ಸ್ವಉದ್ಯೋಗದಿಂದ ಸ್ವಾವಲಂಬನೆ ಜೀವನ: ಶಾಸಕ ಸುಭಾಷ್ ಆರ್ ಗುತ್ತೇದಾರ

0
6

ಆಳಂದ: ಕೌಶಲ್ಯ ಆಧಾರಿತ ತರಬೇತಿ ಪಡೆದು ಸ್ವಉದ್ಯೋಗ ಪ್ರಾರಂಭಿಸಿ ವ್ಯವಹಾರ ನಡೆಸಿದರೆ ಸ್ವಾವಲಂಬನೆಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.

ಇತ್ತೀಚಿಗೆ ಆಳಂದ ಪಟ್ಟಣದ ಆರ್ಯ ಸಮಾಜದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಒಂದು ದಿನದ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶಕ್ಕಾಗಿ ವಿಶೇಷ ಪ್ರಕರಣವೆಂದು ಭಾವಿಸಿ ಸಂಘ ಸ್ಥಾಪಿಸಿ ಅದಕ್ಕೆ ೫೦೦ ಕೋಟಿ ರೂ. ಅನುದಾನ ನೀಡಿದೆ ಈ ಸಂಘವು ಬಸವರಾಜ ಪಾಟೀಲ ಸೇಡಂ ಅವರ ಮಾರ್ಗದರ್ಶನದಲ್ಲಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಂಘದ ಲಾಭವನ್ನು ಈ ಭಾಗದ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಜಿತ್ ಹೆಗಡೆಗೆ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ಸನ್ಮಾನ

ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಇದರಡಿಯಲ್ಲಿ ನೆರವು ಪಡೆದು ಮಹಿಳೆಯರು ಮುಂದೆ ಬರಲು ಪ್ರಯತ್ನಿಸಬೇಕು. ಸ್ತ್ರೀಯರಿಗೆ ಇಂದು ಎಲ್ಲ ರಂಗದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ನುಡಿದರು.

ಈ ಸಮಾರಂಭದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಮಂಜುಳಾ ಡೊಳ್ಳೆ, ಸಂತೋಷ ಪಾಟೀಲ ಮಾತನಾಡಿದರು. ಮುಖಂಡ ಮಲ್ಲಣ್ಣ ನಾಗೂರೆ, ಸುಜ್ಞಾನಿ ಪೊದ್ದಾರ, ರಾಜಶೇಖರ ಸಾಹು, ಮಂದಾಕಿನಿ ಧುತ್ತರಗಾಂವ, ನಾಗರಾಜ ಕಾಬಡೆ, ಶ್ರೀಧರ ದೊಡಮನಿ, ರೀಟಾ ಕಲಬುರಗಿ, ಶ್ವೇತಾ, ಗಾಯತ್ರಿ, ಬಸವರಾಜ ಇದ್ದರು.

ಮಲ್ಲಿನಾಥ ಬಿರಾದಾರ ಸ್ವಾಗತಿಸಿದರೆ, ತಿಪ್ಪೇರುದ್ರ ಸ್ವಾಮಿ ವಂದಿಸಿದರು. ಪ್ರಕಾಶ ಗಾಯಕವಾಡ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here