ವಿದ್ಯಾರ್ಥಿಗಳೆ ಭವಿಷ್ಯದ ನಾಯಕರು: ಸಂತೋಷ ಹಾದಿಮನಿ

0
21

ಆಳಂದ: ವಿದ್ಯಾರ್ಥಿಗಳೆ ಭವಿಷದ ನಾಯಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬುವುದು ಜೀವನದ ಮೊದಲ ಮೆಟ್ಟಿಲು ಇದಂತೆ ಇದನ್ನು ಸರಿಯಾಗಿ ಹತ್ತಿದರೆ ಮಾತ್ರ ಜೀವನದ ಗುರಿಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆವೆಂದು ಸಂತೋಷ ಹಾದಿಮನಿ ಹೇಳಿದರು.

ತಾಲ್ಲೂಕಿನ ಯಳಸಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಸಕ ಸುಭಾಷ ಗುತ್ತೇದಾರ ಹಾಗು ಹಷನಂದ ಗುತ್ತೆದಾರ ರವರ ಮಾರ್ಗದರ್ಶನದಂತೆ ಉಚಿತವಾಗಿ ೪೦೦ ಎನ್-೯೫ ಮಾಸ್ಕ್, ಸ್ಯಾನಿಟೈಸರ್, ಪೇನ್, ಸಿಸ್ ಪೆನ್ಸಿಲ್‌ನ್ನು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಂತೋಷ ಹಾದಿಮನಿ ವಿತರಿಸಿ ಮಾತನಾಡಿದರು, ವಿದ್ಯಾರ್ಥಿಗಳು ಕೊವೀಡ್ ಇರುವುದರಿಂದ ಪರೀಕ್ಷೆ ಬರೆಯಲು ಹಿಂಜರಿಕೆ ಪಡಬಾರದು, ರಾಜ್ಯಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಸಂಪೂರ್ಣವಾಗಿ ಜಾಗೃತವಹಿಸಿಕೊಂಡು ಪರೀಕ್ಷೆ ನಡೆಸುತ್ತಿದಾರೆ ಹೀಗಿರುವಾಗ ಮಕ್ಕಳು ಯಾವುದೇ ರೀತಿಯಲ್ಲಿ ಭಯಪಡದೆ ಪರೀಕ್ಷೆ ಬರೆಯಬೇಕೆಂದು ಕಿವಿಮಾತು ನೀಡಿದರು.

Contact Your\'s Advertisement; 9902492681

ಗ್ರಾಮದ ಮುಖಂಡ ಶಿವಪುತ್ರ ಯಲ್ದೆ ಮಾತನಾಡಿ, ಪರೀಕ್ಷಾ ಭಯದಲ್ಲಿ ಬರುವ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ನೀಟ್ಟಿನಲ್ಲಿ ಪೇನ್, ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ದೈರ್ಯತುಂಬುವಂತ ಕೆಲಸ ಸಂತೋಷ ಹಾದಿಮನಿ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ಹೇಳಿದರು.

ಕೊರೋನಾ ಮಹಾಮಾರಿ ವಿರುದ್ಧ ತಮ್ಮ ಜೀವನದ ಹಂಗನು ತೊರೆದು ಜನರ ಸೇವೆಗೆ ನಿಂತ ವೈದ್ಯಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಿಪ್ಪಯ್ಯ ಗುತ್ತೆದಾರ, ಸಾತಲಿಂಗಯ್ಯ ಸ್ವಾಮಿ, ಬಸವರಾಜ ಪೂಜಾರಿ, ಮೋತಿಲಾಲ್ ಚವ್ಹಾಣ, ಕಲ್ಲಪ್ಪಾ ಕಡಕೋಳ, ಶಿವಕುಮಾರ ಯಲ್ದೆ, ಚಂದ್ರಕಾಂತ ಆಲೂರ, ಶ್ರೀಮಂತ ಹೂಗಾರ, ವಿಜಯಕುಮಾರ ವಚ್ಚೆ, ರವಿಶಂಕರ್ ಕಡಕೋಳ, ದೀಲಿಪ ವಚ್ಚೆ, ಶಿವು ಪಿ. ಬಾಬಾಸಾಹೇಬ ಕಾಮನಕರ್, ವಿಜಯಕುಮಾರ ಕೋನೇರಿ, ಹಷವರ್ಧನ ಸಂಗೋಳಗಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here