ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನ ಬೆಳಸಬೇಕಿದೆ

0
19

ಕಲಬುರಗಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ(ರಿ), ಕಲಬುರಗಿ ಹಾಗೂ ರಂಗಾಯಣ ಕಲಬುರಗಿ ಸಂಯುಕ್ತಾಶ್ರಯದಲ್ಲಿ ರಂಗಾಯಣದ ಆವರಣದಲ್ಲಿ ಪಕ್ಷಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುವ ನಿಟ್ಟಿನಲ್ಲಿ ಮರಗಳಿಗೆ ಅರವಟ್ಟಿಗೆಗಳನ್ನು ಕಟ್ಟುವ ಮೂಲಕ ಏಪ್ರೀಲ್‌ ಫೂಲ್‌ ಬದಲು ಏಪ್ರಿಲ್‌ ಕೂಲ್‌ ಡೇ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ರಂಗಾಯಣದ ಆಡಳಿತ ಅಧಿಕಾರಿಗಳಾದ ಜಗದೀಶ್ವರಿ ನಾಸಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯರಾದ ನಮಗೆ ಜೀವಿಸೋಕೆ ಗಿಡ ಮರ ಊಟ ನೀರು ಶುದ್ಧವಾದ ಗಾಳಿ ಎಷ್ಟು ಅವಶ್ಯಕತೆ ಇದೆಯೋ ಪ್ರಾಣಿ ಪಕ್ಷಿಗಳು ನಮ್ಮ ಜೀವನದಲ್ಲಿ ಬಹಳ ಅಗತ್ಯವಿದೆ ಹಾಗಾಗಿ ಪ್ರಾಣಿ ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ಅರವಟ್ಟಿಗೆಗಳನ್ನು ಮರಕ್ಕೆ ಕಟ್ಟುವ ಮೂಲಕ ನೀರಿನ ದಾಹ ತಿರಿಸೋಣ, ಎಲ್ಲರೂ ಪಕ್ಷಿ ಪ್ರಾಣಿಗಳ ಉಳಿವಿಗಾಗಿ ನೀರು ಆಹಾರ ಧಾನ್ಯಗಳನ್ನು ಇಡೋಣ. ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಪಿಎಸ್‌ಐ ಅಕ್ರಮ: 6 ಜನರ ಬಂಧನ

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ(ರಿ), ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಶರಣ ಪರಪ್ಪಗೋಳ ಜೋಗೂರ ಮಾತನಾಡಿ, ಬೇಸಿಗೆಯ ಈ ಉರಿ ಬಿಸಿಲಿನಲ್ಲಿ ಮನುಷ್ಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನೂ ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಹೇಳತೀರದು. ಹಾಗಾಗಿ ಪ್ರಾಣಿ ಪಕ್ಷಿಗಳ ಜೀವ ಉಳಿಸುವ ನಿಟ್ಟಿನಲ್ಲಿ ನೀರು ಒದಗಿಸಿಕೊಡುವ ನಿಟ್ಟಿನಲ್ಲಿ ಮರಕ್ಕೆ ಅರವಟ್ಟಿಗೆಗಳನ್ನ ಕಟ್ಟಿ ಪಕ್ಷಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ.

ಈ ಭೂಮಿ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹಾಗಾಗಿ ಪರಿಸರ ಸಂರಕ್ಷಣೆ ಮಾಡುವ ಜೊತೆ ಜೊತೆಗೆ ಪಕ್ಷಿ ಪ್ರಾಣಿ ಸಂಕುಲನಗಳನ್ನ ಉಳಿಸುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ಕೆ ಮುಂದಾಗಿದ್ದೇವೆ. ವಿಭಿನ್ನ ವಿಶೇಷ ರೀತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಾವು ಸ್ವಯಂಪ್ರೇರಿತರಾಗಿ ಏಪ್ರಿಲ ಪೂಲ್‌ ಏಪ್ರಿಲ್‌ ಕೂಲ್ ಡೇ‌, ಸಸಿ ನೆಡುವ ಮೂಲಕ ಪಕ್ಷಿ ಪ್ರಾಣಿಗಳಿಗೆ ನೀರು ಕಾಳು ಇಡುವ ಮೂಲಕ ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಮಕ್ಕಳಲ್ಲಿ ಕೂಡ ಈ ರೀತಿಯ ಮಾನವೀಯ ಮೌಲ್ಯಗಳನ್ನ ನಾವು ಬೆಳಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ವಾಹನದ ಚಕ್ರದಲ್ಲಿ ಸಿಲುಕಿ ಎರಡು ಕಾಲುಗಳು ಕಳೆದುಕೊಂಡ ಯುವಕ

