ಮಾವಿನ ಸುರಕ್ಷಿತ ಕಟಾವು ಮತ್ತು ರಾಸಾಯನಿಕ ಮುಕ್ತ ಪಕ್ವತೆ ವಿಧಾನ

0
19

ಕಲಬುರಗಿ: ಮಾವು ಹಣ್ಣುಗಳ ರಾಜ ಎಂದೇ ಪ್ರಖ್ಯಾತವಾಗಿರುವ ಹಣ್ಣು. ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಬಳಕೆ ಮಾಡುವ ಹಣ್ಣು. ಇದರಲ್ಲಿ ವಿಟಾಮಿನ್ ಎ ಮತ್ತು ವಿಟಾಮಿನ್ ಸಿ ಹೆಚ್ಚಾಗಿದ್ದು ಇದನ್ನು ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಿ ಒಳ್ಳೆ ಆರೊಗ್ಯ ಕಾಪಾಡಿಕೊಳ್ಳು ಪ್ರಮುಖ ಕಾರಣವಾಗಿದೆ.

ಪ್ರತಿ ಗಿಡದಲ್ಲಿ ಉತ್ತಮ ಕಾಯಿಕಟ್ಟಿ ಹಣ್ಣಾದರು ಕೊಯ್ಲು ಹಂತದಲ್ಲಿ ಉತ್ತಮ ಕಟಾವು ಮಾಡುವ ಮತ್ತು ಪಕ್ವತೆಯ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳ ಇಳುವರಿ ಪಡೆಯಬಹುದು. ಆದ್ದರಿಂದ ಐ.ಐ.ಹೆಚ್.ಆರ್ ಬೆಂಗಳೂರು ಅಭಿವೃದ್ಧಿ ಪಡಿಸಿದ ಮ್ಯಾಂಗೋ ಹಾರ್ವೆಸ್ಟರ್ ಮತ್ತು ಮನೆಯಲ್ಲೇ ಸಾವಯವ ಪದ್ಧತಿಯಲ್ಲಿ ಹಣ್ಣುಗಳನ್ನು ಪಕ್ವತೆ ಮಾಡಬಹುದು. ಇದು ಮಾವು ಬೆಳೆಗಾರರಿಗೆ ವರದಾನವಾಗಿದೆ.

Contact Your\'s Advertisement; 9902492681

ಮ್ಯಾಂಗೋ ಹಾರ್ವೆಸ್ಟರ್ ಉಪಯೋಗಗಳು: ಗಾಳಿ, ಬಿಸಿಲು ಸನ್ನಿವೇಶದಲ್ಲೂ ಸುರಕ್ಷಿತವಾಗಿ ಕಟಾವು, ಕಡಿಮೆ ಕೌಶಲ್ಯದಿಂದ ಉತ್ತಮ ಕೆಲಸ, ಮಾವು ನೆಲಕ್ಕೆ ಬಿದ್ದು ಕೀಟ, ರೋಗ ಬಾರದಂತೆ ತಡೆ, ಹಣ್ಣಿನಲ್ಲಿರುವ ಪೋಷಕಾಂಶ ಸುರಕ್ಷಿತ,         ತೊಗಟೆಯ ಅಂಟು ದ್ರವ ಸ್ರಾವಿಸುವಿಕೆ ಕಡಿಮೆ, ಕೆಲಸಗಾರರು ಕಡಿಮೆ ಶಕ್ತಿ ಬಳಸದಿದ್ದರು, ಕೋಲ್ ಮೂಲಕ ಕಟಾವು ಸಾಧ್ಯ, ಸುರಕ್ಷಿತ ಪ್ಯಾಕಿಂಗ್ ಮತ್ತು ಸಾಗಾಟ ಅನುಕೂಲ.

ಹಣ್ಣು ಪಕ್ವತೆ ವಿಧಾನ: ಮಾವು ಕಟಾವಿನ ನಂತರ ರಸಾಯನಿಕ ಬಳಸದೇ ಮನೆಯಲ್ಲೇ ಹಣ್ಣನ್ನು ಮಾಗಿಸಿ ಮಾರಾಟ  ಮಾಡಬಹುದು. ಇದರಿಂದ ರಾಸಾಯನಿಕ ಮುಕ್ತ ಹಣ್ಣನ್ನು ತಿನ್ನಬಹುದಾಗಿದೆ. ನಿರ್ದಿಷ್ಟ ಅಳತೆಯ (೧.೨ mಣ x ೧.೨ mಣ x ೧.೨ mಣ) (೨m೨) ೩ ಅಡಿ (೩x೫) ಗಾತ್ರ ಪ್ಲಾಸ್ಟಿಕ್ ಬಳಸಿ ಚೌಕಾಕಾರ ಅಥವಾ ಆಯತಾಕಾರದಲ್ಲಿ ಬಾಕ್ಸ್ ರೀತಿ ಮಾಡಿ ಟ್ರೆಗಳಲ್ಲಿ ಹಣ್ಣುಗಳನ್ನು ಸುರಕ್ಷಿತವಾಗಿ ತುಂಬಿ ಗಾಳಿಯಾಡದಂತೆ ಬಿಗಿಯಾಗಿ ಕಟ್ಟುವುದು. ಕೇವಲ ೪ ದಿನಗಳಲ್ಲಿ ಹಣ್ಣು ಮಾಗಿ ತಿನ್ನಲು ಯೋಗ್ಯವಾಗಿರುತ್ತದೆ. ಮನೆಯಲ್ಲೇ ಹಣ್ಣುಗಳನ್ನು ಮಾಗಿಸಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು ಎಂದು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ತೋಟಗಾರಿಕೆ ವಿಜ್ಞಾನಿ ಡಾ. ವಾಸುದೇವ ನಾಯ್ಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here