ಸಮಾಜದಲ್ಲಿ ಮಹಿಳಾ ವಿರೋಧಿ ಮೌಲ್ಯಗಳು ಹೆಚ್ಚುತ್ತಿವೆ: ನ್ಯಾಯವಾದಿ ನೀವಾ ಚಿಮಕೋಡ್

0
35

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮ್ಮೇಳನ

ಕಲಬುರಗಿ: “ಮಹಿಳೆಯರು ಹಿಂದಿಗಿಂತಲೂ ಹೆಚ್ಚು ಐಕ್ಯತೆಯಿಂದ ಸಂಘಟಿತರಾಗುವ ಅವಶ್ಯಕತೆ ಇದೆ. ಸಮಾಜದಲ್ಲಿ ಮಹಿಳಾ ವಿರೋಧಿ ಮೌಲ್ಯಗಳು ಹೆಚ್ಚುತ್ತಿವೆ. ನಾವೆಲ್ಲರೂ ಮಹಿಳಾ ಚಳುವಳಿಯನ್ನು ಬಲಗೊಳಿಸೋಣ.” ಎಂದು ಹೈಕೋರ್ಟ್ ವಕೀಲರಾದ ನೀವಾ ಚಿಮಕೋಡ್ ಹೇಳಿದರು.

ಅವರು ಭಾನುವಾರ ನಗರದ ಕನ್ನಡ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದರು. “ಮಹಿಳೆಯರು ಜಾಗತಿಕ ದೃಷ್ಟಿಕೋನ ಬೆಳೆಸಿಕೊಂಡು ಸಂಘಟನೆ ಕಟ್ಟಿಕೊಳ್ಳಬೇಕು. ಆರ್ಥಿಕ ಸ್ವಾವಲಂಬನೆಯ ಜೊತೆಗೆ ಸ್ವಾಭಿಮಾನದ ಬದುಕು ಕೊಟ್ಟಕೊಳ್ಳಬೇಕು” ಎಂದು ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಮೀನಾಕುಮಾರಿ ಎಂದು ಕರೆ ನೀಡಿದರು.

Contact Your\'s Advertisement; 9902492681

ಇದನ್ನೂ ಓದಿ: ಸುರಪುರ: ಕಸಾಪ ಪದಾಧಿಕಾರಿಗಳ ಪದಗ್ರಹಣ – ನಾಲ್ಕು ಕೃತಿಗಳ ಲೋಕಾರ್ಪಣೆ

ಅವರು “ದೇಶದಲ್ಲಿ ಕೋಮುವಾದಕ್ಕೆ ಪ್ರಭುತ್ವವೇ ನೀರೆರೆದು ಬೆಳೆಸುತ್ತಿರುವುದರಿಂದ ಮಹಿಳೆಯರು ದಲಿತರು ಅಲ್ಪಸಂಖ್ಯಾತರು ಮತ್ತು ಸಮಸ್ತ ಶ್ರಮಿಕ ವರ್ಗವು ಆತಂಕದ ದಿನಗಳನ್ನು ಎದುರಿಸುತ್ತಿದ್ದಾರೆ. ಬೆಲೆಯೇರಿಕೆ, ನಿರುದ್ಯೋಗವು ಮಹಿಳೆಯರ ಬದುಕು ನುಂಗಿ ನೊಣೆಯುತ್ತಿವೆ. ಜನತೆಯ ದಿನನಿತ್ಯದ ಸಮಸ್ಯೆಗಳನ್ನು ಮರೆಮಾಚಲು ಕೋಮುದ್ವೇಷ ಹೆಚ್ಚಿಸುವುದಕ್ಕೆ ಸರಕಾರವೇ ಮುಂದಾಗಿದೆ. ಇದರಿಂದಾಗಿ ಭಾರತದ ಸಮಗ್ರತೆ ಐಕ್ಯತೆ ಮತ್ತು ಸೌಹಾರ್ದತೆಗೆ ಧಕ್ಕೆ ಬರುತ್ತಿದೆ. ಮಹಿಳಾ ವಿರೋಧಿ ಧೋರಣೆಗಳು ಬಲಗೊಳ್ಳಲು ಸರಕಾರದ ಮತ್ತು ಸಮಾಜದ ಇಂತಹ ಧೋರಣೆಗಳೇ ಕಾರಣವಾಗಿವೆ. ಆದ್ದರಿಂದ ಮಹಿಳೆಯರು ಒಕ್ಕಟ್ಟಾಗುವ ಜರೂರಿ ಇದೆ. ಭಾವೈಕ್ಯತೆಗಾಗಿ ಮಹಿಳಾ ಸಮಾನತೆಗಾಗಿ ಸ್ಪಷ್ಟ ನೋಟ ದಿಟ್ಟ ಹೆಜ್ಜೆ ಇಡುವಲ್ಲಿ ಜನವಾದಿ ಮಹಿಳಾ ಸಂಘಟನೆಯು ಮುಂಚೂಣಿಯಲ್ಲಿದೆ” ಎಂದು ಸಂಘಟನೆಯ ನಾಯಕಿರಾದ ಕೆ ನೀಲಾ ಹೇಳಿದರು.

