27 ರಂದು ‘ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ’: ಸೋಮಶೇಖರ ಜಮಶೆಟ್ಟಿ

0
8

ಸೊಲ್ಲಾಪುರ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ ಇವುಗಳ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ ಮೇ ೨೭ ರಂದು ಅಕ್ಕಲಕೋಟೆಯಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದ ಅಕ್ಕಲಕೋಟ ಪಟ್ಟಣದ ಪ್ರೀಯದರ್ಶಿನಿ ಮಂಗಲ ಕಾರ್ಯಾಲಯದಲ್ಲಿ ಮೇ ೨೭ ರಂದು ‘ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ ೯.೩೦ ಗಂಟೆಗೆ ಪಟ್ಟಣದ ಮಲ್ಲಿಕಾರ್ಜುನ ಮಂದಿರದಿಂದ ವಿವಿಧ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಮೇರವಣಿಗೆ ಅದ್ದೂರಿಯಾಗಿ ನಡೆಯಲಿದ್ದು, ನಾಗಣಸೂರಿನ ಡಾ. ಅಭಿನವ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯ ಮತ್ತು ನಗರಾಧ್ಯಕ್ಷೆ ಶೋಭಾ ಖೇಡಗಿಯವರ ಅಧ್ಯಕ್ಷತೆಯಲ್ಲಿ ನಗರಸೇವಕ ಮಹೇಶ ಹಿಂಡೋಳೆ ಮೆರವಣಿಗೆ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

Contact Your\'s Advertisement; 9902492681

ಬೆಳಿಗ್ಗೆ ೧೦ ಗಂಟೆಗೆ ಪೂಜ್ಯ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರ ಅಧ್ಯಕ್ಷತೆಯಲ್ಲಿ ಶಾಸಕ ಸಚಿನ್ ಕಲ್ಯಾಣಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಸಿದ್ಧರಾಮ ಮ್ಹೇತ್ರೆ ಅವರು ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸುವರು.

ಮಧ್ಯಾಹ್ನ ೧೨ ಗಂಟೆಗೆ ಮಹಾರಾಷ್ಟ್ರದ ಅಭಿವೃದ್ಧಿ : ಕನ್ನಡ-ಕನ್ನಡಿಗರ ಪಾತ್ರ, ಗಡಿನಾಡಿನಲ್ಲಿ ಕನ್ನಡ : ಪ್ರಚಲಿತ ವಿದ್ಯಮಾನಗಳು, ಅಪರಾಹ್ನ ೨.೩೦ ಗಂಟೆಗೆ ರಾಷ್ಟç ಭಕ್ತಿ – ನಾಡ ಪ್ರೀತಿ ಕುರಿತು ಬಹುಭಾಷಾ ಕವಿಗೋಷ್ಠಿ ಹಾಗೂ ಅಪರಾಹ್ನ ೩.೩೦ ಗಟೆಗೆ ಮಹಾರಾಷ್ಟ್ರದ ಗಡಿಕನ್ನಡಿಗರ ಸ್ಥಿತಿಗತಿ ಬಗ್ಗೆ ಸಂವಾದ ಗೋಷ್ಠಿ ಸೇರಿದಂತೆ ಒಟ್ಟು ೩ ಗೋಷ್ಠಿಗಳು ನಡೆಯಲಿದ್ದು, ಮೇ ೨೭ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸೊಲ್ಲಾಪುರದ ಶರಣಬಸವಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿಯವರು ಸಮಾರೋಪ ನುಡಿಗಳನ್ನಾಡುವರು.

