ರೈಲು ನಿಲುಗಡೆಗಾಗಿ ಆಗ್ರಹಿಸಿ ಬಿಎಸ್‌ಪಿಯಿಂದ ಧರಣಿ

0
20

ಶಹಾಬಾದ: ಕೋವಿಡ್‌ಕ್ಕಿಂತಲೂ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ನಿಲ್ಲಬೇಕೆಂದು ಆಗ್ರಹಿಸಿ ಗುರುವಾರ ಬಹುಜನ ಸಮಾಜ ಪಕ್ಷದ ವತಿಯಿಂದ ರೇಲ್ವೆ ನಿಲ್ದಾಣದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ನಂತರ ಮಾತನಾಡಿದ ಪ್ರತಿಭಟನಾಕಾರರು ನಗರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ.ಇಲ್ಲಿನ ಜನರಿಗೆ ಕಲಬುರಗಿಗೆ, ಸೋಲಾಪೂರಗೆ ಹೋಗಳೂ ತೊಂದರೆಯಾಗುತ್ತಿದೆ. ನೌಕರಸ್ಥರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಕೇವಲ ಕಡಿಮೆ ಜನಸಂಖ್ಯೆ ಹೊಂದಿರುವ ಚಿತ್ತಾಪೂರ ರೇಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತಿದೆ.ಅದೇ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ರೈಲು ನಿಲುಗಡೆಯಾಗುತ್ತಿಲ್ಲ.ಇದೆಂಥ ನಿಯಮ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಮೊದಲು ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು೧೦ ದಿನಗಳ ಒಳಗಾಗಿ ನಿಲ್ಲಬೇಕು. ಮಾಸಿಕ ಪಾಸ್ ಹಾಗೂ ಜೆನರಲ್ ಟಿಕೆಟ್‌ಗಳನ್ನು ನೀಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ರೇಲ್ವೆ ಮೇಲಾಧಿಕಾರಿಗಳ ಜತೆಗೆ ಮಾತನಾಡಿದರು. ಮುಂಬರುವ ಮಂಗಳವಾರದಂದು ಡಿಆರ್‌ಎಮ್ ಸೋಲಾಪೂರ ಕಚೇರಿಗೆ ಬನ್ನು ಮಾತಾಡೋಣ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದರು.ಅಲ್ಲದೇ ಈಗಾಗಲೇ ಎರಡು ರೈಲುಗಳ ನಿಲುಗಡೆಗೆ ಹಾಗೂ ಲೋಕಲ್ ವಡಿ- ಕಲಬುರಗಿ ರೈಲು ಓಡಿಸಲು ಪ್ರಸ್ತಾವನೆ ಮೇಲಾಧಿಕಾರಿಗಳಿಗೆ ಕಳಿಸಿದ್ದೆವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಎಸ್‌ಪಿಯ ಅಧ್ಯಕ್ಷ ಶಿವಶಾಲಕುಮಾರ ಪಟ್ಟಣಕರ್,ಉಪಾಧ್ಯಕ್ಷ ಆಂಜನೇಯ ಕುಸಾಳೆ, ಕಾರ್ಯದರ್ಶಿ ಪುನೀತ ಹಳ್ಳಿಕರ್, ಶೇಖ ಬಾಬು ಉಸ್ಮಾನ,ಕಿರಣ ಜಡಗಿಕರ್ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here