ಸೈಕಲ್ ಸವಾರಿ ಮಾಡಿ ಚಳವಳಿ ಮಾಡಿದ ಕಾನ್ಛೀರಾಮ : ಡಾ. ವಿ. ಟಿ ಕಾಂಬಳೆ

0
106

ಕಲಬುರ್ಗಿ : ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಂತರ ಭಾರತ ದೇಶದಲ್ಲಿ ಬಹುಜನರ ಏಳಿಗೆಗಾಗಿ ಹೋರಾಡಿದ ಮಹಾನ್ ನಾಯಕ ಮಾನ್ಯವಾರ್ ದಾದಾಸಾಹೇಬ್ ಕಾನ್ಛೀರಾಮ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿ. ಟಿ ಕಾಂಬಳೆ ಹೇಳಿದರು.

ಕೃಷ್ಣ ನಗರದ ಮಾನ್ಯವಾರ್ ದಾದಾಸಾಹೇಬ್ ಕಾನ್ಛೀರಾಮ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕಾನ್ಛೀರಾಮ ಅವರ 87 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಬಿಟ್ಟು ಹೋದ ರಥವನ್ನು ಮುನ್ನಡೆಸಿಕೊಂಡು ಬಂದಿರುವವರು ಕಾನ್ಛೀರಾಮ ಆಗಿದ್ದಾರೆ.

Contact Your\'s Advertisement; 9902492681

ವಿವಿಧ ಬೇಡಿಕೆಗಳು ಈಡೇರಿಸಲು ಆಗ್ರಹ

ಒಂದು ದಿನ ಕಾನ್ಷಿರಾಮ್ ಮತ್ತು ಅವರ ಸ್ನೇಹಿತ ಮನೋಹರ್ ಅಟೆ ರಾತ್ರಿ10ಕ್ಕೆ ಪುಣೆಯನ್ನು ತಲುಪಿದರು. ಏಕೆಂದರೆ ಪ್ರತಿ ದಿನ ಪುಣೆಯಿಂದ ಮುಂಬಯಿಗೆ ಹೋಗುತ್ತಿದ್ದ ಕಾನ್ಷಿರಾಮ್ ರವರು ತಮ್ಮ ಕಚೇರಿಯಿಂದ ಪುಣೆ ರೈಲು ನಿಲ್ದಾಣದವರೆಗೆ 15 ಕಿ.ಮೀ ದೂರ ಸೈಕಲ್ ಹೊಡೆದು ಅದನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಿ ಮುಂಬೈಗೆ ಭೇಟಿ ಕೊಟ್ಟು ಮುಂಬೈನಲ್ಲಿ ಚಳುವಳಿಯ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಅದೇ ರೈಲಿನಲ್ಲಿ ಪುಣೆಗೆ ವಾಪಸ್ ಬರುತ್ತಿದ್ದರು. ಹೀಗೆ ನಿತ್ಯ ರೈಲಿನಲ್ಲಿ ಓಡಾಡುತ್ತಿದ್ದ ಕಾನ್ಷಿರಾಮ್ ರ ಬಳಿ ರೈಲು ಪಾಸ್ ಇತ್ತು.

ಅಂದಹಾಗೆ ಆ ದಿನ ಕಾನ್ಷಿರಾಮ್ ಜೀ ಮತ್ತು ಮನೋಹರ್ ಅಟೆ ರೈಲು ಇಳಿದಾಗ ಮೊದಲೇ ಹೇಳಿದಂತೆ ರಾತ್ರಿ ಹತ್ತಾಗಿತ್ತು. ಇಬ್ಬರೂ ಕೂಡ ಸೈಕಲ್ ಹತ್ತಿದವರೆ 15ರಿಂದ 20 ಕಿ.ಮೀ ದೂರ ಇದ್ದ ಬಾಮ್ ಸೆಫ್ ಕಚೇರಿಯನ್ನು ತಲುಪಲು ಪ್ರಾರಂಭಿಸಿದರು. ಮಧ್ಯೆ ಮಧ್ಯೆ ಸೈಕಲ್ ಇಳಿದು ನಡೆದುಕೊಂಡು ಮಾತನಾಡುತ್ತ ಹೋಗುತ್ತಿರಲು ಎಂದಿನಂತೆ ಅವರೆದುರು ಪುಣೆಯ ಸ್ಟೇಷನ್ ಬಳಿಯ ವಂದನಾ ಹೊಟೆಲ್ ಎದುರಾಯಿತು. ವಂದನಾ ಹೊಟೆಲ್ ಆ ಕಾಲದಲ್ಲಿ ಕಡಿಮೆ ಬೆಲೆಯ ಊಟಕ್ಕಾಗಿ ಫೇಮಸ್ ಆಗಿತ್ತು.