ಸುದ್ದಿಗೋಷ್ಠಿಯಲ್ಲಿ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ, ಕಸಾಪ ಮಹಾರಾಷ್ಟ್ರ ಘಟಕದ ಗೌರವ ಕಾರ್ಯದರ್ಶಿ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಬಸವರಾಜ ಧನಶೆಟ್ಟಿ, ಚಿದಾನಂದ ಮಠಪತಿ, ಶಿಕ್ಷಕ ನೇತಾರ ರಾಜಶೇಖರ ಉಮರಾಣಿಕರ, ವಿದ್ಯಾಧರ ಗುರವ, ಗಿರೀಶ ಜಕಾಪುರೆ, ಶರಣು ಕೋಳಿ, ಯಲ್ಲಪ್ಪ ಇಟೆನವರ, ರಾಜಕುಮಾರ ಗೊಬ್ಬೂರ, ವಾಸುದೇವ ದೇಸಾಯಿ ಸೇರಿದಂತೆ ಮೊದಲಾದವರು ಇದ್ದರು.

ಸಮಾರಂಭದಲ್ಲಿ ಪಾಲ್ಗೋಳ್ಳಲಿರುವ ಪ್ರಮುಖ ಅತಿಥಿಗಳು: ಮಾಜಿ ಜಿಲ್ಲಾ ಉಸ್ತುವಾರಿ ಸಚೀವ ಹಾಗೂ ಸೊಲ್ಲಾಪುರ ದಕ್ಷೀಣ ಶಾಸಕ ವಿಜಯಕುಮಾರ ದೇಶಮುಖ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಆಳಂದ ಶಾಸಕ ಸುಭಾಷ ಗುತ್ತೇದಾರ, ಅಫಜಲಪೂರ ಶಾಸಕ ಎಂ.ವಾಯ್.ಪಾಟೀಲ, ಜಿಲ್ಲಾ ಪಂ. ಸಿಇಒ ದಿಲೀಪ ಸ್ವಾಮಿ, ಹಿರಿಯ ಸಾಹಿತಿ ಡಾ. ಮಧುಮಾಲ ಲಿಗಾಡೆ, ಮಹಿಪಾಲರೆಡ್ಡಿ ಮುನ್ನೂರು, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೇ ಭೋಸಲೆ, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಶಿವಸೇನಾ ತಾಲೂಕಾಧ್ಯಕ್ಷ ಸಂಜಯ ದೇಶಮುಖ, ಜತ್ತ ಕನ್ನಡ ಹೋರಾಟಗಾರ ಡಾ. ಆರ್.ಕೆ.ಪಾಟೀಲ, ಸುಭಾಷ ಬೆಳ್ಳುಬ್ಬಿ, ಸೊಲ್ಲಾಪುರ ಜಿಲ್ಲಾ ಪಂ. ಮಾಜಿ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ಜಿಲ್ಲಾ ಪಂ. ವಿಪಕ್ಷ ನಾಯಕ ಆನಂದ ತಾನವಡೆ, ಅಕ್ಕಲಕೋಟ ತಾಲೂಕು ಪಂ.ಅಧ್ಯಕ್ಷ ಆನಂದರಾವ ಸೋನಕಾಂಬಳೆ, ಅಭಿನಂದನ ಗಾಂಧಿ, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪಿರ ವಾಲಿಕಾರ, ಜಿಲ್ಲಾ ಶಿಕ್ಷಣಾಧಿಕಾರಿ ಕಿರಣ ಲೋಹಾರ, ನಗರಸೇವಕ ಮಿಲನ ಕಲ್ಯಾಣಶೆಟ್ಟಿ, ಕಾಂತು ಧನಶೆಟ್ಟಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಪಾಲ್ಗೋಳ್ಳಲಿದ್ದಾರೆ. 

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ ಇವುಗಳ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ ಮೇ ೨೭ ರಂದು ಅಕ್ಕಲಕೋಟೆಯಲ್ಲಿ ಆಯೋಜಿಸಲಾಗಿದ್ದು, ಉತ್ಸವದಲ್ಲಿ ಗಡಿಭಾಗದ ಕನ್ನಡ ಸಂಘ-ಸಂಸ್ಥೆಗಳು, ಕನ್ನಡ ಹೋರಾಟಗಾರರು, ಸಾಹಿತಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ತರಬೇಕು. -ಮಲಿಕಜಾನ್ ಶೇಖ ಅಧ್ಯಕ್ಷರು, ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here