ಕಲಬುರಗಿ: ನಗರದ ಎಚ್.ಕೆ.ಇ.ಎಸ್ ಪೋಲಿಟೆಕ್ನಿಕನಲ್ಲಿ ಎಸ್.ಆರ್.ಗ್ರೂಪ್ ವತಿಯಿಂದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ ನಡೆಯಿತು.
ಈ ವೇಳೆ ಎಚ್‌ಕೆಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಸ ವಿನಯ ಪಾಟೀಲ್ ಕಮಲಾಪುರ ಅವರು ಚಾಲನೆ ನೀಡಿ ಮಾತನಾಡಿದರು. ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ಭಾಗದಲ್ಲಿ ಹಲವಾರು ಕ್ಯಾಂಪಸ್ ಸಂದರ್ಶನಗಳು ಕೂಡ ಬರುತ್ತಿವೆ. ಹೀಗಾಗಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಉದ್ಯೋಗದಲ್ಲಿ ತೊಡಗಿಕೊಂಡು ಈ ಭಾಗದ ಹೆಸರು ಉಳೀಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಐಟಿಐ, ಡಿಪ್ಲೋಮ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರವಾಗಿದ್ದರೆ. ಇಲ್ಲಿಯವರೆಗೂ ಸುಮಾರು ೩೫೦೦ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಹೆಸರು ಗಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ೧೬೦ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ೧೧೦ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಆಯ್ಕೆಯಾದರು.
ಈ ವೇಳೆ ಎಚ್.ಕೆ.ಇ.ಎಸ್ ಪೋಲಿಟೆಕ್ನಿಕ ಸಂಸ್ಥೆಯವರು ಎಸ್.ಆರ್.ಗ್ರೂಪ್‌ನ ಸಂಸ್ಥಾಪಕ ಸಂತೋಷ ಅವರಿಗೆ “ಬೆಸ್ಟ್ ಟ್ರೈನರ್ ಅಂಡ್ ಪ್ಲೇಸ್ಮೆಂಟ್ ಆಫೀಸರ್” ಅಂತ ಸರ್ಟಿಫಿಕೇಟ್ ನೀಡಿ ಸನ್ಮಾನಿಸಿದರು. ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬಬಲೇಶ್ವರ, ಸಂಗಮೇಶ ನೀಲಾ, ಶಿವಶಂಕರ, ಎಸ್.ಎಚ್ ಮಾಡಗಿ, ಸತೀಶ ಹಿರೇಮಠ, ಕಿರಣ ಪಾಟೀಲ್, ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.