ಮಾಸ್ಕ್ ಧರಿಸದಿದ್ದÀವರಿಂದ ದಂಡ ವಸೂಲಿ: ಕೋವಿಡ್ ಜಾಗೃತಿ ಮೂಡಿಸಿದ ಡಿಸಿ

1
22

ಕಲಬುರಗಿ: ಕಳೆದ 2 ವಾರಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರು ಕರೆ ನೀಡಿದ್ದಾರೆ.

ಶುಕ್ರವಾರ ನಗರ ಪೆÇಲೀಸ್ ಆಯುಕ್ತ ಎನ್. ಸತೀಶ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಸಾಸಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರೊಂದಿಗೆ ನಗರದ ಜಗತ್ ವೃತ್ತ, ಸೂಪರ್ ಮಾರ್ಕೆಟ್ ಹಾಗೂ ಹಾಗರಗಾ ಕ್ರಾಸ್ ಬಳಿ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸುವುದರ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.

Contact Your\'s Advertisement; 9902492681

ಕೋವಿಡ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಈಗಾಗಲೇ ಕಲಬುರಗಿ ಜಿಲ್ಲೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಪಟ್ಟಿಯಲ್ಲಿದೆ. ಸರ್ಕಾರದಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಹೀಗಾಗಿ ಸಾರ್ವಜನಿಕರು ಕೋವಿಡ್ ನಿಯಮ ಪಾಲನೆ ಮಾಡಬೇಕು. ವಯಸ್ಸಾದವರು ಹಾಗೂ 45 ವರ್ಷ ಮೇಲ್ಪಟ್ಟವರು ( ಕೊ-ಮಾರ್ಬಿಡಿಟಿ) ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ. ಮನೆಯಿಂದ ಅಗತ್ಯವಿದ್ದಾಗ ಮಾತ್ರ ಹೊರಗಡೆ ಬರಬೇಕು. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಹೀಗೆ ಎಲ್ಲರೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಅವರು ಹೇಳಿದರು.

ಎಸ್.ಡಿ.ಪಿ.ಐಯೊಂದಿಗೆ ಸೇರಿ ಜನಸೇವೆ, ಶೋಷಿತರಿಗಾಗಿ ಹೋರಾಟಕ್ಕೆ ಸಿದ್ಧ: ಬಿ.ಆರ್ ಭಾಸ್ಕರ್ ಪ್ರಸಾದ್

ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಜಿಲ್ಲೆಯ ಗಾಡಿಯಲ್ಲಿ 5 ಚೆಕ್ ಪೆÇೀಸ್ಟ್ ಗಳನ್ನು ನಿರ್ಮಿಸಲಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ಗಂಟೆಗಳ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ತರಲೇಬೇಕು. ಖಾಸಗಿ ಮತ್ತು ಸರ್ಕಾರಿ ವಾಹನಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಮಾಡಲೇಬೇಕು ಎಂದ ಅವರು ಜಿಲ್ಲೆಗೆ ಬರುವ ಯಾವುದೇ ವಾಹನಗಳ ಪ್ರವೇಶ ನಿμÉೀಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ನಗರ ಪೆÇಲೀಸ್ ಆಯುಕ್ತ ಎನ್. ಸತೀಶ್ ಕುಮಾರ ಅವರು ಮಾತನಾಡಿ, ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆದರಿಂದ ಜನರು ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಜನರು ಜವಾಬ್ದಾರಿಯುತವಾಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಈಶ್ವರ ಹಿಪ್ಪರಗಿ ಶ್ರೀರಾಮ ಸೇನೆಯ ನೂತನ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ

