ಬುದ್ಧನ ಮೂರ್ತಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳ ಬಂಧಿಸಲು ಪ್ರಗತಿಪರರ ಒತ್ತಾಯ

0
14

ಸುರಪುರ: ನಗರದ ಬುದ್ಧ ವಿಹಾರದಲ್ಲಿನ ಬುದ್ಧನ ಮೂರ್ತಿ ಧ್ವಂಸಗೊಳಿಸಿದ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ನಗರದ ಟೈಲರ್ ಮಂಜಿಲ್‌ನಲ್ಲಿ ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅನೇಕ ಮುಖಂಡರು,ಬುದ್ಧನ ಮೂರ್ತಿ ಧ್ವಂಸಗೊಳಿಸಿದ ಪ್ರಕರಣದ ಕುರಿತು ಈಗಾಗಲೇ ಆಗಸ್ಟ್ ೨೪ ರಂದು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ ಅಲ್ಲದೆ ಸಪ್ಟೆಂಬರ್ ೨ ರಂದು ಸುರಪುರ ಬಂದ್ ಮಾಡಿ ಒತ್ತಾಯಿಸಲಾಗಿದೆ.ಆದರೆ ಪೊಲೀಸರು ಈಗ ಕೇವಲ ಇಬ್ಬರು ಆರೋಪಿಗಳನ್ನು ಬಂಧಿಸಿ ಇನ್ನುಳಿದವರನ್ನು ಕೈಬಿಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.

Contact Your\'s Advertisement; 9902492681

ಆದರೆ ಈ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸುತ್ತೇವೆ ಮತ್ತು ಎಲ್ಲಾ ದಲಿತರಿಗೆ ರಕ್ಷಣೆ ನೀಡಬೇಕು.ಈಗಾಗಲೇ ಬುದ್ಧ ವಿಹಾರದ ೧೦ ಎಕರೆ ಸ್ಥಳ ವಿಹಾರದ ಹೆಸರಿಗೆ ಮಾಡಿಕೊಡಬೇಕು,ಈ ಸ್ಥಳಕ್ಕೆ ರಕ್ಷಣಾ ಗೋಡೆ ನಿರ್ಮಿಸಬೇಕು ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ತಾಲೂಕು ಆಡಳಿತಕ್ಕೆ ಒತ್ತಾಯಿಸಲಾಗಿದೆ.ಆದರೆ ತಾಲೂಕು ಆಡಳಿತ ನಿರ್ಲಕ್ಷ್ಯ ತೋರುತ್ತಿದ್ದು ಕೂಡಲೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಬುದ್ಧನ ವೃತ್ತದಿಂದ ತಹಸೀಲ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿ ನಂತರ ೨ ತಾಲೂಕಿನ ಎಲ್ಲಾ ೫ ಹೋಬಳಿಗಳಲ್ಲಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ,ಮಾನಪ್ಪ ಕಟ್ಟಿಮನಿ,ಅಹ್ಮದ್ ಪಠಾಣ್,ವೆಂಕೋಬ ದೊರೆ,ವೆಂಕಟೇಶ ಬೇಟೆಗಾರ,ರಮೇಶ ದೊರೆ ಆಲ್ದಾಳ,ನಿಂಗಣ್ಣ ಗೋನಾಲ,ಮಾನಪ್ಪ ಬಿಜಾಸಪುರ,ಮಹಾದೇವಪ್ಪ ಬಿಜಾಸಪುರ,ಹಣಮಂತ ಬಾಂಬೆ,ಚಂದ್ರಶೇಖರ ಹಸನಾಪುರ,ಹಣಮಂತ ಕಟ್ಟಿಮನಿ,ಅಪ್ಪಣ್ಣ ಗಾಯಕ್ವಾಡ,ರಾಮಚಂದ್ರ ವಾಗಣಗೇರಾ,ಮಾನಪ್ಪ ಕರಡಕಲ್,ಧರ್ಮರಾಜ ಬಡಿಗೇರ,ವೀರಭದ್ರಪ್ಪ ತಳವಾರಗೇರ,ರಾಜು ದೊಡ್ಮನಿ,ಪ್ರಕಾಶ ಆಲ್ದಾಳ,ವಿಶ್ವನಾಥ ಹೊಸ್ಮನಿ,ರಮೇಶ ಬಾಚಿಮಟ್ಟಿ,ಬುದ್ಧಿವಂತ ನಾಗರಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here