ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ: ದಲಿತ ಸಂಘರ್ಷ ಸಮಿತಿ ಆಗ್ರಹ

0
12

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಹಾಗೂ ಹಳ್ಳಿ ಗಳ ವ್ಯಾಪ್ತಿಯಲ್ಲಿ ಬರುವ ಹಲವಾರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಧೃಡಪಟ್ಟ ರೋಗಿಗಳಿಗೆ ಕೇಂದ್ರದಲ್ಲಿ ಪ್ರತ್ಯೇಕವಾದ ವಾರ್ಡ್ಗಳನ್ನು ಗುರುತಿಸಿ ಚಿಕಿತ್ಸೆ ನೀಡುವಂತೆ ಆದೇಶಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಶಾಖೆ ಜೇವರ್ಗಿ ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ತಶಿಲ್ದಾರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ರಾಜ್ಯದಲ್ಲಿ ಕರೋನವೈರಸ್ ಎರಡನೆ ಅಲೆ ಭೀಕರ ಪ್ರಮಾಣದಲ್ಲಿ ಆವರಿಸುತ್ತಿದ್ದ ಸಾಮಾನ್ಯ ಜನರ, ಕೂಲಿಕಾರ್ಮಿಕರ ಮಧ್ಯಮವರ್ಗದವರ, ಹಾಗೂ ಬಡವರ ಬದುಕಿಗೆ ತುಂಬಲಾರದ ನಷ್ಟವಾಗಿದೆ. ಆದರೆ ಸರಕಾರ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಆಮೆಗತಿಯಲ್ಲಿ ನಡೆದಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

Contact Your\'s Advertisement; 9902492681

ಕರೋನವೈರಸ್ ಧೃಡ ಪಟ್ಟರು ಸರಕಾರದ ಮತ್ತು ಸರಕಾರದ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಬೆಡ, ವೆಂಟಿಲೇಟರ್ ಗಳು ಆಕ್ಸ ಜನ್ ಸಿಗದೆ ರಸ್ತೆಯ ಮಧ್ಯದಲ್ಲಿ ಹಾಗೂ ಆಸ್ಪತ್ರೆ ಎದುರುಗಡೆ ಜೀವ ಕಳೆದುಕೊಳ್ಳುತ್ತಿರುವುದು ಸಾಮಾನ್ಯ ಸಂಗಸಂಗತಿಯಾಗಿದ್ದುಬೇಡ್ಡ್ ಗಳ ಮಾರಾಟದಲ್ಲಿ ಜಾಲಗಳು ಹುಟ್ಟಿಕೊಂಡಿರುವುದು ಅಮಾನವೀಯ ಸಂಗತಿ. ಸರಕಾರ ಇದಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕರಾದ ಸಿದ್ದರಾಮ ಕಟ್ಟಿ ಕೊಳಕೂರ್ ತಿಳಿಸಿದ್ದಾರೆ.

ತಹಸೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸುವಾಗ ಶಿವಲಿಂಗ ಹೆಗಡೆ ,ಬಸವರಾಜ್ ಕಟ್ಟಿ ,ಮರೆಪ್ಪ ಆಂದೋಲ, ಶ್ರೀನಾಥ್ ಕಟ್ಟಿಸಂಗವಿ, ದೇವರಾಜ ಬಣವಿ, ಸಂಗಣ್ಣ ಹೊಸಮನಿ. ಮನೋಹರ್ ಹೊಸ್ಮನಿ, ಬಂಡೆಪ್ಪ ಬೂಸ ಕೊಳಕೂರ್ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here