ಸುರಪುರ: ದೇಶದಲ್ಲಿ ಇಂದು ರೈತರ ಸ್ಥಿತಿ ಹೇಳತೀರದಂತಾಗಿದೆ,ಆದರೆ ರೈತರ ನೆರವಿಗೆ ನಿಲ್ಲಬೇಕಾದ ಸರಕಾರಗಳು ನಿರ್ಲಕ್ಷಿಸಿರುವುದರಿಂದ ರೈತರು ಎಚ್ಚೆತ್ತುಕೊಳ್ಳುವ ಅವಶ್ಯವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿದರು.
ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಶಾಖೆ ರಚನೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರೈತರು ಸಂಘಟಿತರಾಗದಿದ್ದರೆ ಮುಂದೆ ರೈತರು ದೊಡ್ಡ ಗಂಡಾಂತರ ಹೆದರಿಸುವ ಸ್ಥಿತಿ ನಿರ್ಮಾಣವಾಗಲಿದೆ.ಆದ್ದರಿಂದ ತಾವೆಲ್ಲರು ಸಂಘಟನೆಗೆ ಸೇರುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿ ಸರಕಾರಗಳಿಗೆ ಎಚ್ಚರಿಸುವ ಕೆಲಸ ಮಾಡುವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣಾ ಜಂಪಾ ಸುರಪುರ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ ಹುಣಸಗಿ ತಾಲೂಕು ಸಂಘಟನಾ ಕಾರ್ಯದರ್ಶಿ ಅವಿನಾಶ ನಾಯಕ ಮಲ್ಲಣ್ಣ ಹಾಲಬಾವಿ ಭೀಮಣ್ಣ ಹವಲ್ದಾರ್ ಸೇರಿದಂತೆ ಅನೇಕರಿದ್ದರು.
ಪದಾಧಿಕಾರಿಗಳು: ಗೌರವಾಧ್ಯಕ್ಷ ಪ್ರಭು ದೊರೆ, ಅಧ್ಯಕ್ಷ ಮೌನೇಶ ಲಿಂಗದಹಳ್ಳಿ ಉಪಾಧ್ಯಕ್ಷ ಶಾಂತಪ್ಪ ಮೇಲಿನಮನಿ ಪ್ರಧಾನ ಕಾರ್ಯದರ್ಶಿ ಅಂಬ್ರೇಶ ಗುಡಗುಂಟಿ ಖಜಾಂಚಿ ಚನ್ನಪ್ಪಗೌಡ ಪೊಲೀಸ್ ಪಾಟೀಲ್ ಸಹ ಕಾರ್ಯದರ್ಶಿ ಹಣಮಂತ್ರಾಯಗೌಡ ಮಾಲಿ ಸಂಘಟನಾ ಕಾರ್ಯದರ್ಶಿ ಈರಪ್ಪ ನಗರಗುಂಡ ಕಾರ್ಯಾಧ್ಯಕ್ಷ ಶಿವಣ್ಣ ಬೊಮನಹಳ್ಳಿ ಸಂಘಟನಾ ಸಂಚಾಲಕರು ಅಶೋಕ ಗುತ್ತೇದಾರ ಅವರನ್ನು ನೇಮಕಗೊಳಿಸಲಾಯಿತು.