನು ಕಲ್ತಿದಾರೆ. ಉದ್ಯೋಗ ನೀಡಕ್ಕಾಗಿಲ್ಲ. ಬರೆ ಭಾಹಿಯೋ ಬಹನೋ ಎಂದು ಭಾಷಣ ಮಾಡುತ್ತಾನೆ. ಪ್ರಾಮಾಣಿಕವಾಗಿ ಮತನಾಡಿ ಸರ್ ಹಿಗೇಲ್ಲ ಸುಮ್ನೆ ಮಾತ್ನಾಡಬೇಡಿ ಎಂದರು. ಹೆಂಡ್ತಿಗೆ ಬಿಟ್ಟವನು ದೇಶ ಹೇಗೆ ಆಳ್ತಾನೆ ಸರ್.
ಜೇವರ್ಗಿ ಮೂಲಕದ ವ್ಯಕ್ತಿ: ಬುದ್ದ ಹೆಂಡ್ತಿ ಬಿಟ್ಟಿಲ್ವಾ..?
ಅಳಂದ ಮೂಲದ ವ್ಯಕ್ತಿ: ಸರ್ ನಿಮಗೆ ಬುದ್ಧನ ಬಗ್ಗೆ ಎಷ್ಟುಗೊತ್ತು? ಆಗಿನ ಕಾಲ ಬೇರೆಯಾಗಿತ್ತು ಎಷ್ಟು ಬೇಕೋ ಅಷ್ಟು ಹೆಣ್ಣು ಮಕ್ಕಳನ್ನು ಇಟ್ಕೊಬಹುದಾಗಿತ್ತು ಅದೇ ವೇಳೆಯಲ್ಲಿ ಎಷ್ಟೊ ಜನರನ್ನು ಬಿಡಬಹುದಿತ್ತು. ರಾಜತಾಂತ್ರಿಕ ಆಳ್ವಿಕೆಯಲ್ಲಿ ಏನುಬೇಕಾದರು ಮಾಡಬಹುದಿತ್ತು ಸರ್. ಆದರೆ ಆಗಿನ ಕಾಲ ಈಗಿಲ್ಲ. ಈಗ ಪ್ರಜಾತಾಂತ್ರಿಕ ಆಳ್ವಿಕೆ. ಈಗ ಹಂಗೇನಾದರೂ ಮಾಡಿದರೆ ಜನ ಮೆಟ್ತಗೊಂಡು ಹೊಡಿತಾರೆ. ಮೋದಿಯಿಂದ ದೇಶ ಹಾಳಾಗಿದೆ. ನೋಟ್ ಬ್ಯಾನಿಂದ ಬಡವರ ಬದುಕು ಹಾಳಾಗಿದೆ. ಅವರು ಮಾಡಿದ ಒಂದೊಳ್ಳೆ ಕೆಲಸ ಇದ್ದರೆ ಹೇಳಿ ನೋಡೋಣ ಸರ್ ಎಂದು ಬೆನ್ನು ಬಿದ್ದರು.
ಜೇವರ್ಗಿ ಮೂಲದ ವ್ಯಕ್ತಿ: ಹಾಗಾದರೆ ಮೋದಿ ಒಂದೂನೂ ಒಳ್ಳೆ ಕೆಲಸ ಮಾಡಿಲ್ವಾ? ಎಂದು ಪ್ರಶ್ನಿಸಿದರು.
