ಉಸ್ತುವಾರಿ ಸಚಿವ ನಿರಾಣಿಯವರಿಗೆ ಹೋಟೆಲ್ ಸಂಘದಿಂದ ಅಭಿನಂದನೆ

0
7

ಕಲಬುರಗಿ: ಜಿಲ್ಲಾ ಹೋಟೆಲ್, ಬೇಕರಿ, ವಸತಿ ಗೃಹ ಮತ್ತು ಬಾರ್ ಮಾಲೀಕರ ಮಾಲೀಕರ ಸಂಘದ ವತಿಯಿಂದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿಯವರಿಗೆ ಸನ್ಮಾನಿಸಲಾಯಿತು.

ಕಲಬುರಗಿ ಜಿಲ್ಲೆಯಲ್ಲಿ ವರ್ತಕರು ಕೋವಿಡ್ ಸಂದರ್ಭದಲ್ಲಿ ಮತ್ತು ನಂತರದ ಲಾಕ್ ಡೌನ್ ನಿಯಮಗಳಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು ಈ ಬಗ್ಗೆ ಉದ್ಯಮ ಸ್ನೇಹಿ ನಿರ್ಧಾರ ತೆಗೆದುಕೊಂಡು ನೆರವಾಗಲು ಸರಕಾರಕ್ಕೆ ಸ್ಪಷ್ಟ ಸೂಚನೆ ನೀಡಲು ಕೋರಿ ಆದೇಶ ಹೊರಡಿಸುವಂತೆ ಪ್ರಯತ್ನಿಸಿದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವರಾದ ಮುರುಗೇಶ್ ಆರ್ ನಿರಾಣಿ ಅವರಿಗೆ ಕಲಬುರಗಿ ಜಿಲ್ಲಾ ಹೋಟೆಲ್, ಬೇಕರಿ, ವಸತಿ ಗೃಹ ಹಾಗೂ ಬಾರ್ ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಿ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಉದ್ಯಮಿಗಳ ಪರವಾಗಿ ರಾಜ್ಯ ಸರಕಾರ ಸಕಾಲಿಕ ಸ್ಪಂದನೆ ಮಾಡುತ್ತಿದ್ದು ಉಸ್ತುವಾರಿ ಸಚಿವರು ವರ್ತಕರ ಸಮಸ್ಯೆ ಆಲಿಸಿ ತಕ್ಷಣದಲ್ಲೇ ವಾರಾದ್ಯಾತ ಲಾಕ್ ಡೌನ್ ತೆರವು, ಕೋವಿಡ್ ಸುರಕ್ಷತಾ ನಿಯಮ ಕಡ್ಡಾಯ ಪಾಲನೆಯೊಂದಿಗೆ ಮುಕ್ತ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಲ್ಲದೆ ಸರಕಾರ ನಿಮ್ಮ ಜೊತೆ ಸದಾ ಇದೆ ಎಂದು ನಿರಾಣಿ ತಿಳಿಸಿ ವರ್ತಕರಲ್ಲಿ ಆತ್ಮ ವಿಶ್ವಾಸ ತುಂಬಿದ್ದಾರೆ ಎಂದು ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರವೀಣ್ ಜತ್ತನ್, ರಮಾನಂದ ಭಂಡಾರಿ ಮತ್ತು ವೆಂಕಟೇಶ ಕಡೇಚೂರ್ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರಾನಾಥ್ ಪಾಟೀಲ್, ರವಿ ಬಿರಾದಾರ್ ಉದ್ಯಮಿಗಳಾದ ವೆಂಕಟೇಶ್ ಕಡೇಚೂರ್, ಪ್ರವೀಣ್ ಜತ್ತನ್, ರಮಾನಂದ ಭಂಡಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here