ಮಾವಿನ ವಿವಿಧ ತಳಿ: ಕೃಷಿಯಲ್ಲಿ ಶಿಕ್ಷಕನ ಸಾಧನೆ

0
204

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಬೆಟ್ಟಜೇವರ್ಗಿಗ್ರಾಮದ ಶಿಕ್ಷಕರಾದ ಶ್ರೀ ರಮೇಶತಂದ ಶರಣಪ್ಪಾರವರುತಮ್ಮ ನಾಲ್ಕು ಎಕರೆತೋಟದಲ್ಲಿ ಮಾವಿನ ವಿವಿಧ ತಳಿಗಳಾದ ಕೇಸರ, ಮಲ್ಲಿಕಾ.ದಸೇರಿಗಳಂತಹ ವಿವಿಧ ತಳಿಗಳ ಕೃಷಿಂiiನ್ನುಕೈಗೊಂಡು ಯಶಸ್ವಿಯಾಗಿದ್ದಾರೆ.ಇವರುತಮ್ಮ ಶಿಕ್ಷಕ ವೃತ್ತಿಯಜೊತೆ-ಜೊತೆಗೆಕೃಷಿಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಯಶಸ್ವಿಯಾಗುವ ಮೂಲಕ ಮನಸ್ಸಿದ್ದರೆ ಏನಾದರೂ ಸಾಧಿಸಕೊಡಬಹುದೆಂದು ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ.

ಇವರು ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೂತನತಂತ್ರಜ್ಞಾನವನ್ನುತಮ್ಮಜಮೀನಿಗೆ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.ಮೊದಲಿಗೆಇವರುತಮ್ಮಜಮೀನಿನ ಮಣ್ಣು ಮತ್ತು ನೀರಿನ ಪರೀಕ್ಷೆಯ ವರದಿ ಆಧಾರದ ಮೇಲೆ ಸಾವಯವಗೊಬ್ಬರವನ್ನು ಬಳಸಿ ಪರಿಸರ ಸ್ನೇಹಿ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ನೈಸರ್ಗಿಕವಾಗಿರಾಸಾಯನಿಕರಹಿತ ಸಾವಯವ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

Contact Your\'s Advertisement; 9902492681

ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಕನ್ನಡ ಭೂಮಿ ಆಗ್ರಹ

ಈ ಕುರಿತುಅವರನ್ನು ಮಾತನಾಡಿಸಿದಾಗ ನಾನು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವನಾಗಿದ್ದು ನನ್ನ ಶಿಕ್ಷಕ ವೃತಿಯಜೊತೆಗೆ ಕೆವಿಕೆ ವಿಜ್ಞಾನಿಗಳ ಮಾರ್ಗದರ್ಶನದಂತೆಸಾವಯವ ಪದ್ದತಿಯಲ್ಲಿ ಮಾವಿನ ಕೃಷಿಯನ್ನುಆಸಕ್ತಿಯಿಂದಕೈಗೊಂಡು ಈ ಬಾರಿಉತ್ತಮ ಇಳುವರಿಯನ್ನು ಪಡೆದಿದ್ದೇನೆ. ಕೆವಿಕೆ ವಿಜ್ಞಾನಿಗಳಾದ ಡಾ.ವಾಸುದೇವ ನಾಯ್ಕ ಮತ್ತುಡಾ.ಜಹೀರ್‌ಅಹೆಮದ್‌ರವರುಕೊವಿಡ್ ಸಂದರ್ಭದಲ್ಲಿಯೂ ಸೂಕ್ತ ಮಾರ್ಗದರ್ಶನ ನೀಡಿ ಸ್ಥಳೀಯ ಮಾರುಕಟ್ಟೆಯ ಅನುಕೂಲ ಕಲ್ಪಿಸಿಕೊಟ್ಟಿದ್ದಕ್ಕೆ ಆಭಾರಿಯಾಗಿರುತ್ತೇನೆಎಂದರು.ಸಾವಯವಮಾವಿನ ಹಣ್ಣುಗಳಿಗಾಗಿ ಆಸಕ್ತರು ೯೬೧೧೬೩೩೨೩೧ ಸಂಖ್ಯೆಗೆ ಫೊನ್ ಮಾಡುವ ಮೂಲಕ ಖರೀದಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here