ಸಡಗರದ ಮಣ್ಣೆತ್ತಿನ ಅಮವಾಸ್ಯೆ ಆಚರಣೆ

0
17

ಸುರಪುರ: ತಾಲೂಕಿನಾದ್ಯಂತ ಜನರು ಸಡಗರದ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮಾಡಿದರು.

ಅಮವಾಸ್ಯೆ ಅಂಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತ, ಸರದಾರ್ ವಲ್ಲಭಬಾಯಿ ಪಟೇಲ್ ವೃತ್ತ,ರಂಗಂಪೇಟೆ,ತಿಮ್ಮಾಪುರ ಮತ್ತಿತರೆಡೆಗಳಲ್ಲಿ ಕುಂಬಾರ ಸಮುದಾಯದ ಅನೇಕರು ಮಣ್ಣೆತ್ತುಗಳ ಮಾರಾಟದಲ್ಲಿ ತೊಡಗಿದ್ದರು.ಎಲ್ಲಡೆಯು ಅನೇಕ ಜನರು ಮಣ್ಣೆತ್ತುಗಳನ್ನು ಖರಿದಿಸಿ ತಂದು ಮನೆಯಲ್ಲಿ ಮಣ್ಣೆತ್ತುಗಳಿಗೆ ವಿಶೇಷ ಅಲಂಕಾರ ಮಾಡಿ,ನಂತರ ಮನೆಯಲ್ಲಿನ ಜಗುಲಿಯ ಮೇಲೆ ಮಣ್ಣೆತ್ತುಗಳನ್ನಿಟ್ಟು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.

Contact Your\'s Advertisement; 9902492681

ಮಣ್ಣೆತ್ತಿನ ಅಮವಾಸ್ಯೆಯ ಕುರಿತು ರೈತ ಮುಖಂಡ ಮಲ್ಲಣ್ಣ ಹುಬ್ಬಳ್ಳಿ ಕುಂಬಾರಪೇಟೆ ಮಾತನಾಡಿ,ರೈತರಿಗೆ ಎತ್ತುಗಳೆ ಜೀವಾಳ,ಎತ್ತುಗಳಿಂದಲೆ ರೈತನ ಬದುಕು ಮತ್ತು ಕುಟುಂಬ ಸಾಗುವುದು.ಆದ್ದರಿಂದ ಎತ್ತುಗಳನ್ನು ರೈತ ತನ್ನ ಬಂಧುಗಳಂತೆ ಕಾಣುತ್ತಾನೆ.ಆದ್ದರಿಂದ ಜೀವಂತ ಎತ್ತುಗಳನ್ನು ಬಸವಣ್ಣ ಎಂದು ಗೌರವಿಸುತ್ತಾನೆ,ಆದರೆ ಆ ಎತ್ತುಗಳನ್ನು ಮನೆಯಲ್ಲಿಟ್ಟು ಪೂಜಿಸಲಾಗದು ಎನ್ನುವ ಕಾರಣಕ್ಕೆ ಗತಕಾಲದಿಂದಲೂ ಮಣ್ಣಿನ ಎತ್ತುಗಳನ್ನು ಮಾಡಿ ರೈತರು ಕೃಷಿ ಚಟುವಟಿಕೆ ಆರಂಭಿಸುವ ಪೂರ್ವದಲ್ಲಿ ಮನೆಯಲ್ಲಿನ ಜಗುಲಿಯ ಮೇಲಿಟ್ಟು ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಗುತ್ತದೆ.ಅದನ್ನು ಎಲ್ಲರು ಒಂದೇ ದಿನ ಆಚರಿಸುವ ಮೂಲಕ ಮಣ್ಣೆತ್ತಿನ ಪೂಜೆಯ ಹಬ್ಬವಾಗಿ ಆಚರಿಸುವುದಾಗಿ ಸಂತೋಷದಿಂದ ನುಡಿಯುತ್ತಾರೆ.

ಈಬಾರಿಯ ಮಣ್ಣೆತ್ತಿನ ವ್ಯಾಪಾರದ ಕುರಿತು,ಕುಂಬಾರ ಸಮುದಾಯದ ಮಹಿಳೆ ಮಹಾದೇವಿ ಬಸವರಾಜ ಅವರು ಮಾತನಾಡಿ, ಮಾರುಕಟ್ಟೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಣ್ಣಿನ ಎತ್ತುಗಳು ಬಂದಿದ್ದರಿಂದ ನಾವು ಮಾಡುವ ಮಣ್ಣಿನ ಎತ್ತುಗಳ ಮಾರಾಟಕ್ಕೆ ತುಂಬಾ ಹೊರೆಯಾಗಿದೆ.ಇದರಿಂದ ನಮ್ಮ ಬದುಕು ನಡೆಯುವುದು ಕಷ್ಟ ಎನ್ನುವಂತಾಗಿದೆ. ಸರಕಾರ ನಮ್ಮ ಬಡ ಕುಂಬಾರರತ್ತ ಗಮನ ಹರಿಸಿ ನಮಗೆ ನೆರವಾಗಬೇಕು ಎಂದು ಮನವಿ ಮಾಡುತ್ತಾರೆ.

ಒಟ್ಟಾರೆಯಾಗಿ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಕಾರಣದಿಂದ ಸಮಸ್ಯೆ ಅನುಭವಿಸಿದ್ದ ತಾಲೂಕಿನ ಜನರು ಲಾಕ್‍ಡೌನ್ ತೆರವಿನ ನಂತರ ಬಂದ ಮೊದಲ ಹಬ್ಬವಾದ ಮಣ್ಣೆತ್ತಿನ ಅಮವಾಸ್ಯೆಯನ್ನು ಎಲ್ಲರು ತುಂಬಾ ಸಂತೋಷದಿಂದ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here