ಸುಲಭವಾಗಿ ಯಾವುದನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ: ಡಿ.ಜಿ.ಬಳೂರ್ಗಿ

0
110

ಶಹಾಪುರ : ಸಾಧಿಸಬೇಕೆಂಬುವವರಿಗೆ ಬದುಕು ಅಪಾರವಾಗಿದೆ ಜ್ಞಾನ,ವಿಜ್ಞಾನ, ಸಾಮಾಜಿಕ,ಸಾಹಿತ್ಯಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ,ಹೀಗೆ ಹಲವು ಬಗೆಯ ಕ್ಷೇತ್ರಗಳಲ್ಲಿ ಯಾವ ಮೂಲಕವಾಗಿಯೂ ಸಾಧಿಸಲು ಸಾಧ್ಯವಿದೆ.ಇದಕ್ಕೆಲ್ಲಾ ಕಠಿಣವಾದ ಪರಿಶ್ರಮ ನಿರಂತರ ಅಧ್ಯಯನ ಬೇಕಾಗುತ್ತದೆ ಆದ್ದರಿಂದ ಸುಲಭವಾಗಿ ಯಾವುದನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಂಶುಪಾಲರಾದ ಡಿ.ಜಿ.ಬಳೂರಗಿ ಹೇಳಿದರು.

ನಗರದ ಕೋರ್ಟ್ ರಸ್ತೆಯ ಗದ್ದೆ ರಾಯನಗುಡಿ ಹತ್ತಿರವಿರುವ ಸಾಹಿತಿ ಡಿ.ಜಿ.ಬಳೂರಗಿಯವರ ಪ್ರೇಮಕುಂಜ ನಿವಾಸದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಬದುಕಿನದುದ್ದಕ್ಕೂ ಕಂಡುಂಡ ನೋವು ನಲಿವುಗಳ ಜೊತೆಗೆ ಪ್ರತಿಯೊಂದು ಹಂತದಲ್ಲಿ ಶಾಂತಿ, ಸಂಯಮಗಳು,ಅತ್ಯವಶ್ಯಕ ಸಾಧಿಸುವ ಗುರಿ ಛಲ ಬೇಕು ಹಿಡಿದ ಕಾರ್ಯ ಬಿಡದೆ ಪೂರ್ಣಗೊಳಿಸುತ್ತೇನೆ ಎಂಬ ಮನೋಭಾವವಿರಬೇಕು ಎಂದು ನುಡಿದರು.

ಅಜಿತ್ ಹೆಗಡೆಗೆ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ಸನ್ಮಾನ

ನಾನು ಶಿಕ್ಷಕನಾಗಿ,ಉಪನ್ಯಾಸಕನಾಗಿ, ಪ್ರಾಂಶುಪಾಲನಾಗಿ, ಸಾಹಿತಿಯಾಗಿ ಕಥೆ,ಕವನ, ಕಾದಂಬರಿ, ಚಿಂತನ, ಜೀವನ ಚರಿತ್ರೆ,ಪ್ರಬಂಧ,ಹೀಗೆ ಹಲವು ಬಗೆಯ ಸಾಹಿತ್ಯ ರಚಿಸಿರುವ ಆತ್ಮತೃಪ್ತಿ ನನಗಿದೆ ಎಂದರು.

ಮೊಟ್ಟ ಮೊದಲ ಬಾರಿಗೆ ಶ್ರೀ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಜೀವನಚರಿತ್ರೆ ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು ಎಂದಿಗೂ ಮರೆಯುವಂತಿಲ್ಲ ಅಂದು ಮಾತಾ ಮಾಣಿಕೇಶ್ವರಿಯವರಿಂದ 116 ರೂಪಾಯಿಗಳು ಬಹುಮಾನವಾಗಿ ಪಡೆದುಕೊಂಡಿದ್ದು ಇನ್ನೂ ನೂರಹದಿನಾರು ರೂಪಾಯಿಗಳು ಮನೆಯ ದೇವರ ಜಗಲಿಯ ಮೇಲಿಟ್ಟು ದಿನಾಲು ಪೂಜಿಸುತ್ತಿ ಎತ್ತಿದ್ದೇನೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಕೊಟ್ಟರು.

ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ

ಕಲಬುರಗಿಯ ಪತ್ರಕರ್ತ – ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ ಜೀವನ ಜಂಜಾಟದ ನಡುವೆಯೂ ಬದುಕಿನ ಕುಲುಮೆಯಲ್ಲಿ ಸಂಕಷ್ಟಗಳಿಗೆ ಜ್ವಾಲೆಯಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಳೆಯುವ ಆಭರಣವಾಗಿ ರೂಪುಗೊಳ್ಳುವಂತೆ ವ್ಯಕ್ತಿಯ ಸಾಧನೆ ಸಮಾಜದ ಮುಂದೆ ತೆರೆದುಕೊಂಡಾಗ ಮಾತ್ರ ಆ ಸಾಧಕನ & ಸಾಹಿತಿಯ ಬದುಕು ಮತ್ತು ಸಾರ್ಥಕವಾಗುತ್ತದೆ ಎಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಲದೇ ಮುಂಬರುವ ದಿನಗಳಲ್ಲಿ ಸಾಹಿತಿಗಳೊಂದಿಗೆ ಸಂವಾದದ ಜೊತೆಗೆ ಸಮಾಜದಲ್ಲಿರುವ ಹೋರಾಟಗಾರರ,ಪ್ರಗತಿಪರ ರೈತರ,ವಿದ್ಯಾರ್ಥಿ ಸಾಧಕರ ಹಿರಿಯ ಪತ್ರಕರ್ತರೊಂದಿಗೆ ಸಂವಾದವೂ ಕೂಡ ಈ ಟ್ರಸ್ಟ್ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆಯ ಉಪಚುನಾವಣೆಯಲ್ಲಿ ಗೆಲುವು: ಶಾಸಕ ಮತ್ತಿಮಡುಗೆ ಸನ್ಮಾನ

ಖ್ಯಾತ ಸಂಶೋಧಕರು ಹಾಗೂ ಸುರಪುರದ ಸಹಾಯಕ ಖಜಾನೆ ಅಧಿಕಾರಿ ಗಳಾದ ಡಾ.ಎಂ.ಎಸ್. ಸಿರವಾಳರವರು ಮಾತನಾಡುತ್ತಾ ಡಿ.ಜಿ.ಬಳೂರಗಿ ಅವರು ಉತ್ತಮವಾದ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ಮನೆತನದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಯಾವುದೇ ಆಡಂಬರಗಳಿಗೆ ಒಳಗಾಗದೆ ಯಾವುದಕ್ಕೂ ಬೆನ್ನು ಹತ್ತದೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಅಲ್ಲದೆ ಇವರು ಸಾಹಿತ್ಯದ ಹಲವು ಮಜಲುಗಳನ್ನು ಈ ನಾಡಿಗೆ ಪರಿಚಯಿಸಿಕೊಟ್ಟಿರುವ ಕೀರ್ತಿ ಸಲ್ಲುತ್ತದೆ ಎಂದು ನುಡಿದರು ಸಗರನಾಡಿನ ಮೇಲುಸ್ತರದ ಸಾಹಿತಿಗಳಲ್ಲಿ ಇವರೂ ಕೂಡ ಒಬ್ಬರು ಪ್ರಮುಖರಾಗಿದ್ದಾರೆ ಆದ್ದರಿಂದ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಭೆ

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಸಿದ್ಧರಾಮ ಹೊನಕಲ್,ಶಿವಣ್ಣ ಇಜೇರಿ,ಗುರುಬಸಯ್ಯ ಗದ್ದುಗೆ, ನಿವೃತ್ತ ಡಿಡಿಪಿಐ ಮಾಂತಗೌಡ ಮಣ್ಣೂರ,ಗುರುಲಿಂಗಪ್ಪ ಮಿಣಜಿಗಿ, ಶರಣಗೌಡ ಪಾಟೀಲ್,ಸುಧಾಕರ್ ಗುಡಿ,ದೇವಿಂದ್ರಪ್ಪ ಕನ್ಯಾಕೋಳೂರ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಿಯಾಂಕಾ ಜಿ.ಬಳೂರ್ಗಿ ಪ್ರಾರ್ಥಿಸಿದರು,ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮಲ್ಲಿಕಾರ್ಜುನ ಆವಂಟಿ ಸ್ವಾಗತಿಸಿದರು,ಮಡಿವಾಳಪ್ಪ ಪಾಟೀಲ್ ನಿರೂಪಿಸಿದರು,ವೀರೇಶ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here