ಸಗರದಲ್ಲಿ ಬಾಬು ಜಗಜೀವನ್ ರಾಂ ಜಯಂತಿ ಆಚರಣೆ

0
42

ಶಹಾಪುರ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿಗಳಾದ ದಿವಂಗತ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ತಾಲೂಕಿನ ಸಗರ ಗ್ರಾಮದಲ್ಲಿ ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಂದು ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸುವುದಕ್ಕೆ ಹಲವಾರು ನಿರ್ಣಯಗಳನ್ನು ಕೈಗೆತ್ತಿಕೊಂಡು ಹಸಿರು ಕ್ರಾಂತಿಗೆ ಕಾರಣರಾದರು ಡಾ.ಬಾಬು ಜಗಜೀವನ್ ರಾಮ್ ಅವರ ತತ್ವಾದರ್ಶಗಳನ್ನು ನಾವು ನೀವೆಲ್ಲರೂ ಇಂದಿಗೂ ಪಾಲಿಸಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ನೂತನ ಸದಸ್ಯರಾದ ಪರಶುರಾಮ ಮಹಲ್ ರೋಜಾ ಹೇಳಿದರು.

Contact Your\'s Advertisement; 9902492681

ಸುಲಭವಾಗಿ ಯಾವುದನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ: ಡಿ.ಜಿ.ಬಳೂರ್ಗಿ

ಈ ದೇಶಕ್ಕೆ ಇವರು ನೀಡಿದ ಕೊಡುಗೆಗಳು ಅಪಾರವಾಗಿವೆ ಇಂತಹ ಮಹಾನ್ ನಾಯಕನ ಚಿಂತನೆಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಶೋಷಿತರ,ದಮನಿತರ, ದೀನ ದಲಿತರ,ಬಡವರ ಪರವಾಗಿ ಹೋರಾಟ ನಡೆಸಿ ದೇಶದ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಗ್ರಾಮದ ಭೀಮಣ್ಣ,ಭೀಮರಾಯ ಗೂಂಡ, ಭೀಮರಾಯ್ ಉಮರದೊಡ್ಡಿ, ಶಾಂತಪ್ಪ ಸಗರ,ಸೋಪಣ್ಣ ಸಗರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here