ಶಹಾಪುರ: ಕುಡಿಯುವ ನೀರಿನ ಯೋಜನೆಗೆ ಕ್ಯಾಬಿನೆಟ್ ಒಪ್ಪಿಗೆ: ದರ್ಶನಾಪುರ ಹರ್ಷ

0
27

ಶಹಾಪುರ : ಪಟ್ಟಣದ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಭೀಮಾ ನದಿಯಿಂದ ಶಹಾಪುರಕ್ಕೆ ನೀರು ತರುವ ಯೋಜನೆಗೆ ಸರಕಾರದ ಅನುಮತಿ ನೀಡಿದೆ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಬಸವಮಾರ್ಗಕ್ಕೆ ತಿಳಿಸಿದರು.

ಪ್ರತಿ‌ ವರ್ಷ ಮಾರ್ಚ ಎಪ್ರಿಲ್ ಬಂದರೆ ಪಟ್ಟಣದ ಜನತೆಗೆ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿತ್ತು. ಸಕಾಲಕ್ಕೆ ಮಳೆ ಆಗದ್ದರಿಂದ ಫಿಲ್ಟರ್ ಬೆಡ್ ನಲ್ಲಿಯ ನೀರು ಖಾಲಿಯಾಗಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿತ್ತು.

Contact Your\'s Advertisement; 9902492681

ಈ ಬಗ್ಗೆ ವಿಸ್ತೃತ ವರದಿಯೊಂದನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿ ಎರಡು ವರ್ಷಗಳೆ ಕಳೆದಿದ್ದವು. ಜೆಡಿಎಸ್ ಹಾಗೂ ಬಿಜೆಪಿ ಸರಕಾರ ಇದ್ದಾಗ ಫೈನಾನ್ಸಿಯಲ್ ಅನುಮತಿ ಸಿಕ್ಕು, ಕ್ಯಾಬಿನೆಟ್ ಒಪ್ಪಿಗೆಬೇಕಾಗಿತ್ತು.

ಇದೆ ಸಂದರ್ಭದಲ್ಲಿ ಸರಕಾರ ಬಿದ್ದು ಹೋಯಿತು. ತದ ನಂತರ ಬಂದ ಯಡಿಯೂರಪ್ಪನವರು ಅದನ್ನು ಸಾರಾ ಸಗಟ ತಿರಸ್ಕರಿಸಿ‌ ಬಿಟ್ಟಿದ್ದರು.

ಇದೀಗ ಸುರಪುರದ ಶಾಸಕ ರಾಜುಗೌಡ ಪಾಟೀಲರ ಸಹಕಾರದಿಂದ ಇಂದು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ೫೯ ಕೋಟಿ ಪೈಪ್ ಲೈನ್ ಕಾಮಗಾರಿಗೆ ಒಪ್ಪಿಗೆ ನೀಡಿದ್ದು ನನಗೆ ಸಂತಸ ತಂದಿದೆ ಎಂದು ಶಾಸಕ ಶರಣಬಸಪ್ಪಗೌಡ‌ದರ್ಶನಾಪುರ ತಿಳಿಸಿದರು.

ಸರಕಾರದ ಸಚಿವ ಸಂಪುಟಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here