ಕ್ಷೇತ್ರದ ಜನರ ಆಶೋತ್ತರಗಳ ಈಡೇರಿಸುವುದೇ ನಮ್ಮ ಗುರಿ: ಶಾಸಕ ಅಪ್ಪು ಗೌಡ

0
15

ಕಲಬುರಗಿ: ದಕ್ಷಿಣ ಮತಕ್ಷೇತ್ರದ ವಾರ್ಡ್ ನಂಬರ್ ೩೦ರ ಜಯನಗರ ಬಡಾವಣೆಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸೇಡಂ ಮುಖ್ಯರಸ್ತೆಯಿಂದ ಸೌಭಾಗ್ಯ ಕಲ್ಯಾಣ ಮಂಟಪ ಮಾರ್ಗವಾಗಿ ಕುಸನೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ದತ್ತಾತ್ರೇಯ ಸಿ ಪಾಟೀಲ್ ರೇವೂರ್ ಭೂಮಿಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ ಪಾಟೀಲ್ ರೇವೂರ ಅವರು ಕ್ಷೇತ್ರದ ಜನರಿಗೆ ಕೊಟ್ಟಿರುವ ಭರವಸೆಗಳನ್ನು ಪೂರೈಸಿ ಜನರಿಗೆ ಇರುವ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಗುರಿ ಎಂದು ಹೇಳಿದರು.

Contact Your\'s Advertisement; 9902492681

ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯ ನಾಗಿಸಲು ಬೇಕಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಎಸ್ ವಾಲಿಹಣಮಂತರಾವ್ ಪಾಟೀಲ್, ಬಿ ಎಸ್ ಮೀಟೇಕರ, ಲಿಂಗರಾಜ ಶಾಸ್ತ್ರಿ, ಶರಣಬಸಪ್ಪ ದೇವಣಗಾಂವ, ಬಸವರಾಜ ನೀಲಿ, ಸೋಮನಾಥ ತಡಕಲ್,ಬಸವರಾಜು ಚಿಡಗುಂಪಿ, ಮಲ್ಲಿಕಾರ್ಜುನ್ ಮುದ್ದಾ, ಜಾಕಾ ಸರ್, ವಿಶ್ವನಾಥ ಟೆಂಗಳಿ, ರಾಜಕುಮಾರ ಪಾಟೀಲ್ ಓಕಳಿ, ಉಪಳಾಂವಕರ, ಭೀಮಸಿಂಗ್ ರಾಠೋಡ್, ರೆಡ್ಡಿ, ,ಹಣಮಂತ ಕೌಂಟಿ, ಶಿವರಾಜ ಮೂಲಗೆ, ಕೆಬಿ ಸೂರ್ಯಕಾಂತ್, ಶ್ರೀಶೈಲ್ ವಾಣಿ,ಪ್ರಮೋದ ಕುಲಕರ್ಣಿ, ಅಮಿತ ಚಿಡಗುಂಪಿ, ಉದಯಕಿರಣ ರೇಷ್ಮೆ, ಶಿವಾನಂದ ಮಹಾಜನ್, ಶರಣಪ್ಪ ಪಾಟೀಲ್, ಅಶೋಕ ಕೆಸರಟಗಿ, ಶಿವಲಿಂಗ ಮಠ, ವಿಶಾಲ ಶಾಸ್ತ್ರಿ, ವಿಜೇತ ತದಲಾಪುರ, ಸಿದ್ದು ಪೂಜಾರಿ, ಮಹೇಶ ರೆಡ್ಡಿ ಹಾಗೂ ಬಡಾವಣೆಯ ಹಿರಿಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here