ದೇಗುಲ ಭಕ್ತರ ದರ್ಶನಕ್ಕಾಗಿ ಸೋಮವಾರದಿಂದ ಆರಂಭ

0
16

ಕಲಬುರಗಿ; ತ್ಯಾಗದ ಸಂಕೇತ ಮತ್ತು ನಿರ್ಗತಿಕರಿಗೆ ಐತಿಹಾಸಿಕ ಶರಣಬಸವೇಶ್ವರ ದೇಗುಲವು ಭಕ್ತರ ದರ್ಶನಕ್ಕಾಗಿ ಸೋಮವಾರದಿಂದ ಆರಂಭಗೊಳ್ಳಲಿದ್ದು, ರಾಜ್ಯ ಸರಕಾರವು ಈವರೆಗೆ ವಿಧಿಸಿರುವ ಕೋವಿಡ್-೧೯ ಎರಡನೇ ಅಲೆಯ ನಿಬಂಧಗಳನ್ನು ಸಡಿಲಿಸಿದ್ದು ಭಕ್ತರಿಗೆ ದೇವರ ದರ್ಶನಕ್ಕಾಗಿ ಅವಕಾಶ ಕಲ್ಪಿಸಿದೆ.

ದೇವಾಲಯದ ಸ್ವಯಂಸೇವಕರು ಮತ್ತು ಸಿಬ್ಬಂದಿ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವ್ಯಾಪಕವಾಗಿ ಸ್ವಚ್ಚಗೊಳಿಸಿದ್ದು ಮತ್ತು ಶರಣಬಸವೇಶ್ವರ ದೇಗುಲದ ಸಂಪೂರ್ಣ ವಿಸ್ತಾರವಾದ ಸಂಕೀರ್ಣದಲ್ಲಿಯೂ ಸಹ ಸ್ವಚ್ಚತ ಕಾರ್ಯಕೈಗೆತ್ತಿಕೊಂಡರು. ರಾಜ್ಯದಲ್ಲಿ, ವಿಶೇ?ವಾಗಿ ಕಲಬುರಗಿ ನಗರದಲ್ಲಿ ಕೋವಿಡ್-೧೯ ಎರಡನೇ ಅಲೆಯ ತುರ್ತು ಹೇಳಿಕೆಯ ನಂತರ ರಾಜ್ಯ ಸರಕಾರವು ಹೇರಿದ ನಿಬಂಧನೆಗಳನ್ನು ಅನುಸರಿಸಿ ಏಪ್ರಿಲ್ ೨೩ ರಂದು ೧೮ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರ ದೇಗುಲ ಭಕ್ತರಿಗಾಗಿ ದರ್ಶನ ಭಾಗ್ಯ ನಿಲ್ಲಿಸಲಾಯಿತು.

Contact Your\'s Advertisement; 9902492681

ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಮಾತೋಶ್ರಿ ಡಾ.ದಾಕ್ಷಾಯಿಣಿ ಅವ್ವಾಜಿ ಅವರು, ರಾಜ್ಯ ಸರಕಾರವು ವಿಧಿಸಿರುವ ಎಲ್ಲಾ ?ರತ್ತುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ಹೇಳಿದರು.

ಶರಣಬಸವೇಶ್ವರರ ದರ್ಶನ ಹೊಂದಲು ಮುಖವಾಡಗಳನ್ನು (ಮಾಸ್ಕ) ಧರಿಸಿ ತಮ್ಮನ್ನು ಸ್ಯಾನಿಟೈಸ್‌ಗೊಳಿಸಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದರು.

ಪೂಜ್ಯ ಡಾ.ಅಪ್ಪಾಜಿ ಮತ್ತು ಮಾತೋಶ್ರಿ ಡಾ.ಅವ್ವಾಜಿ ಭಕ್ತರಿಗೆ ಶರಣಬಸವೇಶ್ವರರ ದರ್ಶನ ಮತ್ತು ಆಶೀರ್ವಾದವನ್ನು ಪಡೆಯಲು ಮತ್ತು ದೇಗುಲಕ್ಕೆ ಭೇಟಿ ನೀಡುವಾಗ ಸರಕಾರವು ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿಸಬಾರದು ಮತ್ತು ದೇವಾಲಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಿ ಭಕ್ತರ ಸುರಕ್ಷತೆಗಾಗಿ ಎಲ್ಲರೂ ಕೈಜೋಡಿಸಬೇಕು.

ಇಡೀ ದೇವಾಲಯ ಸಂಕೀರ್ಣ ಮತ್ತು ದೇವಾಲಯವನ್ನು ಸ್ವಚ್ಚಗೊಳಿಸುವುದರ ಜೊತೆಗೆ, ದೇವಾಲಯದ ಸ್ವಯಂಸೇವಕರು ಮತ್ತು ಸಿಬ್ಬಂದಿ ಕೂಡ ದೇವಾಲಯದ ಸಂಕೀರ್ಣವನ್ನು ಕೂಡ ಸ್ವಚ್ಚಗೊಳಿಸಿರುವರು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ಅವಕಾಶವಿರುತ್ತದೆ ಮತ್ತು ದೇವಾಲಯದಲ್ಲಿ ಯಾವುದೇ ರೀತಿಯ ಆರತಿ ನಡೆಸಲಾಗುವುದಿಲ್ಲ ಮತ್ತು ರೋಗ ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಭೇಟಿ ನೀಡುವ ಭಕ್ತರಿಗೆ ಯಾವುದೇ ಪ್ರಸಾದವನ್ನು ನೀಡಲಾಗುವುದಿಲ್ಲ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here