ಸೇಡಂ: ಪ್ರತಿ ಗ್ರಾಮದಲ್ಲಿ ಆಹಾರ ಪದಾರ್ಥದ ಕಿಟ್ ವಿತರಣೆ

0
50

ಸೇಡಂ: ತಾಲೂಕಿನ ಕುರಕುಂಟಾ, ಅಡಕಿ ಗ್ರಾಮದಲ್ಲಿ ಕೋರೋನಾ ಲಾಕಡೌನ ನಿಂದ ತೊಂದರೆಗೆ ಒಳಗಾದ ಬಡ ಕುಂಟುಬಗಳಿಗೆ ಬಾಲರಾಜ್ ಬ್ರಿಗೇಡ್ ವತಿಯಿಂದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಆಹಾರ ಧ್ಯಾನದ ಕಿಟ್ ವಿತರಿಸಿದರು.

ನಂತರ ಮಾತನಾಡಿದ ಅವರು, ಕೊರೊನಾ ಮಹಮಾರಿ ಜನರನ್ನು ದೋಡ್ಡಮಟ್ಟದಲ್ಲಿ ಕಾಡುತ್ತಿದೆ ಅದರಲ್ಲೂ ಸರ್ಕಾರದ ಸೂಚನೆಯಂತೆ ಲಾಕಡೌನ ಆದ ದಿನದಿಂದಲೂ ಎಲ್ಲಾ ಸಮುದಾಯಗಳು ಆರ್ಥಿಕ ಸಂಕಷ್ಟದಿಂದ ನೊಂದಿವೆ. ಹಿಗಾಗಿ ಎಲ್ಲಾ ಬಡವರಿಗೆ ಸೇಡಂ ಮತಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.

Contact Your\'s Advertisement; 9902492681

ನಂತರ ಸೇಡಂ ಪುರಸಭೆ ಮಾಜಿ ಅಧ್ಯಕ್ಷ ಯಕ್ಬಾಲ್ ಖಾನ್ ಮಾತನಾಡಿ ಬಾಲರಾಜ್ ಬ್ರಿಗ್ರೇಡ್ ವತಿಯಿಂದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಅವರು ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯ ಹಂಚುತಿದ್ದಾರೆ ಜೊತೆಗೆ ಸೇಡಂ ಮತಕ್ಷೇತ್ರದ ಎಲ್ಲಾ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪರಣೆ ಹಾಗೂ ಉಚಿತ 2 ಆಂಬ್ಯುಲೆನ್ಸ್ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ. ವಿಜಯಕುಮಾರ ಕುಲಕರ್ಣಿ. ಸಂತೋಷ ಕೇರೋಳ್ಳಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here