ಸಮ್ಮೇಳನದಲ್ಲಿ ಸೌಭಾಗ್ಯಮ್ಮ, ಬಸ್ಸಮ್ಮ ಬಳೂರ್ಗಿ, ಜಯಶ್ರೀ ಬೆಣ್ಣೂರ, ಶಶಿಕಲಾ ಕಡಗಂಚಿ, ಅನ್ನಪೂರ್ಣ ಮುಂತಾದವರು ಮಾತನಾಡಿದರು.

ಇದನ್ನೂ ಓದಿ: ಕಾವ್ಯಗಳಲ್ಲಿ ಸಾಮಾಜಿಕ ತುಡಿತ ಇರಲಿ: ಧನ್ನಿ

ಚಂದಮ್ಮ ಗೋಳಾ , ಉಪಾಧ್ಯಕ್ಷ ಜೆಎಂಎಸ್ ಇವರು ಧ್ವಜಾರೋಹಣ ನೆರವೇರಿಸಿದರು. ಪದ್ಮಿನಿ ಕಿರಣಗಿ ಇವರು ಎಲ್ಲರನ್ನೂ ಸ್ವಾಗತಿಸಿದರು. ಜಗದೇವಿ ನೂಲಕರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ “ಜನವಾದಿ ಮಹಿಳಾ ಸಂಘಟನೆಯು  ಕಳೆದ ನಲವತ್ತು ವರ್ಷದಿಂದ ದೇಶದ ಸಮಗ್ರ ಮಹಿಳೆಯರ ನಡುವೆ ನಿರಂತರ ಕೆಲಸ ಮಾಡುತ್ತಿದೆ. ವರ್ಗ ವರ್ಣ ಲಿಂಗ ಜಾತಿಯ ತಾರತಮ್ಯವನ್ನು ವಿರೋಧಿಸಿ ಎಲ್ಲ ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿಯೂ 1989 ರಲ್ಲಿ ಆರಂಭಗೊಂಡ ಜನವಾದಿ ಮಹಿಳಾ ಸಂಘಟನೆಯು ಜಿಲ್ಲೆಯಾದ್ಯಂತ ಕೆಲಸ ಮಾಡುತ್ತಿದೆ. ಉದ್ಯೋಗ ಖಾತ್ರಿಯ ಅನುಷ್ಠಾನಕ್ಕಾಗಿ, ನಗರಕ್ಕೂ ಉದ್ಯೋಗ ಖಾತ್ರಿ ವಿಸ್ತರಣೆಗಾಗಿ, ವರದಕ್ಷಿಣೆ ವಿರೋಧವಾಗಿ, ಬಾಲ್ಯವಿವಾಹ ತಡೆಗಾಗಿ, ಎಲ್ಲ ರೀತಿಯ ದೌರ್ಜನ್ಯದ ವಿರುದ್ದ ಜನವಾದಿ ದನಿಯೆತ್ತುತ್ತಿದೆ. ಈಗ ಇದೇ ಆಗಸ್ಟ್ 1,2, ಮತ್ತು3 ರಂದು ರಾಜ್ಯ ಸಮ್ಮೇಳನವನ್ನು ಇಲ್ಲಿಯೇ ನಡೆಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಮೂರು ವರ್ಷದ ಸಂಘಟನಾ ವರದಿಯನ್ನು ನಂದಾದೇವಿ ಮಂಗೊಂಡಿ   ಮಂಡಿಸಿದರು. ವರದಿಯ ಮೇಲೆ ಚರ್ಚೆ ನಡೆದು ಅಂಗೀಕಾರ ಮಾಡಲಾಯಿತು. ಹುತಾತ್ಮ ಸ್ಥಂಭಕ್ಕೆ ನಮನ ಸಲ್ಲಿಸಿ ಸಮ್ಮೇಳನದ ಕಲಾಪಗಳು ಆರಂಭವಾದವು. ಕಾರ್ಯಕ್ರಮದ ನಿರ್ವಹಣೆಯನ್ನು ಲವಿತ್ರಾ ವಸ್ತ್ರದ್ ಮಾಡಿದರು. ಎಸ್ ಎಫ್ ಐ ನ ಸುಜಾತಾ, ಪ್ರಿಯಾಂಕಾ ಮಾವಿನಕರ್, ಕಾಶಿಬಾಯಿ, ಮಹಾಲಕ್ಷ್ಮಿ, ನಂದಾ ಮುಂತಾದವರು ಕ್ರಾಂತಿ ಗೀತೆ ಹಾಡಿದರು.  ಸಮ್ಮೇಳನವು 25 ಜನರ ನೂತನ ಜಿಲ್ಲಾ ಸಮಿತಿಯ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಜಿಟಿಜಿಟಿ ಮಳೆ: ಮಸೀದಿಗಳಲ್ಲೇ ಈದ್ ನಮಾಜ್

ಚಂದಮ್ಮ ಗೋಳಾ ಅಧ್ಯಕ್ಷರಾಗಿ, ಪದ್ಮಿನಿ ಕಿರಣಗಿ ಕಾರ್ಯದರ್ಶಿಯಾಗಿ, ಜಗದೇವಿ ನೂಲಕರ್ ಖಜಾಂಚಿಯಾಗಿ, ಡಾ.ಮೀನಾಕ್ಷಿ ಬಾಳಿ, ಡಾ.ಶಾಂತಾ ಮಠ, ಸೌಭಾಗ್ಯಮ್ಮ, ಬಸ್ಸಮ್ಮ ಬಳೂರ್ಗಿ ಉಪಾಧ್ಯಕ್ಷರಾಗಿ, ನಂದಾದೇವಿ ಮಂಗೊಂಡಿ, ಸುಗಂಧ ಮಾವಿನಕರ್, ಶಹನಾಜ್ ಅಖ್ತರ್, ಅನ್ನಪೂರ್ಣ, ಸಹಕಾರ್ಯದರ್ಶಿಯಾಗಿ ಆಯ್ಕೆಯಾದರು. ಗೆಲುವು ನಮ್ಮದು ಹಾಡಿನೊಂದಿಗೆ ಸಮ್ಮೇಳನಕ್ಕೆ ತೆರೆ ಎಳೆಯಲಾಯಿತು. ಸಮ್ಮೇಳನದಲ್ಲಿ ಜಿಲ್ಲೆಯಾದ್ಯಂತ ಆಯ್ದ 300 ಪ್ರತಿನಿಧಿಗಳು ಭಾಗವಹಿಸಿದರು.

ಇದನ್ನೂ ಓದಿ: ಐದು ಗಂಟೆಗೆ 55 ಅಭಿಷೇಕ, ಮಹಾಮಂಗಳಾರತಿ ಪೂಜೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here