ಸಂತೋಷ ಪಾಳಾ ವಿರುದ್ಧ ಕ್ರಮಕ್ಕೆ ಆಗ್ರಹ

ಆದ್ದರಿಂದ ಹೊಟೆಲ್ ಸಿಗುತ್ತಲೇ ಮನೋಹರ ಅಟೆಯವರು ತಮ್ಮ ಜೇಬಿನಲ್ಲಿ ಹಣ ಇಲ್ಲದ್ದರಿಂದ ಕಾನ್ಷಿರಾಮ್ ರವರ ಬಳಿ ಹಣ ಇರಬಹುದು ಅವರೇ ಇಂದು ಊಟ ಕೊಡಿಸುತ್ತಾರೆ ಎಂದುಕೊಂಡರು. ಆದರೆ ಹೊಟೆಲ್ ಮುಂದೆ ಪಾಸ್ ಆಗುತ್ತಿದ್ದರೂ ಕಾನ್ಷಿರಾಮ್ ರವರು ಹೊಟೆಲ್ ಬಳಿ ನಿಲ್ಲಲಿಲ್ಲ. ಆಗ ಅಟೆಯವರು ಕಾನ್ಷಿರಾಮ್ ರವರು ಮಟನ್ ಪ್ರಿಯರು, ಆದ್ದರಿಂದ ಸಮೀಪದಲ್ಲೇ ಇರುವ ನಾನ್ ವೆಜ್ ಹೊಟೆಲ್ ನ್ಯೂಯಾರ್ಕ್ ಹೊಟೆಲ್ ಗೆ ಕರೆದುಕೊಂಡು ಹೋಗಬಹುದು ಅದಕ್ಕೆ ಅವರು ವಂದನಾ ಹೊಟೆಲ್ ಬಳಿ ಏನು ಮಾತಾಡಲಿಲ್ಲ ಎಂದು  ಕೊಂಡರು.

ಏಕೆಂದರೆ ಕಾನ್ಷಿರಾಮ್ ರ ಬಳಿ ದುಡ್ಡು ಜಾಸ್ತಿ ಇದ್ದಾಗ ಆಗಾಗ ಅವರು ಅಟೆಯವರನ್ನು ಮಟನ್ ಊಟಕ್ಕೆ ನ್ಯೂಯಾರ್ಕ್ ಹೊಟೆಲ್ ಗೆ ಕರೆದುಕೊಂಡು ಹೋಗುತ್ತಿದ್ದರು. ಆದ್ದರಿಂದ ಇಂದೂ ಕೂಡ ಹಾಗೆ ಮಾಡಬಹುದು ಎಂದು ಅಟೆಯವರು ಅಂದುಕೊಂಡರು. ಆದರೆ… ನ್ಯೂಯಾರ್ಕ್ ಹೊಟೆಲ್ ಬಂತು, ಕಾನ್ಷಿರಾಮ್ ರವರು ಅಲ್ಲಿಯೂ ಕೂಡ ನಿಲ್ಲಲಿಲ್ಲ! ಆಗ ಅಟೆಯವರಿಗೆ ಅರ್ಥ ಆಗಿತ್ತು “ಓಹ್, ಕಾನ್ಷಿರಾಮ್ ರ ಬಳಿ ದುಡ್ಡಿಲ್ಲ” ಎಂದು. ಹಾಗೆ ಕಾನ್ಷಿರಾಮ್ ರವರಿಗೂ ಅಟೆ ಬಳಿ ಹಣ ಇಲ್ಲ ಎಂಬುದು ಅರ್ಥ ಆಗಿತ್ತು. ಇಬ್ಬರೂ ಪರಸ್ಪರ ಏನೂ ಮಾತಾಡದೇ ಮೌನವಾಗಿ ಬಾಮ್ಸೆಫ್ ಕಚೇರಿ ಕೂಡ ತಲುಪಿದ್ದರು. ಅಂದಹಾಗೆ ಅಂದು ಅವರಿಗೆ ನೀರೇ ಆಹಾರವಾಗಿತ್ತು… ಖಾಲಿ ಹೊಟ್ಟೆಯಲ್ಲೇ ಆ ರಾತ್ರಿ ಕಳೆದರು…!