ಮಾನವೀಯತೆ ಮೆರೆದ ಜಿಲ್ಲಾಧಿಕಾರಿ: ಮಾಸ್ಕ್ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಜಗತ್ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಕುಳಿತಿದ್ದ ಬಾಣಂತಿಗೆ ಜಿಲ್ಲಾಧಿಕಾರಿಗಳು ಮಾಸ್ಕ್ ನೀಡಿದರು. ಈ ಸಂದರ್ಭದಲ್ಲಿ ಸ್ವತ: ಜಿಲ್ಲಾಧಿಕಾರಿಗಳೇ ಮಗುವನ್ನು ಎತ್ತಿಕೊಳ್ಳುವ ಮೂಲಕ ಮಾಸ್ಕ್ ಧರಿಸಿಕೊಳ್ಳಲು ತಾಯಿಗೆ ಅನುವಾದರು. ನಂತರ ಸೂಪರ್ ಮಾರ್ಕೆಟ್‍ನ ಕಪಡೆ ಬಜಾರ್‍ನಲ್ಲಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದ, ನಡೆದಾಡಲು ಅಶಕ್ತರಾದ ವಯೋವೃದ್ಧರೋರ್ವರಿಗೆ ಜಿಲ್ಲಾಧಿಕಾರಿಗಳು ಮಾಸ್ಕ್ ತೊಡಿಸಿದರು. ಇನ್ನು ರಸ್ತೆಯಲ್ಲಿ ಸಿಕ್ಕ ಸಿಕ್ಕ ಪುಟ್ಟ ಮಕ್ಕಳಿಗೂ ಖುದ್ದಾಗಿ ಜಿಲ್ಲಾಧಿಕಾರಿಗಳೇ ಮಾಸ್ಕ್ ಹಾಕಿ ಜಾಗೃತಿ ಮೂಡಿಸಿದರು.

ಮಾಮೂ ಮಾಲ್‍ಪೂರಿ ಸೇವನೆ: ಇದೇವೇಳೆ ಕಲಬುರಗಿಯ ಹಳೆ ಮಾರ್ಕೆಟ್‍ನಲ್ಲಿರುವ ಪ್ರಸಿದ್ದ ಮಾಮೂ ಸ್ವೀಟ್ ಅಂಗಡಿಯ ಎಲ್ಲಾ ಅಧಿಕಾರಿಗಳೊಂದಿಗೆ ಮಾಲ್‍ಪೂರಿ ಸೇವಿಸಿ ಆಸ್ವಾದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು 500 ರೂಪಾಯಿ ನೋಟ್ ನೀಡಿದಾಗ ಅಂಗಡಿ ಮಾಲೀಕ ಅಬ್ದುಲ್ ಸಲೀಂ ಪಡೆಯಲು ಒಪ್ಪಲಿಲ್ಲ. ಕೊನೆಗೆ ಅವರನ್ನು ಒಲೈಸಿ ಹಣ ನೀಡಲಾಯಿತು.

ಮಗುವಿಗೆ ಚಪ್ಪಲಿ ಕೊಡಿಸಿದ ಪಾಲಿಕೆ ಆಯುಕ್ತರು: ಸೂಪರ್ ಮಾರ್ಕೆಟನ ಚಪ್ಪಲ್ ಬಜಾರ್‍ನಲ್ಲಿ ಮಗುವೊಂದು ಮಾಸ್ಕ್ ಧರಿಸಿದ್ದರೂ, ಸುಡು ಬಿಸಿಲಿನಲ್ಲಿ ಬರಿಗಾಲಲ್ಲಿ ಸಾಗುವುದನ್ನು ಕಂಡು ಮರುಗಿದ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮಗುವಿಗೆ ಅಲ್ಲಿಯೇ ಇದ್ದ ಅಂಗಡಿಯಲ್ಲಿ ಚಪ್ಪಲಿ ಕೊಡಿಸಿದರು. ಈ ವೇಳೆ ಚಪ್ಪಲಿ ಕೊಡಿಸಲು ಕರೆದುಕೊಂಡು ಹೋಗುವಾಗ ಭಯಬೀತವಾಗಿ ಬಿಕ್ಕಿ-ಬಿಕ್ಕಿ ಅಳುತ್ತಿದ್ದ ಪುಟ್ಟ ಹುಡುಗ, ಚಪ್ಪಲಿ ಕೊಡಿಸಿದ ಬಳಿಕ ಖುಷಿಯಿಂದ ತನ್ನ ತಾಯಿಯೊಂದಿಗೆ ಹೆಜ್ಜೆಹಾಕಿ ಹೊರಟ.

ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಉಮೇಶ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಚಿತವಾಗಿ ಮಾಸ್ಕ್ ವಿತರಿಸಿದರು.

ಈ ಸಂದರ್ಭದಲ್ಲಿ ಎಸಿಪಿ ಅನ್ಷುಕುಮಾರ್, ಪಾಲಿಕೆಯ ಪರಿಸರ ಇಂಜಿನಿಯರ್ ಮುನ್ನಾಫ್ ಪಟೇಲ್, ಆರೋಗ್ಯಾಧಿಕಾರಿ ವಿನೋದ್ ಕುಮಾರ್ ಇನ್ನಿತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here