ಬಾಬಾಸಾಹೇಬ ಬಾಬು ಜಗಜೀವನರಾಮ ದಲಿತ ಸಮುದಾಯದ ಎರಡು ಕಣ್ಣು

0
104

ಶಹಾಬಾದ: ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರು ದೇಶದ ದಲಿತ ಸಮುದಾಯದ ಎರಡು ಕಣ್ಣುಗಳಾಗಿ ಆ ವರ್ಗಗಳ ಅಭಿವೃದ್ಧಿಗೆ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳು ಎಂದು ಶಹಾಬಾದ ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಸೋಮವಾರ ನಗರಸಭೆಯಿಂದ ಆಯೋಜಿಸಲಾದ ಡಾ.ಬಾಬು ಜಗಜೀವನರಾಮ ಅವರ ಜಯಂತೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ದೇಶದ ಆಹಾರ ಕೊರತೆ ನೀಗಿಸುವಲ್ಲಿ ರೈತರಿಗೆ ಹಸಿರು ಕ್ರಾಂತಿ ಮಂತ್ರ ಹೇಳಿಕೊಡುವ ಮೂಲಕ ದಲಿತ ಕುಟುಂಬದಲ್ಲಿ ಜನಿಸಿದ ಡಾ.ಬಾಬು ಜಗಜೀವನ ರಾಮ ದೇಶದ ಬಹು ದೊಡ್ಡ ಶಕ್ತಿಯಾಗಿದ್ದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನರಾಮ ಅವರು ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ . ಇಂತಹ ನಾಯಕರ ಜನ್ಮದಿನಾಚರಣೆ ನಡೆಸುವುದು ಸಾರ್ಥಕ ಎಂದು ಹೇಳಿದರು.

ಸರ್ವರ್ ಸಮಸ್ಯೆ ನಿವಾರಿಸಲು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮನವಿ

ಮಾದಿಗ ಸಮಾಜದ ಮುಖಂಡ ಡಿ.ಡಿ.ಓಣಿ ಹಾಗೂ ರವಿ ಬೆಳಮಗಿ ಮಾತನಾಡಿ, ಯಾವುದೇ ಪ್ರಭಾವವಿಲ್ಲದೇ ತಾವು ಪಡೆದ ಶಿಕ್ಷಣದಿಂದಲೇ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟವರು ಜಗಜೀವನರಾಮ ಅವರು. ದಲಿತ ಸಮುದಾಯದ ಇಂದಿನ ಬದಲಾವಣೆಗೆ ಮತ್ತು ಸ್ಥಿತಿಗತಿಗಳ ಬದಲಾವಣೆಗೆ ಜಗಜೀವನರಾಮ ಕಾರಣರು. ಅನೇಕ ಹುದ್ದೆಗಳನ್ನು ಪಡೆದ ಇವರು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಎತ್ತಿ ಹಿಡಿದು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ರೂಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು.ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ್‌ರಾಮ ಅವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿವೆ ಎಂದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ವ್ಯವಸ್ಥಾಪಕ ಶಂಕರ ಇಂಜಗನೇರಿ, ಸುನೀಲಕುಮಾರ, ರಘುನಾಥ ನರಸಾಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣು ಪಗಲಾಪೂರ, ನಗರಸಭೆಯ ಸದಸ್ಯರಾದಡಾ.ಅಹ್ಮದ್ ಪಟೇಲ್, ಅವಿನಾಶ ಕಂಬಾನೂರ, ಮಾದಿಗ ಸಮಾಜದ ಮುಖಂಡ ನಾಮದೇವ ಸಿಪ್ಪಿ, ರವಿ ಬೆಳಮಗಿ, ಕಿರಣಬಾಬು ಕೋರೆ, ಶಿವರಾಜ ಕೋರೆ, ನೈರ್ಮಲ್ಯ ನಿರೀಕ್ಷಕ ಶಿವರಾಜಕುಮಾರ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here