ಅಜೀಂ ಪ್ರೇಮಜೀ ಫೌಂಡೇಷನ್ ಸಹಯೋಗದಿಂದ 800 ಸ್ಲಂ ಜನರಿಗೆ ಆಹಾರದ ಕಿಟ್‌

0
22

ಕಲಬುರಗಿ: ಬುದ್ದ ಪೂರ್ಣಿಮಾ ಅಂಗವಾಗಿ ನಗರದಲ್ಲಿ ಅಜೀಂ ಪ್ರೇಮಜೀ ಫೌಂಡೇಷನ್ ಸಹಯೋಗದಿಂದ ಸ್ಲಂ ಜನಾಂದೋಲನ ಸಂಘಟನೇ ವತಿಯಿಂದ ಕೋವಿಡ-೧೯ ಸಂಕಷ್ಟದಲ್ಲಿರುವ ೮೦೦ ಸ್ಲಂ ಜನರಿಗೆ ಆಹಾರದ ಕಿಟ್‌ಗಳನ್ನು ಸಫಾಯಿ ಕ್ರಮಚಾರಿಗಳು, ಚಿಂದಿ ಅಯ್ಯುವವರಿಗೆ, ವಿಧವೆಯರು, ಹೋಟೆಲ್‌ನಲ್ಲಿ ಕೆಲಸ ಮಾಡುವವರು, ದೇವದಾಸಿಯರು ಕೂಲಿ ಕಾರ್ಮಿಕರು, ವೃದ್ದರು, ಸ್ಲಂ ನಲ್ಲಿ ಕೂಲಿ ಕೆಲಸ ಮಾಡುವಂಥ ಕಾರ್ಮಿಕರಿಗೆ ಆಹಾರದ ಕಿಟಗಳನ್ನು ವಿತರಿಸಲಾಯತು.

ಈ ಸಂದರ್ಭದಲ್ಲಿ ಅಜೀಮ್ ಪ್ರೇಮಜಿ ಫೌಂಡೇಷನ್‌ನ ದಿಲೀಪಕುಮಾರ್ ರಾಠೋಡ್, ಗಂಗಾಧರ ಸ್ವಾಮಿ, ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಅಧ್ಯಕ್ಷೆ ಸುನೀತಾ ಕೊಲ್ಲೂರ್. ಖಜಾಂಚಿ ಸುನಿಲ ಆಳಂದಕರ್, ಸಂಗೀತ ತಲಾವರ್, ರಾಶಿ ರಾಠೋಡ್, ಗೌರಮ್ಮ ಮಕಾ, ರತ್ನಮ್ಮ ದುತ್ತರಗಾವ್, ಶಾರದಾ ಹಿರೇಬಾಜರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here