6 ದಿನದ ಸರದಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಮತ್ತಿಮಡು ಭೇಟಿ

0
55

ಶಹಾಬಾದ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ತಾಲೂಕಾ ಪಂಚಾಯತ ಕಚೇರಿಯ ಮುಂದೆ ನಡೆಯುತ್ತಿರುವ ೬ದಿನದ ಸರದಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಬೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ಕೂಡಲೇ ಕ್ರಮಕೈಗೊಳ್ಳಲಾಗುವುದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಸವರಾಜ ಮತ್ತಿಮಡು ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.ಆ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯ ೨೦೧೬-೧೭ನೇ ಸಾಲಿನಲ್ಲಿ ತೊನಸನಹಳ್ಳಿ(ಎಸ್) ಗ್ರಾಪಂ ಸುಮಾರು ೧೦೭ಫಲಾನುಭವಿಗಳ ಪಟ್ಟಿ ಅನುಮೋದಿಸಬೇಕು. ಅಲ್ಲದೇ ಗೋಳಾ(ಕೆ) ಗ್ರಾಮದಲ್ಲಿ ಎಸ್‌ಸಿಪಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಸುಮಾರು ೩೦ ಲಕ್ಷ ರೂ, ಹಣ ದುರ್ಬಳಕೆ ಮಾಡಿದ ಕೆಆರ್‌ಐಡಿಎಲ್ ಜೆಇ ಹಾಗೂ ನಿವೃತ್ತ ಎಇಇ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕೇಸ್ ದಾಖಲಿಸಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು.

Contact Your\'s Advertisement; 9902492681

ವಿಮರ್ಶಾ ಅಕಾಡೆಮಿ ಸ್ಥಾಪಿಸಲು ಡಾ. ಶ್ರೀಶೈಲ ನಾಗರಾಳ ಒತ್ತಾಯ

ನಂತರ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಈಗಾಗಲೇ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೆನೆ.ಅಲ್ಲದೇ ಅಧಿವೇಶನ ಇರುವುದರಿಂದ ನಾನು ಬೆಂಗಳೂರಿನಲ್ಲಿರುತ್ತೆನೆ.ತಮ್ಮ ನಿಯೋಗ ಬಂದರೆ ತಮ್ಮ ಸಮ್ಮುಖದಲ್ಲಿಯೇ ಅಧಿಕಾರಿಗಳೊಂದಿಗೆ ಬೇಟಿ ಮಾಡಿ ಸಮಸ್ಯೆ ಪರಿಹಾರ ಮಾಡುವತ್ತ ಕೆಲಸ ಮಾಡುತ್ತೆನೆ ಎಂದರು.

ಅಲ್ಲದೇ ಎಸ್‌ಸಿಪಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಸುಮಾರು ೩೦ ಲಕ್ಷ ರೂ, ಹಣ ದುರ್ಬಳಕೆ ಮಾಡಿದ್ದರೇ ಕೆಆರ್‌ಐಡಿಎಲ್ ಜೆಇ ಹಾಗೂ ನಿವೃತ್ತ ಎಇಇ  ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳಲೇಬೇಕು. ಈ ಬಗ್ಗೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ಮಾತನಾಡಿ ಕ್ರಮಕೈಗೊಳ್ಳಲು ತಿಳಿಸುತ್ತೆನೆ. ರುದ್ರಭೂಮಿಗಾಗಿ ಭೂಮಿ ಇಲ್ಲದಿದ್ದರೇ, ಯಾರಾದರೂ ಭೂಮಿ ಮಾರಲು ಮುಂದಾದರೇ, ಸರ್ಕಾರದಿಂದಲೇ ಖರೀದಿಸಿ, ರುದ್ರಭೂಮಿಗೆ ನೀಡಲಾಗುವುದೆಂದು ತಿಳಿಸಿದರು. ಶಾಸಕರು ನೀಡಿದ ಭರವಸೆಗೆ ಪ್ರತಿಭಟನಾಕಾರರು ಸತ್ಯಾಗ್ರಹ ಹಿಂದಕ್ಕೆ ಪಡೆದರು.

ಕುಲಪತಿಗಳ ನೇಮಕದಂತೆ ಕ.ಕ.ಕಲ್ಯಾಣಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಆಗ್ರಹ

ದಸಂಸ ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ,ಲಕ್ಷ್ಮಣ ಕೊಲ್ಲೂರ್, ತಿಪ್ಪಣ್ಣ ಧನ್ನೇಕರ್,ಶರಣು ಧನ್ನೇಕರ್, ಕವಿತಾ.ಎಸ್.ಜಂಬಗಿ, ನಾಗೇಂದ್ರಪ್ಪ ಹುಗ್ಗಿ, ರಾಮಕುಮಾರ ಸಿಂಘೆ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ನಿಂಗಣ್ಣ ಹುಳಗೋಳಕರ್, ರವಿ ರಾಠೋಡ,ಚಂದ್ರಕಾಂತ ಗೊಬ್ಬೂರಕರ್, ಅನೀಲ ಭೋರಗಾಂವಕರ್, ಸದಾನಂದ ಕುಂಬಾರ, ನಾಗರಾಜ ಮೇಲಗಿರಿ,ದತ್ತಾ ಫಂಡ್, ದಿನೇಶ ಗೌಳಿ,ಜ್ಯೋತಿ ಶರ್ಮಾ,ಮಹಾದೇವ ಗೊಬ್ಬೂರಕರ್,ಶರಣು ವಸ್ತ್ರದ್, ವಿಜಯಕುಮಾರ ಮಾಣಿಕ್,ರಾಜು ಕುಂಬಾರ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here