ಅಳಂದ ಮೂಲದ ವ್ಯಕ್ತಿ: ಹೇಳಿ ಯಾವುದು ಮಾಡಿದ್ದಾರೆ. ಸ್ವಚ್ಛ ಭಾರತ ಎಂದು ಹೇಳುತಾರೆ ಅದಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದಾರೆ. ನಾನು ಕೂಡ ಲಿಂಗಾಯತ ಹಾಗೂ ಬಿಜೆಪಿ ಫಾಲೋವರ್ಸ್. ಆದರೆ ಸುಮಸುಮ್ನೆ ಹೊಗುಳುವುದರಲ್ಲಿ ಅರ್ಥವಿಲ್ಲ. ಇದರಿಂದ ನಮಗೆ ನಾವೆ ಮೋಸ ಹೊಗ್ತಿವಿ ಎಂದು ನನ್ನತ್ತ ತಿರುಗಿ ನೋಡಿದರು. ನಾನು ಒಂದು ಮುಗುಳ್ನಗೆ ಬೀರಿ ಸುಮ್ನೆ ಅವರ ಮಾತನ್ನು ಕೇಳುತ್ತಿದ್ದೆ. ಅಳಂದ ಮೂಲದ ಆ ವ್ಯಕ್ತಿ ಮಾತು ಪ್ರಾರಂಭಿಸಿ ನಾನೂ ಕಟ್ಟರ್ ಹಿಂದೂತ್ವವಾದಿ. ಆದರೆ ಮೋದಿ ಅವರು ದೇಶಕ್ಕೆ ಏನು ಮಾಡಿದ್ದಾರೆ ಎಂದು ಆಕ್ರೋಶವಾಗಿ ಮೋದಿ ವಿರುದ್ಧ ಬೈಗುಗಳ ಸುರಿಮಳೆಗರೆದ. ಅಳಂದ ಮೂಲದ ವ್ಯಕ್ತಿಯ ಅಕ್ಕ ಪಕ್ಕ ಸೀಟಿನಲ್ಲಿ ಕುಳಿತುಕೊಂಡಿದ್ದ ವ್ಯಕ್ತಿಗಳತ್ತ ನೋಡಿ ಅವರಿಗೂ ಚರ್ಚೆಗೆ ಬನ್ನಿ ಎಂದು ಆಹ್ವಾನಿಸುವಂತಿತ್ತು. ಆದರೆ ಅಳಂದ ಮೂಲದ ವ್ಯಕ್ತಿ ಚೀರಿ ಚೀರಿ ಆಡುತ್ತಿರುವ ಮಾತನ್ನು ಕೇಳಿ ಎಲ್ಲರೂ ಆನಂದ ಪಡುತ್ತಿದ್ದರು.
ಏನೇ ಆಗಲಿ ಅಧುನಿಕ ಭಾರತ ನಿರ್ಮಾಣಕ್ಕಾಗಿ ಚರ್ಚೆಗಳು ನಡೆಯುತಾ ಇರಬೇಕು. ಆದರೆ ಆ ಚರ್ಚೆಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣವಾಗಬೇಕು. ಸಮಾಜದಲ್ಲಿ ಕೆಟ್ಟವರು ಹೇಗಿರ್ತಾರೋ ಅದೇರೀತಿಯಲ್ಲಿ ಒಳ್ಳೆಯ ವರೂ ಇರ್ತಾರೆ. ರಾಜಕೀಯ ಕಾರಣಕ್ಕಾಗಿಯೇ ನಮ್ಮಲ್ಲಿನ ಸಂಬಂಧಗಳು ಬಿರುಕುಗೊಳ್ಳಬಾರದು. ಒಬ್ಬರಿಗೊಬ್ಬರು ಈ ಕಾರಣಕ್ಕಾಗಿಯೇ ದ್ವೇಷ ಮಾಡುವಂತಾಗಬಾರದು.
ದೇಶದಲ್ಲಿ ನಡೆಯುವ ಚುನಾವಣೆ ಸರ್ವರಿಗೂ ಸಮಾನತೆ ಕಲ್ಪಿಸುವ ವೇದಿಕೆ. ನಮ್ಮ ಸಂವಿಧಾನ ಇಂತಹ ವೇದಿಕೆ ನೀಡಿದೆ ಎಂಬ ಕಾರಣಕ್ಕೆ ಸ್ವತಂತ್ರವಾಗಿ ನಾವು ಬಯಸಿದ ವ್ಯಕ್ತಿ, ಪಕ್ಷ ಆಯ್ಕೆ ಮಾಡಿಕೊಳ್ಳುವಂತಾಗಿದೆ. ಹೀಗಾಗಿ ನಾವು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸೋಣ.
ಸಾಜಿದ್ ಅಲಿ
ಮೊ: 9036655646
ಜರ್ನಿ ವಿತ್ ಪಾಲಿಟಿಕ್ಸ್…… – ಇ ಮೀಡಿಯಾ ಲೈನ್
azjhfpjhxv
[url=http://www.g3h0b7wm0uizq5374cj7m9n1b18i95v9s.org/]uzjhfpjhxv[/url]
zjhfpjhxv http://www.g3h0b7wm0uizq5374cj7m9n1b18i95v9s.org/