ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

0
7

ಲೋಕಾಪುರ : ಗ್ರಾಮೀಣ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಗ್ರಾಮಗಳಲ್ಲಿ ಒಳ ರಸ್ತೆ ಸುಧಾರಣೆ ಕಾಮಗಾರಿ, ಸಬ್‌ ಮೈನರ್‌ ಕಾಲುವೆ, ಮನೆಗಳಿಗೆ ಕಾರ್ಯಾತ್ಮಕ ನಳಗಳ ಜೋಡಣೆ, ಸೇತುವೆ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣ ಅಭಿವೃದ್ದಿಗಳಿಗಾಗಿ ಒಟ್ಟು 6.28 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೂಮಿಪೂಜೆ ನೆರವೇರಿಸಿದರು.

ಸಮೀಪದ ಮುದ್ದಾಪುರ ಮತ್ತು ಹೆಬ್ಟಾಳ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನತೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಬಹುದಿನಗಳಿಂದ ಕನಸಾಗಿರುವ ಮಸಾರಿ ಹಳ್ಳಕ್ಕೆ ಲೋ ಲೆವಲ್‌ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳುತ್ತಿದ್ದು, ಪ್ರತಿಯೊಬ್ಬ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.

Contact Your\'s Advertisement; 9902492681

ಸಮೀಪದ ಚಿಂಚಖಂಡಿ ಬಿ.ಕೆ. ಸಬ್‌ ಮೈನರ್‌ ಕಾಲುವೆ ಸೇವಾ ರಸ್ತೆಸುಧಾರಣೆಅಂದಾಜು ಮೊತ್ತ 12 ಲಕ್ಷ ರೂ., ಚಿಂಚಖಂಡಿ ಬಿ.ಕೆ. ಮತ್ತು ಜಂಬಗಿ ಕೆಡಿ. ಗ್ರಾಮಗಳಲ್ಲಿ ಕಾಲುವೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಅಂದಾಜು ಮೊತ್ತ 25 ಲಕ್ಷ ರೂ., ಕಸಬಾ ಜಂಬಗಿ ಗ್ರಾಮದಲ್ಲಿ 712 ಮನೆಗಳಿಗೆ ಕಾರ್ಯಾತ್ಮಕ ನಳಗಳ ಜೋಡನೆಅಂದಾಜು ಮೊತ್ತರೂ 181.30 ಲಕ್ಷ, ಮುದ್ದಾಪುರಗ್ರಾಮದಲ್ಲಿ ಅಂಗನವಾಡಿ ಕೇಂದ್ರಅಂದಾಜು ಮೊತ್ತ 17 ಲಕ್ಷ ರೂ. ಹಾಗೂ 517 ಮನೆಗಳಿಗೆ ಕಾರ್ಯಾತ್ಮಕ ನಳಗಳ ಜೋಡನೆ ಅಂದಾಜು ಮೊತ್ತ 120.45 ಲಕ್ಷ ರೂ., ಹೆಬ್ಟಾಳ ಗ್ರಾಮದಪತ್ರಿ ಬಸವೇಶ್ವರಗುಡಿಯಿಂದ ಬಸವ ಪಟ್ಟಣ ಕೆರೆಗೆ ಹೋಗುವ ರಸ್ತೆ ಮಸಾರಿ ಹಳ್ಳಕ್ಕೆ ಲೋಲೆವಲ್‌ ಸೇತುವೆನಿರ್ಮಾಣ ಹಾಗೂ ರಸ್ತೆಸುಧಾರಣೆ ಅಂದಾಜು ಮೊತ್ತ 120 ಲಕ್ಷ ರೂ., ಹೆಬ್ಟಾಳದಿಂದ ತಿಮ್ಮಾಪುರ ಗ್ರಾಮದ ವರೆಗೆಒಳ ರಸ್ತೆ ಸುಧಾರಣೆ ಅಂದಾಜು ಮೊತ್ತ 20 ಲಕ್ಷ ರೂ., ಹೆಬ್ಟಾಳ ಗ್ರಾಮದ ಕರಿಗೌಡ ಅವರ ಹೊಲದವರೆಗೆ ಒಳ ರಸ್ತೆ ಸುಧಾರಣೆ