ಜೇವರ್ಗಿ ಮೋರಾರ್ಜಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ: ವಿಧಾನ ಸಭೆಯಲ್ಲಿ ಡಾ. ಅಜಯ್ ಸಿಂಗ್ ಆಗ್ರಹ

ಹಾಗೆ ಬೆಳಿಗ್ಗೆಯಾಗುತ್ತಲೇ ಅಟೆಯವರಿಗೆ ಅಂದು ರಜೆ ಇದ್ದುದ್ದರಿಂದ ಅವರು ಇನ್ನೂ ಮಲಗೇ ಇದ್ದರು. ಆದರೆ ಮುಂಬೈಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಬೇಕಿದ್ದುದ್ದರಿಂದ ಕಾನ್ಷಿರಾಮ್ ರವರು ಬೇಗ ಎದ್ದು ರೆಡಿಯಾಗಿ ತಮ್ಮ ಒಂದು ಸಣ್ಣ ಬ್ಯಾಗ್ ಸಿಕ್ಕಿಸಿಕೊಂಡು ಅಟೆಯವರಿಗೆ “ಅಟೆ ನಾನು ಹೋಗ್ತಾ ಇದೀನಿ” ಅಂದರು.

ಆಗ ಅಟೆಯವರು “ಆಯ್ರು, ಬಾಗಿಲು ಎಳೆದುಕೊಂಡು ಹೋಗಿ, ನಾನು ಏಳೋದು ಲೇಟ್ ಆಗುತ್ತದೆ” ಎಂದರು. ಅದಕ್ಕೆ ಕಾನ್ಷಿರಾಮ್ ರವರು ಸರಿ ಎಂದು ಬಾಗಿಲು ಮುಚ್ಚಿ ಹೊರಟರು. ಅಂದಹಾಗೆ ಹಾಗೆ ಹೇಳಿ ಐದು ನಿಮಿಷವಾಗಿರಬಹುದಷ್ಟೆ , ಕಾನ್ಷಿರಾಮ್ ರವರು ಮತ್ತೆ ಅಟೆಯವರ ಬಳಿ ಬಂದರು. ಬಂದವರೇ “ಅರೆ ಭಾಯ್ ಅಟೆ, ನಿನ್ನ ಹತ್ತಿರ ಸ್ವಲ್ಪ ದುಡ್ಡಿದೆಯಾ” ಎಂದರು. ಅದಕ್ಕೆ ಅಟೆಯವರು “ಇಲ್ಲವಲ್ಲ” ಎಂದರು.

