ಮಾಜಿ ಸಚಿವ ಕೆ.ಬಿ. ಶಾಣಪ್ಪ ನಿಧನ: ಕಾರಜೋಳ ಹಾಗೂ ಹೊಸ್ಸುರಕರ್ ಸಂತಾಪ

0
60

ಚಿತ್ತಾಪುರ: ಮಾಜಿ ಸಚಿವರಾದ ಶ್ರೀ ಕೆ.ಬಿ. ಶಾಣಪ್ಪ ಅವರ ನಿಧನಕ್ಕೆ ಯುವ ಭಾರತ ಸಮಿತಿಯ ಅಧ್ಯಕ್ಷ ಉಮೇಶ್ ಕಾರಜೋಳ ಹಾಗೂ ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಹೊಸ್ಸುರಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಶಾಣಪ್ಪ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರಾಗಿದ್ದು, ಹಿರಿಯ ರಾಜಕೀಯ‌ ಮುತ್ಸದ್ಧಿಯಾಗಿದ್ದರು.ಅವರು ಕಾರ್ಮಿಕ ದುರೀಣರಾಗಿ,‌ಮೊದಲು ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಎರಡುಬಾರಿ ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ , ರಾಜ್ಯಸಭಾ ಸದಸ್ಯರಾಗಿ ಅಪಾರವಾಗಿ ಜನಸೇವೆ ಮಾಡಿದ ಧೀಮಂತ ನಾಯಕರಾಗಿದ್ದಾರೆ. ಸಂಘಟನಾ ಚತುರರಾಗಿದ್ದರು. ವಾಗ್ಮಿಗಳಾಗಿದ್ದರು.

Contact Your\'s Advertisement; 9902492681

ಅವರ ಅಗಲಿಕೆಯಿಂದ ದುಡಿಯುವ ವರ್ಗಕ್ಕೆ, ರಾಜಕೀಯ ಕ್ಷೇತ್ರಕ್ಕೆ,ಈ ಪ್ರದೇಶಕ್ಕೆ ಅಪಾರ ನಷ್ಟ ಉಂಟಾಗಿದೆ. ಅವರ ಕುಟುಂಬ ವರ್ಗದವರು,ಅನುಯಾಯಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.ಅವರ ಆತ್ಮಕ್ಕೆ ಚಿರಶಾಂತಿ ನೀಡಿ,ಅವರ ಕುಟುಂಬ ವರ್ಗದವರಿಗೆ ಹಾಗೂ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here