ಲಾಕಡೌನ್ ಪರಿಶೀಲಿಸಿದ ಎಸ್‌ಪಿ ಸಿಮಿ ಮರಿಯಮ್ ಜಾರ್ಜ

0
80

ಶಹಾಬಾದ:ಕೋವಿಡ್ ಲಾಕಡೌನ್ ನಿಮಿತ್ತ ನಗರದಲ್ಲಿ ಜನದಟ್ಟಣೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬುಧವಾರ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ ನಗರಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

ನಗರದ ಅಂಬೇಡ್ಕರ್ ವೃತ್ತ, ನೆಹರು ವೃತ್ತ, ತ್ರಿಶೂಲ ವೃತ್ತ, ಮಜ್ಜಿದ್ ವೃತ್ತ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ತರಕಾರಿ ಮಾರುಕಟ್ಟೆ, ಬೆಂಡಿ ಬಜಾರ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ವೀಕ್ಷಿಸಿದರು.ಅಲ್ಲದೇ ತೆರಳುವ ಮಾರ್ಗ ಮಧ್ಯೆ ಮಹಿಳೆಯರಿಗೆ ಪ್ರೀತಿಯಿಂದ ಮಾತನಾಡಿಸಿ ಮಾಸ್ಕ್ ಧರಿಸುವಂತೆ ಹೇಳಿದಲ್ಲದೇ ಹತ್ತಾರು ಜನರಿಗೆ ಮಾಸ್ಕ್‌ನ್ನು ವಿತರಿಸಿದರು.

Contact Your\'s Advertisement; 9902492681

ಕಾಮ್ರೇಡ್ ಶಂಕರ್ ಸಹಾ ಅವರಿಗೆ ಶ್ರದ್ಧಾಂಜಲಿ

ನಗರದ ಎಲ್ಲಾ ಪ್ರದೇಶವನ್ನು ಸುತ್ತಾಡಿ ಸೂಕ್ಷ್ಮವಾಗಿ ಗ್ರಹಿಸಿ ಕೋವಿಡ್-೧೯ ನಿಯಂತ್ರಣಕ್ಕೆ ಜಾರಿ ಮಾಡಲಾದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಬೇಕು.ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನದಟ್ಟಣೆ ಆಗದಂತೆ ನಿಗಾವಹಿಸಬೇಕು.ಯಾವುದೇ ಕಾರಣಕ್ಕೂ ಸಮಯ ಮೀರಿದ ಬಳಿಕ ಅಂಗಡಿಗಳನ್ನು ತೆಗೆಯದಂತೆ ನೋಡಿಕೊಳ್ಳಬೇಕು.

ಅಂಗಡಿಗಳು ಕದ್ದು ಮುಚ್ಚಿ ತೆಗೆಯುತ್ತಿದ್ದರೆ ಅಂತಹವರ ಮೇಲೆ ಕ್ರಮಕೈಗೊಳ್ಳಿ.ಅಲ್ಲದೇ ಮಾಸ್ಕ್ ಧರಿಸದವರು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಿ. ಅನಾವಶ್ಯಕವಾಗಿ ಓಡಾಡುತ್ತಿರುವವರ ವಾಹನಗಳನ್ನು ಜಪ್ತಿ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಿ. ಲಾಕ್‌ಡೌನ್ ಸಂಪೂರ್ಣ ಯಶಸ್ವಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಧನ ವಾರ್ತೆ: ಜೋಸೆಫ್ ಜೈಶೀಲ್

ಈ ಸಂದರ್ಭದಲ್ಲಿ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ, ಪಿಐ ಪ್ರದೀಪ ಕೊಳ್ಳ , ಪಿಎಸ್‌ಐ ತಿರುಮಲೇಶ ಕುಂಬಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here