ಡಾ. ಸಿದ್ಧಲಿಂಗಯ್ಯ ಜನರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ: ಶಿವಕಾಂತ ಚಿಮ್ಮಾ

0
41

ಕಲಬುರಗಿ: ದಲಿತ ಧ್ವನಿ ಎಂದೇ ಪ್ರಸಿದ್ಧಿ ಪಡೆದಿದ್ದ ಡಾ. ಸಿದ್ಧಲಿಂಗಯ್ಯ ನವರು ಹಲವು ಹೋರಾಟ ಸಾಮಾಜಿಕ, ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು  ರಚಿಸಿ ಕಷ್ಟದಲ್ಲಿದ್ದ ಜನರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದು ಚಿಂತಕರು, ಶಿಕ್ಷಕರಾದ  ಶಿವಕಾಂತ ಚಿಮ್ಮಾ ಹೇಳಿದರು.

ಸಂತೋಷ ನಗರದ ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಅಖಿಲ ಭಾರತ ಯುವಜನ ಒಕ್ಕೂಟ ಎಐವೈಎಫ್  ಕಲಬುರ್ಗಿ ಜಿಲ್ಲಾ  ಸಮಿತಿ ವತಿಯಿಂದ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಶ್ರೀಯುತರು ನಾಟಕ,     ಪ್ರಬಂಧ, ವಿಮರ್ಶೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡುವುದರೊಂದಿಗೆ ಮನುಷ್ಯರೆಲ್ಲರೂ ಒಂದೇ ಎಂಬ ಸಂದೇಶ ನೀಡಿದವರು.ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ಬೇರೆಯವರಿಗೆ   ಮಾದರಿಯಾಗುವ ಕಾರ್ಯ ಮಾಡಿದ್ದಾರೆ.

Contact Your\'s Advertisement; 9902492681

ಹಲವಾರು ಕ್ರಾಂತಿ ಗೀತೆಗಳ ರಚಿಸಿ ಜನರ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಯ ಕಿಡಿ ಹಚ್ಚುವುದರೊಂದಿಗೆ ಸಮ ಸಮಾಜ  ನಿರ್ಮಾಣದ ಕನಸು ಹೊತ್ತಿ, ನೊಂದ ಜನತೆಯ ಧ್ವನಿಯಾಗಿದ್ದರು ಎಂದು ಹೇಳಿದರು. ನುಡಿ ನಮನ ಆಯೋಜಿಸಿದ ಸಂಘಟನೆ ಜಿಲ್ಲಾಧ್ಯಕ್ಷ ಹಣಮಂತರಾಯ ಎಸ್.ಅಟ್ಟೂರ  ಮಾತನಾಡುತ್ತಾ ಡಾ. ಸಿದ್ದಲಿಂಗಯ್ಯ ನವರು ಕೇವಲ ದಲಿತ ಕವಿಯಾಗದೇ ಮನುಷ್ಯ ಮನುಷ್ಯರನ್ನು ಒ೦ದು ಗೂಡಿಸುವ ಕಾರ್ಯ  ಮಾಡಿದ್ದಾರೆ.

ಅಲ್ಲದೆ ಹಲವಾರು ಕ್ರಾಂತಿಗೀತೆಗಳ ಮೂಲಕ ಬಡವರ, ನಿರ್ಗತಿಕರ,ದಲಿತರ,  ಕೂಲಿ-ಕಾರ್ಮಿಕರ, ರೈತರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿ  ಆದರ್ಶ ವ್ಯಕ್ತಿಯಾಗಿ ಸರ್ವರೂ ನಮ್ಮವರೇ ಎನ್ನುವ ಶರಣರ  ವಿಚಾರಗಳೊಂದಿಗೆ ಜೀವನ ಸಾಗಿಸಿ ನಮ್ಮಂಥ ಯುವ ಜನತೆಗೆ ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ ನೇರ ನಡೆ ನುಡಿಯಿ೦ದ ದಿಟ್ಟತನದ ಜೀವನ ಸಾಗಿಸಿದ್ದಾರೆ  ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಪ್ಪ ಕಟ್ಟಿಮನಿ ಸುಲ್ತಾನಪೂರ,  ವಿಜಯಕುಮಾರ ಬಿರಾದಾರ,  ರೇಖಾ ಬಿರಾದಾರ, ರೇವಣಸಿದ್ಧ ಚಿಮ್ಮಾ, ದಿಲೀಪ ಕುಮಾರ ಭಕರೆ, ನಂದೀಶ ಹೂಗಾರ ತಡಕಲ, ಸೈಯದ್ ಮಿನೋಲೢಾ, ಶರಣಕುಮಾರ ಕಲಕೇರಿ, ವಿಜಯಕುಮಾರ ಪಾಟೀಲ, ನಿರ್ಮಲಾ ಕಟ್ಟಿಮನಿ,  ಚಾವಿ೯ ಕಟ್ಟಿಮನಿ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here