ಅಂದಾಜು ಮೊತ್ತ 10 ಲಕ್ಷ, ಹೆಬ್ಟಾಳ ಗ್ರಾಮದ ಶಂಕರೆಪ್ಪ ತಳವಾರ ಅವರಮನೆಯಿಂದ ಹಳ್ಳದ ವರೆಗೆ ಒಳ ರಸ್ತೆ ಸುಧಾರಣೆ 10 ಲಕ್ಷ ರೂ., ಹೆಬ್ಟಾಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ 17 ಲಕ್ಷ ರೂ., ಲಕ್ಷಾನಟ್ಟಿ ಗ್ರಾಮದ ಎಲ್‌ಪಿಎಸ್‌ ಶಾಲೆ 2 ಕೊಠಡಿ ನಿರ್ಮಾಣ ಅಂದಾಜು ಮೊತ್ತ 21 ಲಕ್ಷ ರೂ., ಜಿಆರ್‌ಬಿಸಿಯ ಮುಖ್ಯ ಕಾಲುವೆಯ ಸೇತುವೆ ನಿರ್ಮಾಣ ಅಂದಾಜು ಮೊತ್ತ 75 ಲಕ್ಷ ರೂ.ಮಂಜೂರು ಮಾಡಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಆರ್‌.ಎಸ್‌. ತಳೇವಾಡ, ಹಣಮಂತ ತುಳಸಿಗೇರಿ, ಯುವ ಧುರಿಣ ಅರುಣ ಕಾರಜೋಳ, ಶಿವನಗೌಡನಾಡಗೌಡ, ರಾಜು ಯಡಹಳ್ಳಿ, ಸಂಜಯ ತಳೇವಾಡ, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ, ಪರಶುರಾಮ ಹಂಚಾಟೆ, ನಬಿ ಹಾಜಿಬಾಯಿ, ಕಲ್ಲಪ್ಪಸಬರದ, ಎಚ್‌.ಎನ್‌. ವಜ್ಜರಮಟ್ಟಿ, ಕೆ.ಜಿ. ವಜ್ಜರಮಟ್ಟಿ, ಗ್ರಾಪಂ ಅಧ್ಯಕ್ಷರಾದ ಅಮೃತಾ ಕತ್ತಿ, ಪ್ರಕಾಶ ಸಣ್ಣತಮ್ಮಪ್ಪಗೋಳ, ಲಕ್ಷಾನಟ್ಟಿ ಪಿಕೆಪಿಎಸ್‌ ಅಧ್ಯಕ್ಷ ಶಿವನಗೌಡ ಪಾಟೀಲ, ಯಮನಪ್ಪಹೊರಟ್ಟಿ, ಗಡ್ಡೆಪ್ಪಬಾರಕೇರ, ಗಂಗಾಧರ ಗಾಣಿಗೇರ, ಎಇಒ ಕಿರಣ ಘೋರ್ಪಡೆ, ಉಪ ತಹಶೀಲ್ದಾರ್‌ ಮಹೇಶ ಪಾಂಡವ, ಪಿಡಬ್ಲೂಡಿ ಅಭಿಯಂತರ ಸೋಮಶೇಖರ ಸಾವನ್‌, ವಿನೋದ ಸಂಕೆನ್ನವರ, ಅಶೋಕ ಕ್ಯಾದಗೇರಿ, ಚಿಂಚಖಂಡಿ ಬಿ.ಕೆ, ಕಸಬಾ ಜಂಬಗಿ, ಮುದ್ದಾಪುರ, ಹೆಬ್ಟಾಳ, ದಾದನಟ್ಟಿ, ಲಕ್ಷಾನಟ್ಟಿ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಹಾಗೂ ಆರ್‌ಎಸ್‌ ಡಬ್ಲೂ, ಪಿಡಬ್ಲೂಡಿ, ಜಿಆರ್‌ಬಿಸಿ, ಪಿಆರ್‌ ಇಡಿ ಹಾಗೂ ನಿರ್ಮಿತಿ ಕೇಂದ್ರ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here