ಜೇವರ್ಗಿ ಮೋರಾರ್ಜಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ: ವಿಧಾನ ಸಭೆಯಲ್ಲಿ ಡಾ. ಅಜಯ್ ಸಿಂಗ್ ಆಗ್ರಹ

ಅದಕ್ಕೆ ಕಾನ್ಷಿರಾಮ್ ರವರು “ಇರಬಹುದು ನೋಡು, ನಿನ್ನ ಅಕ್ಕಪಕ್ಕ ಅಲ್ಲೇಲ್ಲಾದರೂ ಇಟ್ಟಿರುತ್ತೀಯ” ಎನ್ನಲು ಕಚೇರಿಯಲ್ಲಿ ಹಣ ಒಂಚೂರು ಇಲ್ಲ ಎಂಬುದನ್ನು ತಿಳಿದಿದ್ದ ಅಟೆಯವರು ಕಾನ್ಷಿರಾಮ್ ರವರ ತೃಪ್ತಿಗಾಗಿ ಡ್ರಾಯರ್ ಅನ್ನೆಲ್ಲ ಹುಡುಕಿ “ಇಲ್ಲ, ಒಂದು ಪೈಸೆನೂ ಇಲ್ಲ” ಎಂದರು.

ಅದಕ್ಕೆ ಕಾನ್ಷಿರಾಮ್ ರವರು “ಐದು ಪೈಸೆಯಾದ್ರೂ ಇದ್ದರೆ ನೋಡಪ್ಪ” ಅಂದರು. ಆಗ ಅಟೆಯವರು “ಇಲ್ಲ ಸಾಹೆಬ್ರೆ, ಐದು ಪೈಸೆನೂ ಇಲ್ಲ, ಅದಿರಲಿ, ನಿಮಗ್ಯಾಕೆ ಈಗ ಐದು ಪೈಸೆ” ಎಂದು ಕೇಳಿದರು. ಆಗ ಕಾನ್ಷಿರಾಮ್ ರವರು “ಅರೆ ಯಾರ್, ನನ್ನ ಸೈಕಲ್ ಟೈರ್ ನಲ್ಲಿ ಗಾಳಿ ಇಲ್ಲ. ಟೈರ್ ಗಳಿಗೆ ಗಾಳಿ ತುಂಬಿಸಲು ಕಡೆ ಪಕ್ಷ ಐದು ಪೈಸೆಯಾದರೂ ಬೇಕು” ಎಂದರು.

ಅದಕ್ಕೆ ಅಟೆಯವರು “ಅದಕ್ಕ್ಯಾಕೆ, ನನ್ನ ಸೈಕಲ್ ತಗೊಂಡ್ಹೋಗಿ” ಎನ್ನಲು ಕಾನ್ಷಿರಾಮ್ ರವರು “ನಿನ್ನ ಸೈಕಲ್ ನಲ್ಲೂ ಕೂಡ ಗಾಳಿ ಇಲ್ಲ, ನಾನು ಅದನ್ನು ಕೂಡ ಚೆಕ್ ಮಾಡಿದೆ. ಇರಲಿ ತಲೆ ಕೆಡಿಸಿಕೊಳ್ಳಬೇಡ, ನಾನು ನಡೆದುಕೊಂಡೇ ಹೋಗುತ್ತೇನೆ” ಎನ್ನುತ್ತ ಟ್ರೇನ್ ಹಿಡಿಯಲು 15 ಕಿ.ಮೀ ದೂರದಲ್ಲಿದ್ದ ಸ್ಟೇಷನ್ ನತ್ತ ಓಡಲು ಪ್ರಾರಂಭಿಸಿದರು ಹೀಗೆ ಚಳವಳಿ ಕಟ್ಟಿದ ಮಹಾನ ನಾಯಕ ಕಾನ್ಛೀರಾಮ ಆಗಿದ್ದಾರೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸುನೀತಾ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣರಾವ ನವರಂಗ, ಡಾ. ರಾಜಕುಮಾರ ಎಂ. ದಣ್ಣೂರ,, ಈರಮ್ಮ ಪಾಟೀಲ, ಸುಧಾರಾಣಿ ಪಾಟೀಲ, ಮಹೇಶ, ನಿಂಗಪ್ಪ ಪೂಜಾರಿ, ಇತರರು ಉಪಸ್ಥಿತರಿದ್ದರು. ಚಿತ್ರಶೇಖರ ದಂಡಗೋಳ ನಿರೂಪಿಸಿದರು ಪ್ರಸಾದ್ ಅಸ್ಟಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here