ಇದೇ ಸಂದರ್ಭದಲ್ಲಿ ಚಿಣ್ಣರ ಮೇಳ ಶಿಬಿರದ ನಿರ್ದೇಶಕರಾದ ಸಂದೀಪ್‌ ಬಿ ಮಾಳಗೆ ಅವರು ಮಾತನಾಡಿ, ಅರವಟ್ಟಿಗೆಗಳನ್ನ ಮರಕ್ಕೆ ಕಟ್ಟಿ ನೀರು ಹಾಕಿದರೆ ಪಕ್ಷಿಗಳೆಲ್ಲಾ ಬಂದು ನೀರು ಕುಡಿಯುತ್ತವೆ. ಆಹಾರ ಧಾನ್ಯಗಳನ್ನು ಅಲ್ಲಲ್ಲಿ ಹಾಕಿದರೆ ಕಾಳುಗಳನ್ನು ತಿಂದು ಪಕ್ಷಿ ಪ್ರಾಣಿಗಳು ನೀರು ಕುಡಿಯುತ್ತವೆ. ಮೊದಲೆಲ್ಲಾ ಹಳ್ಳ ಕೆರೆ ಇರತಿತ್ತು ಅಲ್ಲಿ ಪಕ್ಷಿ ಪ್ರಾಣಿಗಳು ನೀರು ಕುಡಿಯುತ್ತಿದ್ದವು. ಈಗ ಕಾಡೆಲ್ಲಾ ನಾಶವಾಗಿದೆ ಅದಕ್ಕಾಗಿ ನೀರಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ನೀರಿನ ಪ್ರಮಾಣ ಕಡಿಮೆಯಾಗಿದೆ ಅದನ್ನ ವೃದ್ಧಿ ಮಾಡಬೇಕೆಂದರೇ ಕಡ್ಡಾಯವಾಗಿ ಮರ ಗಿಡಗಳನ್ನು ನೆಟ್ಟು ಪೋಷಿಸಬೇಕು, ನಮ್ಮ ಜೊತೆಗೆ ಪ್ರಾಣಿ ಪಕ್ಷಿ ಎಲ್ಲವೂ ಬದುಕಬೇಕು, ಪ್ರಾಣಿಗಳ ಜೊತೆಗೆ ನಾವು ಬೆರೆತು ಪ್ರಾಣಿಗಳ ಸಾಕುವುದನ್ನ ನಾವು ಕಲಿಯಬೇಕು. ಅದಕ್ಕಾಗಿ ಪ್ರಾಣಿ ಪಕ್ಷಿಗಳನ್ನ ರಕ್ಷಣೆ ಮಾಡೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರಾದ ಗಣೇಶ ಚವ್ಹಾಣ, ವಿಜಯಕುಮಾರ ಹಾಬಾನೂರ, ದೀಪಕ ಗಾಯಕವಾಡ, ನಾಗೇಶ ಹರಳಯ್ಯಾ, ಹಾಗೂ ಅರುಣ ಅಂಜುಟಗಿ, ಮಲ್ಲಿನಾಥ, ಅಮರ, ಅಂಬಿಕಾ, ಲೊಕೇಶ, ಹಾಗೂ ರಂಗಾಯಣದ ಕಲಾವಿದರಾದ ನಾಗೇಶ, ಜಗದೀಶ, ಉಮೇಶ ವಿದ್ಯಾರ್ಥಿಗಳು ಇತರರು ಇದ್ದರು.

ಇದನ್ನೂ ಓದಿ: ಅದ್ದೂರಿಯಿಂದ ಜರುಗಿದ ಶಹಾಬಾದ ಶರಣಬಸವೇಶ್ವರ ರಥೋತ್ಸವ

ಶಿವಶರಣ ಪರಪ್ಪಗೋಳ ಜೋಗೂರ ನಿರೂಪಿಸಿದರು. ಗಣೇಶ ಚವ್ಹಾಣ ಸ್ವಾಗತಿಸಿದರು, ವಿಜಯಕುಮಾರ ಹಾಬಾನೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here